ಪೆರಾಜೆ ಗ್ರಾಮದ ಖಾಸಗಿ ತೋಟದಲ್ಲಿ ಬೀಡುಬಿಟ್ಟ ಒಂಟಿ ಕಾಡನೆಯನ್ನು ಕೊಡಗಿನ ಪೆರಾಜೆ ಗ್ರಾಮದಿಂದ ದ.ಕ ಜಿಲ್ಲೆಯ ತೊಡಿಕಾನ ಗ್ರಾಮಕ್ಕೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಮಂಗಳವಾರ ಅಟ್ಟಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಗಾರಕೋಡಿ ಮಾರ್ಗವಾಗಿ ಭಾಗಮಂಡಲ ಮೀಸಲು ಅರಣ್ಯಕ್ಕೆ ಓಡಿಸಲು ನಿರ್ಧಾರ ಮಾಡಲಾಗಿತ್ತು.ಆದರೆ ಆನೆ ತಾನು ಓಡಿದ ಪಥ ಬದಲಾದ ಕಾರಣ ಈ ನಿರ್ಧಾರದಂತೆ ನಡೆದಿಲ್ಲ ಎಂದು ತಿಳಿದು ಬಂದಿದೆ. ಗ್ರಾಮಸ್ತರು,ಸಾರ್ವಜನಿಕರು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಹಾಗೂ ಕಾರ್ಯಚರಣೆಗೆ ಸಹಕಾರ ನೀಡುವಂತೆ ವಲಯ ಅರಣ್ಯಧಿಕಾರಿಗಳು, ಸಂಪಾಜೆ ವಲಯ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಭಾಗಮಂಡಲದಲ್ಲಿರುವ ಕೊಡಗಿನಲ್ಲಿ ವಿಭಾಗ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡದವರು ಬಂದಿದ್ದು ಅವರ ಜೊತೆ ಬಾ.ಜ.ಪ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಕುಂಬಳಚೇರಿ ಮತ್ತು ಅನಿಲ್ ಕುಂಬಳಚೇರಿ, ನವೀನ ಕುಂಬಳಚೇರಿ, ಕುಸುಮಾಧರ ಕುಂಬಳಚೇರಿ ಹಾಗೂ ಬಾಬು ನಾಯ್ಕ ಪೆರಾಜೆ ಅವರು ಆನೆ ಓಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೆರಾಜೆ ಗಡಿದಾಟಿದ ಒಂಟಿ ಸಲಗ



































