ಮದುವೆ ನಿಶ್ಚಯವಾಗಿದ್ದ ಯುವಕ ದಿಡೀರ್ ನಾಪತ್ತೆ

ಮದುವೆಯಾಗುವ ನಿಶ್ಚಯವಾಗಿದ್ದ ಬಾಳಿಲದ ಯುವಕ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.
ಬಾಳಿಲದ ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ ಪುತ್ರ ಹರೀಶ್ ರೈ ಎಂಬವರು ಕಾಣೆಯಾಗಿದ್ದು ಈ ಬಗ್ಗೆ ಅಣ್ಣ ವೆಂಕಪ್ಪ ರೈ ದೇರಂಪಾಲು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ತಮ್ಮ ಹರೀಶ್ ರೈ ಡಿ. (38) ಸುಮಾರು 13 ವರ್ಷಗಳಿಂದ ಮಹೀಂದ್ರಾ ಫೈನಾನ್ಸ್ ಪುತ್ತೂರು ಇಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ದೂರದ ಸಂಬಂಧಿಕರ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು.
ಮಾ.20 ರಂದು ಬೆಳಿಗ್ಗೆ 7:30 ಗಂಟೆಗೆ ಯುವತಿಯ ಮನೆಗೆ ಹೋಗಿ ಬಳಿಕ ಕೆಲಸಕ್ಕೆ ಹೋಗುವುದಾಗಿ ನನ್ನಲ್ಲಿ ತಿಳಿಸಿ ಮನೆಯಿಂದ ಬೈಕ್‌ ನಂಬ್ರ KA 21 E 4957 ರಲ್ಲಿ ತೆರಳಿ ವಾಪಸ್ ಸಂಜೆ 5:00 ಗಂಟೆಗೆ ಮನೆಗೆ ಬರಬೇಕಾದವರು ಸಂಜೆ 6:00 ಗಂಟೆಯಾದರೂ ಬಾರದೇ ಇದ್ದಾಗ ಯುವತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದೆ. ನನ್ನ ತಮ್ಮನಾದ ಹರೀಶನು ತಾನು ಮದುವೆಯಾಗಲಿರುವ ಯುವತಿಯ ಮನೆಗೆ ಬೆಳಿಗ್ಗೆ 8:00 ಗಂಟೆಗೆ ಹೋಗಿ ಆಕೆಯನ್ನು ತನ್ನ ಬೈಕ್ ನಲ್ಲಿ ಪುತ್ತೂರಿಗೆ ಕರೆದುಕೊಂಡು ಹೋಗಿ ಆಕೆಯನ್ನು ವಿಟ್ಲಕ್ಕೆ ಹೋಗುವ ಸಲುವಾಗಿ ಪುತ್ತೂರು ಬಸ್ ನಿಲ್ದಾಣದಲ್ಲಿ ಇಳಿಸಿ ತಾನು ಚಿನ್ನಾಭರಣ ಖರೀದಿ ಬಗ್ಗೆ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ಹೋಗಿರುವುದಾಗಿಯೂ, ಬಳಿಕ ಆಕೆಯು 12:00 ಗಂಟೆ ಬಳಿಕ ಹರೀಶ್ ನಿಗೆ ಕಾಲ್ ಮಾಡಿದಾಗ ಫೋನ್ ಸ್ವಿಚ್‌ ಆಫ್‌ ಆಗಿತ್ತು ಎಂದು ಆಕೆ ತಿಳಿಸಿದಳು. ಬಳಿಕ ನಾನು ಮಂಗಳೂರಿನಲ್ಲಿರುವ ನನ್ನ ಅಣ್ಣಂದಿರಿಗೆ, ಹರೀಶನ ಸಹೋದ್ಯೋಗಿಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಹರೀಶನ ಬಗ್ಗೆ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಆದರಿಂದ ಕಾಣೆಯಾಗಿರುವ ಹರೀಶ್ ರೈ ಯವರನ್ನು ಪತ್ತೆ ಹಚ್ಚಿ ಕೊಡಬೇಕು ಎಂದು ಅಣ್ಣ ವೆಂಕಪ್ಪ ರೈ ಯವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ರಿದ್ದಾರೆ.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
Scroll to Top