ಪರಸ್ಪರ ಪ್ರೀತಿಸಿ ಪ್ರೀತಿಯ ಫಲವಾಗಿ ಜನಿಸಿದ ಮಗುವನ್ನು ಸಮಾಜಕ್ಕೆ ಅಂಜಿ ಕಾಡಿನಲ್ಲಿ ಬಿಟ್ಟು ಸುಮ್ಮನಿದ್ದ ಬೆಳ್ತಂಗಡಿ ತಾಲೂಕಿನ ರಂಜಿತ್ ಗೌಡ ಹಾಗೂ ಸುಶ್ಮಿತಾ ಗೌಡ ಅವರು ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ, ಪವಿತ್ರ ನಡ ಗ್ರಾಮದ ಕುತ್ತೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದ ಸನ್ನಿಧಿಯಲ್ಲಿ ವಿವಾಹವಾಗಿದ್ದಾರೆ.
ಮಗು ಮಾತ್ರ ಇನ್ನೂ ತಂದೆ-ತಾಯಿಯ ಮಡಿಲು ಸೇರಿಲ್ಲ. ಪುತ್ತೂರಿನ ವಾತ್ಸಲ್ಯಧಾಮದಲ್ಲಿ. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರ ಆರೈಕೆಯಲ್ಲಿ ಬೆಳೆಯುತ್ತಿದೆ.
ಮಗುವನ್ನು ಮರಳಿ ಪಡೆಯಲು ಈ ನವದಂಪತಿಗಳು ಈಗ ಸಂಕಲ್ಪ ಮಾಡಿದ್ದಾರೆ. “ನಮ್ಮ ಮಗುವನ್ನು ಕಾನೂನು ಪ್ರಕಾರ ಹೋರಾಡಿ ವಾಪಸ್ ಪಡೆಯುತ್ತೇವೆ” ಎಂದು ಅವರು ಹೇಳಿದ್ದಾರೆ.
ಸತಿಪತಿಗಳಾದ ಬೆಳ್ತಂಗಡಿಯ ರಂಜಿತ್ ಗೌಡ ಹಾಗೂ ಸುಶ್ಮಿತಾ ಗೌಡ!
