Author name: Tejas

ಸುಳ್ಯ ಬಸ್ ಘಟಕಕ್ಕೆ ನೂತನ ಬಸ್ ಒದಗಿಸುವಂತೆ ಸಾರಿಗೆ ಸಚಿವರಿಗೆ ಸುಳ್ಯ ಶಾಸಕರ ಮನವಿ

ಬಸ್ ಘಟಕದಲ್ಲಿ ಬಸ್‌ಗಳು ಹಾಗೂ ಸಿಬ್ಬಂದಿಗಳ ಕೊರತೆ ಇರುವುದರಿಂದ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.​ಆದ್ದರಿಂದ ಸುಳ್ಯ ಬಸ್ ಘಟಕಕ್ಕೆ 10 ಹೊಸ ಬಸ್‌ಗಳನ್ನು ಮತ್ತು ಚಾಲಕ ಮತ್ತು ನಿರ್ವಾಹಕರನ್ನು ನೇಮಿಸಬೇಕೆಂದು ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಸಾರಿಗೆ ಸಚಿವರಿಗೆ ಮನವಿಯಲ್ಲಿ ಕೋರಿದ್ದಾರೆ .ಅದಕ್ಕೆ ಪ್ರತಿಯಾಗಿ ಸಚಿವರು ಇನ್ನು6 ತಿಂಗಳಿನಲ್ಲಿ ಸರಕಾರಕ್ಕೆ ಹೊಸಬಸ್ಸುಗಳು ಹಸ್ತಾಂತರವಾಗಲಿದ್ದು ನಂತರ ಬಸ್ಸುಗಳನ್ನು ಮತ್ತು ಸಿಬಂದಿಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಸುಳ್ಯ ಬಸ್ ಘಟಕಕ್ಕೆ ನೂತನ ಬಸ್ ಒದಗಿಸುವಂತೆ ಸಾರಿಗೆ ಸಚಿವರಿಗೆ ಸುಳ್ಯ ಶಾಸಕರ ಮನವಿ Read More »

ಆರೋಗ್ಯವಂತ ಯುವಜನತೆಯೇ ಸದೃಢ ಸಮಾಜದ ನಿರ್ಮಾಣಕ್ಕೆ ಬುನಾದಿ: ಡಾ. ಅನುರಾಧಾ ಕುರುಂಜಿ

ಸುಳ್ಯ: ಆರೋಗ್ಯವಂತ ಯುವಜನತೆಯೇ ಸದೃಢ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿದ್ದು, ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹಾಗೂ ವಲಯ ತರಬೇತುದಾರರಾದ ಡಾ. ಅನುರಾಧಾ ಕುರುಂಜಿ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಜ್ಜಾವರ ವಲಯ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಅಜ್ಜಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ. 3ರಂದು ಸುಳ್ಯದ

ಆರೋಗ್ಯವಂತ ಯುವಜನತೆಯೇ ಸದೃಢ ಸಮಾಜದ ನಿರ್ಮಾಣಕ್ಕೆ ಬುನಾದಿ: ಡಾ. ಅನುರಾಧಾ ಕುರುಂಜಿ Read More »

ನಾಲ್ಕೂರು ಗ್ರಾಮಸ್ಥರಿಂದ ಕಸ್ತೂರಿರಂಗನ್ ವರದಿ ವಿರುದ್ಧ ಪ್ರತಿಭಟನೆ

ಗುತ್ತಿಗಾರು : ಕಸ್ತೂರಿರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯಡಿ ಪರಿಸರ ಸೂಕ್ಷ್ಮ ವಲಯ ಘೋಷಣೆಯ ವಿರುದ್ಧ ನಾಲ್ಕೂರು ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಗುತ್ತಿಗಾರು ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪಂಚಾಯತ್‌ಗೆ ಆಕ್ಷೇಪಣಾ ಪತ್ರ ಸಲ್ಲಿಸಿದರು.ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ನಡೆದ ಹೋರಾಟವು ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಮುಂದುವರಿಯಲಿದೆ ಎಂದು ತಿಳಿಸಲಾಯಿತು. ಮಲೆನಾಡಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ರೈತರು

ನಾಲ್ಕೂರು ಗ್ರಾಮಸ್ಥರಿಂದ ಕಸ್ತೂರಿರಂಗನ್ ವರದಿ ವಿರುದ್ಧ ಪ್ರತಿಭಟನೆ Read More »

ನಿವೃತ್ತ ಸರ್ಕಾರಿ ನೌಕರರಿಗೆ ‘ಸಂಧ್ಯಾ ಕಿರಣ’ ನಗದುರಹಿತ ಆರೋಗ್ಯ ಯೋಜನೆ ಜಾರಿ

ರಾಜ್ಯ ಸರ್ಕಾರವು ನಿವೃತ್ತ ಸರ್ಕಾರಿ ನೌಕರರು ಹಾಗೂ ಕುಟುಂಬ ಪಿಂಚಣಿದಾರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ, ‘ಸಂಧ್ಯಾ ಕಿರಣ’ ನಗದುರಹಿತ ಆರೋಗ್ಯ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಿ ಆದೇಶ ಹೊರಡಿಸಿದೆ. 7ನೇ ವೇತನ ಆಯೋಗದ ಶಿಫಾರಸು ಮತ್ತು ನಿವೃತ್ತ ನೌಕರರ ಸಂಘದ ಮನವಿಯಂತೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ (AB-ArK) ಮಾದರಿಯಲ್ಲಿ ಈ ಯೋಜನೆ ಜಾರಿಯಾಗಲಿದೆ. 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ರಾಜ್ಯ ಸರ್ಕಾರಿ ನಿಯಮಿತ ಪಿಂಚಣಿದಾರರು, ಅವರ

ನಿವೃತ್ತ ಸರ್ಕಾರಿ ನೌಕರರಿಗೆ ‘ಸಂಧ್ಯಾ ಕಿರಣ’ ನಗದುರಹಿತ ಆರೋಗ್ಯ ಯೋಜನೆ ಜಾರಿ Read More »

ಸುಮಾ ಕೆ.ಎಸ್. ಅವರಿಗೆ ‘ವಚನ ಮಂದಾರ’ ರಾಜ್ಯ ಪ್ರಶಸ್ತಿ

ಬೆಂಗಳೂರು: ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ‘ವಚನ ಮಂದಾರ’ ರಾಜ್ಯ ಪ್ರಶಸ್ತಿಗೆ ಹೆಸರಾಂತ ಗಾಯಕಿ ಸುಮಾ ಕೆ.ಎಸ್. ಬಾಳಿಲ ಅವರು ಭಾಜನರಾಗಿದ್ದಾರೆ.ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಗಣ್ಯರು ಹಾಗೂ ಕಲಾ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.ಸುಮಾ ಕೆ.ಎಸ್. ಅವರು ಈ ಹಿಂದೆ ಪಂಡಿತ ಪುಟ್ಟರಾಜ ಗವಾಯಿ ಸ್ಮರಣಾರ್ಥದ ಕಲಾ ವಿಕಾಸ ಯುವಸಿರಿ ರಾಜ್ಯ ಪ್ರಶಸ್ತಿ, ರಾಜ್ಯ ಯುವ

ಸುಮಾ ಕೆ.ಎಸ್. ಅವರಿಗೆ ‘ವಚನ ಮಂದಾರ’ ರಾಜ್ಯ ಪ್ರಶಸ್ತಿ Read More »

ಎಡಮಂಗಲ : ಗ್ರಾಮ ಸಹಾಯಕ ಆತ್ಮಹತ್ಯೆ

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿರುವ ಯುವಕ ಆತ್ಮ ಹತ್ಯೆಮಾಡಿಕೊಂಡ ಘಟನೆ ವರದಿಯಾಗಿದೆ.ದೀಪಕ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಎಡಮಂಗಲದ ಪುಳಿಕುಕ್ಕು ನಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಎಡಮಂಗಲ : ಗ್ರಾಮ ಸಹಾಯಕ ಆತ್ಮಹತ್ಯೆ Read More »

ಸೆ. 6ರಂದು ಮಣಿಪಾಲದಲ್ಲಿ ಮುಕ್ತ ಚೆಸ್ ಸ್ಪರ್ಧೆ

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ವತಿಯಿಂದ ಅಫಿಲಿಯೆನ್ಸ್ ಟೆಕ್ನಾಲಜಿ, ಮಂಗಳೂರು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ 30ನೇ ಶ್ರೀ ನಾರಾಯಣ ಗುರು ಟ್ರೋಫಿ ಚೆಸ್ ಸ್ಪರ್ಧೆ ಸೆಪ್ಟೆಂಬರ್ 6ರಂದು ಮಣಿಪಾಲದ ಡಾ. ಟಿ.ಎಂ.ಎ. ಪೈ ಹಾಲ್‌ನಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ 7, 9, 11, 13, 17 ವರ್ಷ ವಯೋಮಿತಿಯ ವಿಭಾಗಗಳೊಂದಿಗೆ ಮುಕ್ತ ವಿಭಾಗದಲ್ಲಿಯೂ ಪಂದ್ಯಗಳು ನಡೆಯಲಿವೆ. ಪ್ರತಿ ವಿಭಾಗದಲ್ಲಿ 20 ಬಹುಮಾನಗಳನ್ನು ನೀಡಲಾಗುತ್ತಿದ್ದು, ಒಟ್ಟು ₹25,500 ನಗದು ಬಹುಮಾನ ವಿತರಿಸಲಾಗುವುದು.

ಸೆ. 6ರಂದು ಮಣಿಪಾಲದಲ್ಲಿ ಮುಕ್ತ ಚೆಸ್ ಸ್ಪರ್ಧೆ Read More »

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದಿಂದ ನೂತನ ಸಬ್ ಇನ್ಸ್‌ಪೆಕ್ಟರ್‌ಗೆ ಸ್ವಾಗತ

ಸುಳ್ಯ: ಸುಳ್ಯ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ಉದಯ ರವಿ ಅವರನ್ನು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸಂಘದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್. ಅವರು ಸಬ್ ಇನ್ಸ್‌ಪೆಕ್ಟರ್ ಉದಯ ರವಿ ಅವರಿಗೆ ಹೂಗುಚ್ಛ ನೀಡಿ ಶುಭಾಶಯಗಳನ್ನು ಕೋರಿದರು. ಬಳಿಕ ಸಹೋದರತೆಯ ಸಂಕೇತವಾದ ರಕ್ಷಾ ಬಂಧನವನ್ನು ಕಟ್ಟಿ, ಸಹೋದರತೆಯ ಬಾಂಧವ್ಯವನ್ನು ಸಾರಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದಿಂದ ನೂತನ ಸಬ್ ಇನ್ಸ್‌ಪೆಕ್ಟರ್‌ಗೆ ಸ್ವಾಗತ Read More »

ಸೆ.8ರಂದು ಸುಳ್ಯದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ

ಸುಳ್ಯ: ವಿಶ್ವ ಹಿಂದೂ ಪರಿಷತ್ ಸಂಘಟನೆಯ ಸ್ಥಾಪನಾ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಸುಳ್ಯದಲ್ಲಿ ಹಿಂದೂ ಬಾಂಧವರನ್ನೊಳಗೊಂಡ ಅದ್ದೂರಿ ಮೊಸರು ಕುಡಿಕೆ ಉತ್ಸವ ಸೆ.8ರಂದು ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ತಿಳಿಸಿದರು. ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಗೋಮಾತೆಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಬಜರಂಗದಳದ ಯುವಕರ ತಂಡ ಉತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದು, ದುರ್ಗಾ ವಾಹಿನಿಯೂ ಕೈಜೋಡಿಸಲಿದೆ. ವಿಶ್ವ

ಸೆ.8ರಂದು ಸುಳ್ಯದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ Read More »

ಭ್ರಷ್ಟಾಚಾರ ಆರೋಪ: ಎಸ್‌ಐಟಿ ಅಧಿಕಾರಿ ವಿನೋದ್ ರೆಡ್ಡಿ ಸೇರಿ ಮೂವರು ಅಮಾನತು

ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡದಲ್ಲಿ (ಎಸ್‌ಐಟಿ) ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್‌ ಇನ್ಸ್‌ಪೆಕ್ಟರ್ ವಿನೋದ್ ರೆಡ್ಡಿ ಅವರನ್ನು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದ ವಿನೋದ್ ರೆಡ್ಡಿ ಅವರನ್ನು ಬಳಿಕ ಮುಂಡಗೋಡ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ ಬಳಿಕ ಅವರು ಬೆಳ್ತಂಗಡಿಯಲ್ಲಿ ತಂಡದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು.ಈ ನಡುವೆ ಪೊಲೀಸ್ ಇಲಾಖೆಯ

ಭ್ರಷ್ಟಾಚಾರ ಆರೋಪ: ಎಸ್‌ಐಟಿ ಅಧಿಕಾರಿ ವಿನೋದ್ ರೆಡ್ಡಿ ಸೇರಿ ಮೂವರು ಅಮಾನತು Read More »

error: Content is protected !!
Scroll to Top