ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮನೆಯ
ಮೇಲೆ ಮೊದಲು ಬಾಂಬ್ ದಾಳಿ ನಡೆಸಬೇಕು ಎಂದು ಹೇಳಿಕೆ ನೀಡಿದ್ದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಯುವಕನನ್ನು ಬೆಂಗಳೂರಿನಲ್ಲಿ ಬಂಡೇಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸುಭಾಷ್‌ನಗರ ನಿವಾಸಿ ನವಾಜ್ (26) ಬಂಧಿತ ಆರೋಪಿ.ಬಳಿಕ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು.
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಭಾರತ ಮತ್ತು ಪಾಕ್ ಮಧ್ಯೆ ಯುದ್ಧ ನಡೆಯುತ್ತಿದೆ. ಜನರೆಲ್ಲ ನೆಮ್ಮದಿಯಿಂದ ಇರುವಾಗ ಈ ಪರಿಸ್ಥಿತಿ ಸೃಷ್ಟಿಸಿದ್ದು ಮೋದಿ. ಮೊದಲು ಮೋದಿ ಮನೆಯ ಮೇಲೆ ಬಾಂಬ್ ಹಾಕಬೇಕು; ಆದರೆ ಇನ್ನೂ ಯಾಕೆ ಬಾಂಬ್ ಹಾಕಿಲ್ಲ? ಎಂದು ನವಾಜ್ ವೀಡಿಯೊದಲ್ಲಿ ಹೇಳಿದ್ದ. ಬಳಿಕ ಅದನ್ನು ಪಬ್ಲಿಕ್ ಸರ್ವೆಂಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಂಡೇಪಾಳ್ಯ ಠಾಣೆ ಪೊಲೀಸರು ಆರೋಪಿಯ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ನರೇಂದ್ರ ಮೋದಿಯವರ ಮನೆ ಮೇಲೆ ಬಾಂಬು ದಾಳಿ ನಡೆಸಬೇಕೆಂದು ಹೇಳಿಕೆ ನೀಡಿದ ಆರೋಪಿಯ ಬಂಧನ
