26 ಪ್ರವಾಸಿಗರನ್ನು ಹೀನ ಕ್ರತ್ಯ ಎಸಗಿ ಕೊಂದು ಹಾಕಿದ ಉಗ್ರಗಾಮಿಗಳ ಪ್ರತಿಕಾರಕ್ಕೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಬುಧವಾರ ಉಗ್ರರ ಇಬ್ಬರು ಶಾಸ್ತ್ರಧಾರಿ ಉಗ್ರರನ್ನು ಹೊಡೆದುರುಳಿಸಿದೆ.
ಇದರ ಮೂಲಕ ಉಗ್ರಾರ ಒಳ ನುಸುಳಿಕೆಯನ್ನು ಸೇನೆ ತಡೆದಿದೆ.
ಚಿನಾರ್ ಕಾಪ್ಸ್-ಇಂಡಿಯನ್ ಆರ್ಮಿ ಎಕ್ಸ್ ಹ್ಯಾಂಡಲ್ ಪೋಸ್ಟ್‌ನಲ್ಲಿ ಕಾರ್ಯಾಚರಣೆಯನ್ನು ದೃಢಪಡಿಸಿದೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಬಾರಾಮುಲ್ಲಾದ ಉರಿ ನಾಲಾದಲ್ಲಿರುವ ಸರ್ಜೀವನ್ನ ಸಾಮಾನ್ಯ ಪ್ರದೇಶದ ಮೂಲಕ ಮೂವರು ಉಗ್ರರು ಒಳನುಸುಳಲು ಪ್ರಯತ್ನಿಸಿದ್ದಾರೆ ಎಂದು ಸೇನೆ ತಿಳಿಸಿದೆ.
ಇಬ್ಬರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ
