ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ, ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ವ್ಯವಸ್ಥಾಪನ ಆಡಳಿತ ಕಾರ್ಯ ಸೇವಾ ಸಮಿತಿ ಟ್ರಸ್ಟ್ ಇದರ ನೇತೃತ್ವದಲ್ಲಿ ದೈವಗಳ ಕಾಲಾವಧಿ ನೇಮ ಜರಗಿತು.
ಗಣಪತಿ ಹೋಮ, ಸಂಜೆ ಶ್ರೀ ಗುಳಿಗ ದೈವದ ನೇಮ, ದೀಪಾರಾಧನೆ ನಡೆಯಿತು. ಬಳಿಕ ಶ್ರೀ ನಾಗಬ್ರಹ್ಮ ದೇವರಿಗೆ ಮಹಾಪೂಜೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ಶ್ರೀ ಮೊಗೇರ್ಕಳ ದೈವಗಳು ಗರೋಡಿ ಇಳಿದು, ಸತ್ಯದೇವತೆ ಶ್ರೀ ತನ್ನ ಮಾಣಿಗ ದೈವದ ನೇಮ, ಪಾತ್ರಿಗಳ ದರ್ಶನ ನಡೆಯಿತು. ಬೆಳಗ್ಗೆ ಪ್ರಸಾದ ವಿತರಣೆ, ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಕ್ಷೇತ್ರದ ಸಮಿತಿಯವರು, ಭಕ್ತರು ಉಪಸ್ಥಿತರಿದ್ದರು.
ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ, ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ದೈವಗಳ ಕಾಲಾವಧಿ ನೇಮ
