ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕವು ಹಮ್ಮಿಕೊಂಡಿರುವ “ಚಿಣ್ಣರೊಂದಿಗೆ ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮದ ಒಂಬತ್ತನೇ ಕಾರ್ಯಕ್ರಮವು ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿರುವ ಕದಿಕಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿ ಮಕ್ಕಳಿಗೆ ಕತೆ ಹೇಳಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ರವೀಶ್ ಭಾಗವಹಿಸಿ ಮಕ್ಕಳಿಗೆ ಹಾಡು ಹಾಗೂ ಅಭಿನಯಗೀತೆಗಳನ್ನು ಹೇಳಿ ರಂಜಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನುಷಾ ಕೆ.ಎ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಸುಮಿತ್ರ ಬಿ ವಂದಿಸಿದರು. ಶ್ರೀಮತಿ ಪೂರ್ಣಿಮಾ ಜೆ ಸಹಕರಿಸಿದರು.
ಕದಿಕಡ್ಕ : “ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮ

















