ಜನ್ಮ ನೀಡಿದ ರಾಷ್ಟ್ರವೇ ಮೊದಲು’ ಮತ್ತು “ಜನ ಸೇವೆಯೇ ಜನಾರ್ದನ ಸೇವೆ’ ಎಂಬುದನ್ನು ನನಗೆ ಆರ್‌ಎಸ್‌ಎಸ್ ಕಲಿಸಿಕೊಟ್ಟಿತು. ಹೀಗಾಗಿ ನನ್ನ ಬದುಕಿನ ಮೂಲ ಉದ್ದೇಶವನ್ನು ಕಲಿಸಿದ್ದು ಆರ್‌ಎಸ್ಎಸ್ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಅವರು ಅಮೆರಿಕದ ಪಾಡ್‌ಕಾಸ್ಟರ್, ಎ.ಐ. ಸಂಶೋಧಕ ಲೆಕ್ಸ್ ಫ್ರಿಡ್ಮಿನ್ ಜತೆಗಿನ 3 ಗಂಟೆಗಳ ಸುದೀರ್ಘ ಸಂವಾದದಲ್ಲಿ ಮೋದಿ ತಮ್ಮ ಬಾಲ್ಯದಿಂದ ಪ್ರಧಾನಿಯಾಗುವವರೆಗಿನ ಏಳುಬೀಳಿನ ಜೀವನ ಚರಿತ್ರೆಯನ್ನು ಮೋದಿ ಹಂಚಿಕೊಂಡಿದ್ದಾರೆ. ನಮ್ಮ ಹಳ್ಳಿಯಲ್ಲಿ ಆರೆಸ್ಸೆಸ್‌ನ 1 ಶಾಖೆಯಿತ್ತು. ಆಟವಾಡುವುದಕ್ಕಾಗಿ ಅಲ್ಲಿಗೆ ಹೋಗುತ್ತಿದ್ದೆ. ಅಲ್ಲಿ ಹಾಡುತ್ತಿದ್ದ ದೇಶಭಕ್ತಿ ಗೀತೆಗಳು ನನ್ನಲ್ಲಿ ಪ್ರಭಾವ ಬೀರಿದವು. ದಿನ ಕಳೆದಂತೆ ನಾನು ಆರೆಸ್ಸೆಸ್‌ನ ಭಾಗವಾದೆ. ಏನೇ ಮಾಡಿದರೂ ದೇಶಕ್ಕೆ ಒಳಿತು ಮಾಡುವ ಉದ್ದೇಶ ನಿಮ್ಮಲ್ಲಿರಬೇಕು ಎಂಬುದನ್ನು ಆರೆಸ್ಸೆಸ್ ಕಲಿಸಿತು ಎಂದರು.
ಈಗ ಈ ಸಂಸ್ಥೆ ತನ್ನ 100ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ವಿಶ್ವದಲ್ಲಿ ಮತ್ಯಾವುದೇ ಸಂಸ್ಥೆ ಇಷ್ಟೊಂದು ಹಿಂಬಾಲಕರನ್ನು ಹೊಂದಿರುವುದನ್ನು ನಾನು ನೋಡಿಲ್ಲ. ರಾಷ್ಟ್ರವೇ ಮೊದಲು ಎಂಬುದನ್ನು ಈ ಸಂಘಟನೆ ಕಲಿಸುತ್ತದೆ. ಜನರಿಗೆ ಸೇವೆ ಮಾಡುವುದು ದೇವರಿಗೆ ಸೇವೆ ಮಾಡಿದಂತೆ ಎಂಬುದನ್ನು ಆರ್‌ಎಸ್‌ಎಸ್ ನನಗೆ ಕಲಿಸಿತು. ಹೀಗಾಗಿ ಪ್ರಧಾನ ಸೇವಕನಾಗಿ ನಾನು ಜನರ ಸೇವೆ ಮಾಡುತ್ತಲೇ ಇದ್ದೇನೆ ಎಂದರು.
ಆರ್.ಎಸ್.ಎಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಇಲ್ಲಿದೆ ಮಾಹಿತಿ ಓದಿ
