ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಅಂಗವಾಗಿ ಮಾ.16ರಂದು ಶ್ರೀ ವಿಷ್ಣುಮೂರ್ತಿ ದೈವ,ಶ್ರೀ ಚಾಮುಂಡಿಯಮ್ಮ ಶ್ರೀ ಗುಳಿಗ ದೈವದ ಕೋಲ ನಡೆಯಿತು.ಸಂಜೆ ಕೈವೀದ್ ನಂತರ ಶ್ರೀ ವಯನಾಟ್ ಕುಲವನ್ ಹಾಗೂ ಸಹಪರಿವಾರ ದೈವಗಳಿಗೆ ಕೂಡಲಾಯಿತು.ಮಾ.17ರಂದು ಶ್ರೀ ಕಾರ್ನರ್ ದೈವದ ವೆಳ್ಳಾಟಂ,ಕೊರಚ್ಚನ್ ದೈವದ ವೆಳ್ಳಾಟಂ,ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್ ನಡೆಯಿತು.ನಂತರ ಶ್ರೀ ವಿಷ್ಣುಮೂರ್ತಿ ದೈವಕ್ಕೆ ಕೂಡಲಾಯಿತು.ತದನಂತರ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಿತು.ಕರ್ನಾಟಕ ಹಾಗೂ ಕೇರಳ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಅರಂಬೂರು : ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ದೈವಂಕಟ್ಟು ಮಹೋತ್ಸವ
