ಪಂಚಾಯತ್ ರಾಜ್ ನ ವ್ಯವಸ್ಥೆ ಯ ಬಗ್ಗೆ ಆಳವಾದ ಅನುಭವ ಹೊಂದಿ, ಜನಸ್ನೇಹಿ,ಅಧಿಕಾರಿಯಾಗಿ ಜನರಿಂದ ಮನ್ನಣೆ ಗಳಿಸಿ ಕೆಲ ವರ್ಷಗಳ ಹಿಂದೆ ಅಕಾಲಿಕವಾಗಿ ನಿಧನ ರಾದ ಸುಬ್ರಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಯು. ಡಿ. ಶೇಖರ್ ರವರ 58ನೇ ಜನ್ಮದಿನವನ್ನು ಅವರ ಮನೆಯವರು ಪ್ರತಿ ವರ್ಷ ವೂ ಸಮಾಜಕ್ಕೆ ಮಾದರಿ ಯಾಗಿ ಆಚರಿಸುತ್ತಿದ್ದು ಈ ವರ್ಷ ಯು. ಡಿ. ಶೇಖರ್ ರವರ ಶ್ರೀಮತಿಯವರಾದ ಗೀತಾ ಶೇಖರ್ ರವರು ಕರ್ತವ್ಯ ನಿರ್ವಹಿಸುತ್ತಿರುವ ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಪ ಮನೆ ಪೆರಿಯಡ್ಕ ದ ತೇಜಕ್ಷಾ, ಮತ್ತು ಹರೀಶ್.ರಾಮನಗರ ಮನೆಯ ವಿನೋದ್ ಎಂಬ ವಿಶಿಷ್ಟ ಚೇತನರೀಗೆ ವೈದ್ಯಕೀಯ ವೆಚ್ಚಕ್ಕೆ ಮತ್ತು ಆರ್ಥಿಕವಾಗಿ ಹಿಂದುಳಿದ ಹರಿಹರದ ಶೇಖರ್ ರವರ ಎರಡು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನೀಡುವುದರ ಮೂಲಕ ಸ್ಮರಣೀಯವಾಗಿ ಜನ್ಮದಿನಾಚರಣೆ ಆಚರಿಸಿದರು.
ದಿ l ಯು. ಡಿ. ಶೇಖರ್ 58ನೇ ಜನ್ಮದಿನಾಚರಣೆ ಪ್ರಯುಕ್ತ ವಿಶಿಷ್ಟ ಚೇತನರು ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾರ್ಥಿಗಳಿಗೆ ಧನ ಸಹಾಯ
