ಅರಂತೋಡು, ಜೂ. 7 : ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ವಿಜಯೋತ್ಸವ ಮತ್ತು ನಿವೃತ್ತ ಯೋಧರಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮವು ಅಕ್ಷಯ ಕಲಾಮಂದಿರದಲ್ಲಿ ನಡೆಯಿತು.
ನಿವೃತ್ತ ಯೋಧರನ್ನು ಆರತಿ ಎತ್ತಿ ಹಣೆಗೆ ಸಿಂಧೂರವನ್ನಿಟ್ಟು ಅದ್ಧೂರಿಯಿಂದ ಬರ ಮಾಡಿಕೊಂಡರು, ಬಳಿಕ ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ, ದೇಶ ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ನಿವ್ರತ್ತ ಸೈನಿಕರಾದ ಅಡ್ಡಂತಡ್ಕ ದೇರಣ್ಣ ಗೌಡ, ಲೆಫ್ಟಿನೆಂಟ್ ಕಮಾಂಡರ್ ಶ್ರೀಕಾಂತ್, ನಿವೃತ್ತ ಯೋಧ ಕೆ. ಪಿ ಜಗದೀಶ್ ತಮ್ಮ ಸೈನಿಕ ವ್ರತ್ತಿ ಜೀವನದ ಬಗ್ಗೆ ಮಾತನಾಡಿದರು. ಬಳಿಕ ಈ ಮೂವರು ಸೈನಿಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಸೀಮೆ ಶ್ರೀ ತೊಡಿಕಾನ ಸೀಮೆ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ, ಅರಂತೋಡು ಗ್ರಾಂ.ಪಂ ಅಧ್ಯಕ್ಷ ಕೇಶವ ಅಡ್ತಲೆ, ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಯು ಎಂ, ತೋಡಿಕಾನ ದೇವಸ್ಥಾನ ಕಚೇರಿ ವ್ಯವಸ್ಥಾಪಕರು ಆನಂದ ಕಲ್ಲಗದ್ದೆ,ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ, ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ, ಭಾರತಿ ಪುರುಷೋತ್ತಮ ಗ್ರಾಂ.ಪಂ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು, ನಿವೃತ್ತ ಯೋಧರು, ಶಾಲಾ ಮುಖ್ಯೋಪಾಧ್ಯಾಯರು, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಅರಂತೋಡು ತೊಡಿಕಾನ ಕೃಷಿ ಪತ್ತಿನ ಆಡಳಿತ ಮಂಡಳಿ ನಿರ್ದೇಶಕರು ಗ್ರಾಂ.ಪಂ ಸದಸ್ಯರು ಊರವರು ಉಪಸ್ಥಿತರಿದ್ದರು.
ತೊಡಿಕಾನ : ಅಪರೇಷನ್ ಸಿಂಧೂರ ವಿಜಯೋತ್ಸವ ಆಚರಣೆ,ನಿವೃತ್ತ ಯೋಧರಿಗೆ ಸನ್ಮಾನ



































