ಸುಳ್ಯ : ಶ್ರೀ ಗುರು ರಾಘವೆಂದ್ರ ಮಠದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಏ.21ಮತ್ತು 22ರಂದು ವೇ।ಮೂ। ಶ್ರೀಹರಿ ಎಳಚಿತ್ತಾಯ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಬೃಂದಾವನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಎಂ.ಎನ್. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಗುರು ರಾಘವೇಂದ್ರಾ ನುಗ್ರಹ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಇದನ್ನು ಡಾ| `ಆರ್.ಕೆ.ನಾಯರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
- ಎ.21ರಂದು ಬೆಳಗ್ಗೆ ಮಹಾಗಣಪತಿ ಹವನ, ಸಂಜೆ ಚೆಂಡೆ, ಡೋಲು, ವಾದ್ಯ, ಭಜನೆ, ಕುಣಿತ ಭಜನೆಯೊಂದಿಗೆ ಪಲ್ಲಕ್ಕಿಯಲ್ಲಿ ರಾಯರ ಪಟ್ಟಣ ಸವಾರಿ ನಡೆಯಲಿದೆ. ಎ. 22ರಂದು ವಿವಿಧ
ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಕಾಶ್ ಮೂಡಿತ್ತಾಯ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಡಾ| ಗಿರೀಶ ಭಾರದ್ವಾಜ, ಡಾ|ಲೀಲಾಧರ ಡಿ.ವಿ. ಬೃಂದಾವನ ಸೇವಾ ಟ್ರಸ್ಟ್‌ನ ಟ್ರಸ್ಟಿಸುಬ್ರಹ್ಮಣ್ಯ ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಂದಾವನ ಸೇವಾ ಚಾರಿಟೆಬಲ್ ಟ್ರಸ್ಟನ ಕಾರ್ಯದರ್ಶಿ ರಾಮ್ ಕುಮಾರ್ ಹೆಬ್ಬಾರ್, ಖಜಾಂಜಿ ಮುರಳೀಕೃಷ್ಣ ಡಿ.ಆರ್., ಟ್ರಸ್ಟಿ ರಮೇಶ್ ಕುಮಾರ್, ಶಿವಳ್ಳಿ ಸಂಪನ್ನದ ಗೌರವಾಧ್ಯಕ್ಷ ಗಂಗಾಧರ ಮಟ್ಟಿ ಉಪಸ್ಥಿತರಿದ್ದರು.