ಅಜ್ಜಾವರ : ಅರೆಭಾಷೆ ಜಾತಿ ಮತವನ್ನು ಮೀರಿ ಬೆಳೆಯುತ್ತಿದೆ, ಇದನ್ನು ಇನ್ನಷ್ಟು ವಿಸ್ತಾರಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.
ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ಶ್ರೀ ದೇವಿ ಭಗವತಿ ಮಂದಿರದ 27ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ಬಿಡುಗೊಂಡ ನೂತನ ಕ್ರತಿಗಳ ಬಗ್ಗೆ ಮಾತನಾಡಿದರು.
ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಭೀಮರಾವ್ ವಾಷ್ಟರ್ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಷ್ಟರ್ ಅವರು ಸ್ವಾಮೀಜಿಯವರು ಅನೇಕ ಬಡ ವಿದ್ಯಾರ್ಥಿ ಗಳಿಗೆ ಆಸರೆಯಾಗಿ ಅವರ ಬಾಳನ್ನು ಬೆಳಗಿದ್ದಾರೆ.ಅವರ ಸಮಾಜಮುಖಿ ಚಿಂತನೆ ಶ್ರೇಷ್ಠವಾದುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ರಷಿ ಸಖಿ ಮೋಹಿನಿ ಪೇರಡ್ಕ ಮಾತನಾಡಿ ಮಹಿಳೆಯರು ಸ್ವಾವಲಂಬಿಗಳಾದಾಗ ಸಮಾಜ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ವಾಮೀಜಿಯವರು ಬರೆದು ಪ್ರಕಟಿಸಿದ 220ನೇ ಕೃತಿ: ಸತ್ಯಂ ವದ ಧರ್ಮಂ ಚರ, 221ನೇ ಕೃತಿ: ತಮಸೋ ಮಾ ಜ್ಯೋತಿರ್ಗಮಯ ಗಳನ್ನು ಬಿಡುಗಡೆಗೊಳಿಸಲಾಯಿತು.
ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಕೋಳಿವಾಡ ಕಾರ್ಯಕ್ರಮ ನಿರೂಪಿಸಿದರು.ಆಶ್ರಮದ ಟ್ರಸ್ಟಿ ಶಂಕರ ಪೆರಾಜೆ ಸ್ವಾಗತಿಸಿ ವಂದಿಸಿದರು.ಟ್ರಸ್ಟಿ ಪ್ರಣವಿ ವರದಿ ವಾಚಿಸಿದರು.
ಬೆಳಿಗ್ಗೆ ಗಣಪತಿ ಪೂಜೆ, ನಂತರ ಶ್ರೀ ಸತ್ಯ ನಾರಾಯಣ ದೇವರ ಪೂಜೆ ನಡೆಯಿತು.ಬಳಿಕ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಅಡೂರು ಮತ್ತು ಬಳಗದವರಿಂದ ಭಜನಾ ಸತ್ಸಂಗ ನಡೆಯಿತು.
ಅರೆಭಾಷೆ ಜಾತಿ ಮತವನ್ನು ಮೀರಿ ಬೆಳೆಯುತ್ತಿದೆ : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ
