ಸುಳ್ಯದ ದೀನದಯಾಳ್ ಸಹಕಾರ ಸಂಘದ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ, ಸಹಕಾರ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ವನ್ ಜನಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಏ.16ರಂದು ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ತಹಶೀಲ್ದಾರ್ ಮಂಜುಳಾರವರುಭಾರತ್ ವನ್ ಜನಸಂಪರ್ಕ ಕೇಂದ್ರವನ್ನು ಉದ್ಘಾಟಿಸಿದದರು.ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಹಕಾರ ಕ್ಷೇತ್ರವೆಂದ ಕೂಡಲೇ ಮೊದಲು ನೆನಪಿಗೆ ಬರುವ ಜಿಲ್ಲೆಯೆಂದರೆ ಅದು ದ.ಕ. ಜಿಲ್ಲೆ. ಸಹಕಾರ ಪದ್ಧತಿಯಿಂದ ಕುಟುಂಬದ, ಊರಿನ ರಾಷ್ಟ್ರದ ಏಳಿಗೆಯಾಗುತ್ತದೆ ಎಂದರು.ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್.ದೀನ್ ದಯಾಳ್ ಸಹಕಾರ ಸಂಘದ ಅಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರರು ಮಾತನಾಡಿ ಅಂಬೇಡ್ಕರ್ ರವರ ಗುಣಗಾನ ಮಾಡಿದರೆ ಪ್ರಯೋಜನವಾಗುವುದಿಲ್ಲ. ಬದಲಾಗಿ ಅಂಬೇಡ್ಕರ್ ರವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿದರೆ ಮಾತ್ರ ಸಾಧನೆಯಾಗುತ್ತದೆ. ನಮ್ಮ ಸಹಕಾರಿ ಸಂಘ ಆರಂಭವಾಗಿ ಕೇವಳ ಮೂರು ತಿಂಗಳು ಕಳೆದಿದ್ದು ಹತ್ತು ಲಕ್ಷ ರೂ. ಡೆಪಾಸಿಟ್ ಸಂಗ್ರಹಿಸಲಾಗಿದೆ. ನಮ್ಮ ಸಂಘದಲ್ಲಿ ಜಾತಿಗೆ ಒತ್ತು ನೀಡುತ್ತೇವೆ ಎಂಬ ಭಾವನೆ ಕೆಲವರಲ್ಲಿದೆ ಸೊಸೈಟಿ ಎಲ್ಲ ವರ್ಗದವರಿಗೂ ಸೇವೆ ನೀಡಲಿದೆ” ಎಂದರು.ತಲಾ ಐದು ಜನ ಸದಸ್ಯರಾಗಿರುವ ಸ್ವಸಹಾಯ ಸಂಘ ರಚಿಸುತ್ತೇವೆ.ಸರಕಾರದಿಂದ ಬರುವ ಸೌಲಭ್ಯಗಳನ್ನು ಸೊಸೈಟಿಯ ಮೂಲಕ ಉಚಿತವಾಗಿ ಒದಗಿಸಿಕೊಡುತ್ತೇವೆ. ಇಡೀ ದ.ಕ.ಜಿಲ್ಲೆಗೆ ಸಂಘ ವಿಸ್ತರಣೆಯಾಗಲಿದೆ” ಎಂದು ಅಂಗಾರರು ಹೇಳಿದರು.ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಶುಭ ಹಾರೈಸಿದರು. ನೆಲ್ಲೂರು ಕೆಮ್ರಾಜೆ ಗ್ರಾಮದ ಚಿಗುರು ಸ್ವಸಹಾಯ ಸಂಘ, ಅಮರಮುನ್ನೂರು ಚಿಕ್ಕಿನಡ್ಕದ ದೀಪಾ ಸ್ವಸಹಾಯ ಸಂಘ ಮತ್ತು ಅಶ್ವಿನಿ ಸ್ವಸಹಾಯ ಸಂಘದ ಸದಸ್ಯರಿಗೆ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಹೂಗುಚ್ಛ ನೀಡಿ ಶುಭಹಾರೈಸಿದರು.ಸಂಘದ ನಿರ್ದೇಶಕರುಗಳಾದ ಶ್ರೀಮತಿ ವೇದಾವತಿ ಅಂಗಾರ, ಹರಿಶ್ಚಂದ್ರ ಹಾಸನಡ್ಕ, ಶುಭಲತಾ ಮಾತ್ರಮಜಲು, ಮಹಾಬಲ ಪಡುಬೆಟ್ಟು, ಕುಂಞ ಕಮಿತ್ತಿಲು, ಬಾಳಪ್ಪ ಕಳಂಜ, ರವಿ ಕೆಳಗಿನಬೀಡು ಉಪಸ್ಥಿತರಿದ್ದರು. ನಿರ್ದೇಶಕ ಜಗನ್ನಾಥ ಜಯನಗರ ಪ್ರಾರ್ಥಿಸಿ ಸ್ವಾಗತಿಸಿದರು. ನಿರ್ದೇಶಕ ಸಂದೀಪ್ ಪಂಜೋಡಿ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯದ ದೀನದಯಾಳ್ ಸಹಕಾರ ಸಂಘದ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ, ಭಾರತ್ ವನ್ ಜನಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಕಾರ್ಯಕ್ರಮ
