ಭೂಮಿಗೆ ಹತ್ತಿರವಾಗುತ್ತಿರೋ ಸುನೀತಾ ವಿಲಿಯಮ್ಸ್
ಬರೋಬ್ಬರಿ 9 ತಿಂಗಳ ಬಳಿಕ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ ಮತ್ತು ಬುಚ್ ವಿಲ್ಲೋರ್ ಇಂದು ಭೂಮಿಯತ್ತ ಹೊರಟಿದ್ದಾರೆ. ಸ್ಪೇಸ್‌ಎಕ್ಸ್ ಸಂಸ್ಥೆಯ ಸಂಸ್ಥಾಪಕ ಎಲೋನ್ ಮಸ್ಕರ್, ‘ಸ್ಪೇಸ್‌ಎಕ್ಸ್ ಡ್ರಾಗನ್ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕ್ ಆಗಿದೆ’ ಎಂದು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಕ್ರೂ-10 ಸ್ಪೇಸ್‌ಎಕ್ಸ್ ಕ್ರೂ ಡ್ರಾಗನ್ ಕ್ಯಾಪ್ಸುಲ್ ಐಎಸ್‌ಎಸ್‌ಗೆ ತಲುಪಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತೀಯ ಕಾಲಮಾನ ಬುಧವಾರ (ಮಾ. 19) ಬೆಳಗ್ಗೆ 3.27ಕ್ಕೆ ಭೂಮಿಗೆ ಕಾಲಿಡಲಿದ್ದಾರೆ.
ಭೂಮಿಗೆ ಹತ್ತಿರವಾಗುತ್ತಿರೋ ಸುನೀತಾ ವಿಲಿಯಮ್ಸ್
