ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಸುಳ್ಯದ ವೆಬ್ ನ್ಯೂಸ್ ವೊಂದರ ವರದಿಗಾರ ಹಾಗೂ ಸಂಪಾದಕರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.20ರಂದು ರಾತ್ರಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ಧನುಷ್ ಪಿ.ಎಸ್. ಎಂಬಾತನು ಕಲ್ಲುಗುಂಡಿ ಕಡೆಗೆ ಮಾರುತಿ ಆಮ್ಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದವರೊಂದಿಗೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ಸುಳ್ಯದ ವೆಬ್‌ಸೈಟೊಂದು, ‘ಹಿಂದೂ ಹುಡುಗಿಯರ ಜತೆ ಅನ್ಯ ಕೋಮಿನ ಯುವಕರು; ಸಂಪಾಜೆ ತನಕ ತಡರಾತ್ರಿ ಕಾರನ್ನು ಬೆನ್ನಟ್ಟಿದ ಯುವಕ’ ಎಂಬ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿ ಕೋಮು ಸಾಮರಸ್ಯ ಕೆಡುವ ರೀತಿಯಲ್ಲಿ ಘಟನೆಯನ್ನು ಬಿಂಬಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುಳ್ಯದ ವೆಬ್ ನ್ಯೂಸ್ ಸಂಪಾದಕ,ವರದಿಗಾರನ ಮೇಲೆ ಪ್ರಕರಣ ದಾಖಲು














































