Author name: Tejas

ಅರಂತೋಡು : ವಿದ್ಯಾರ್ಥಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯ

ರಸ್ತೆ ದಾಟುತ್ತಿದ್ದಾಗ ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಯೋರ್ವನಿಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿ ಗಾಯಗೊಂಡ ಘಟನೆ ಜು. 4 ರಂದು ಅರಂತೋಡಿನಿಂದ ವರದಿಯಾಗಿದೆ.ಆಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯಗೊಂಡ ವಿದ್ಯಾರ್ಥಿಯನ್ನು ಸಚಿನ್ ಎಂದು ಗುರುತಿಸಲಾಗಿದ್ದುಅರಂಬೂರು ನಿವಾಸಿಯಾಗಿದ್ದಾನೆ.ಡಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿಯ ತಲೆಗೆ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಆತನನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅರಂತೋಡು : ವಿದ್ಯಾರ್ಥಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯ Read More »

ಪ್ರತಿಯೊಂದು ಗ್ರಾಮ ಪಂಚಾಯತ್ ಗಳಲ್ಲಿ ಮಳೆ ಮಾಪಕಗಳನ್ನು ಸುಸ್ಥಿತಿಯಲ್ಲಿ ಇಡಲು ಸುಳ್ಯ ಬಿ.ಜೆ.ಪಿ ಒತ್ತಾಯ

ಬೆಳೆ ವಿಮೆ ಕೇಂದ್ರ ಸರಕಾರ ರೈತರ ಹಿತ ಕಾಪಾಡಲು ಜಾರಿಗೆ ತಂದಿರುವ ಒಂದು ಉತ್ತಮ ಯೋಜನೆಯಾಗಿದ್ದುಬೆಳೆ ವಿಮೆಗೆ ವಿಮಾ ಮೊತ್ತ ನೀಡಲು ಮಳೆ ಮಾಪಕ ಮುಖ್ಯ ಮಾನದಂಡವಾಗಿದ್ದು ನಮ್ಮ ತಾಲೂಕಿನ ಹಲವು ಗ್ರಾಮ ಪಂಚಾಯತ್ ಗಳಲ್ಲಿ ಮಳೆ ಮಾಪಕಗಳು ಸಮರ್ಪಕವಾಗಿ ಕಾರ್ಯನಿರ್ವಾಹಿಸುತ್ತಿಲ್ಲ.ಇದನ್ನು ಸುಸ್ಥಿತಿಗೆ ತಾರದೆ ಹೋದಲ್ಲಿ ಗ್ರಾಮ ಪಂಚಾಯತ್ ಗಳ ಎದುರು ಪ್ರತಿಭಟನೆ ನಡೆಸಲಾಗುವುದು ಸುಳ್ಯ ಬಿಜೆಪಿ ಮಂಡಲ ಸಮಿತಿ ಎಚ್ಚರಿಸಿದೆ.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಜು.3ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್

ಪ್ರತಿಯೊಂದು ಗ್ರಾಮ ಪಂಚಾಯತ್ ಗಳಲ್ಲಿ ಮಳೆ ಮಾಪಕಗಳನ್ನು ಸುಸ್ಥಿತಿಯಲ್ಲಿ ಇಡಲು ಸುಳ್ಯ ಬಿ.ಜೆ.ಪಿ ಒತ್ತಾಯ Read More »

ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಇಳಿಕೆ ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಇದೆ ಇಲ್ವಾ ಇಲ್ಲಿದೆ ಮಾಹಿತಿ

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಜೂನ್ 3ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸದ್ಯ ಮಳೆ ಅಬ್ಬರ ತುಸು ಕಡಿಮೆಯಾಗಿದ್ದು, ರೆಡ್ ಅಲರ್ಟ್ ಹಿಂಪಡೆದು ಜುಲೈ 4ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ನಾಳೆ ಎಂದಿನಂತೆ ಶಾಲೆಗಳು ಆರಂಭವಾಗಲಿದೆ. ರಜೆ ಮುಂದುವರಿಕೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಧಿಕೃತ ಆದೇಶಕ್ಕಾಗಿ ಜಿಲ್ಲಾಡಳಿತದ ಸೂಚನೆ ಬರುವವರೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಯಬೇಕಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಇಳಿಕೆ ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಇದೆ ಇಲ್ವಾ ಇಲ್ಲಿದೆ ಮಾಹಿತಿ Read More »

ಅರಂಬೂರು : ಡಿಜಿ ಪೇ ಕಾರ್ಯಕ್ರಮಕ್ಕೆ ಚಾಲನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯಸುಳ್ಯ ವಲಯದ ಅರಂಬೂರು CSC ಕೇಂದ್ರದಲ್ಲಿ ಡಿಜಿ ಪೇ ಕಾರ್ಯಕ್ರಮಕ್ಕೆ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷರಾದ ಪರಮೇಶ್ವರ ನೆಡ್ಚಿಲ್ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಿ.ಎಸ್. ಸಿ ನೋಡೆಲ್ ಅಧಿಕಾರಿಯಾದ ಹೇಮಂತ್ ಸರ್ ರವರು ಡಿಜಿ ಪೇ ಯ ಬಗ್ಗೆ ಮಾಹಿತಿ ನೀಡಿದರು.*ಅರಂಬೂರು ಒಕ್ಕೂಟದ ಅಧ್ಯಕ್ಷರದ ಚಂದ್ರಶೇಖರ ನೆಡ್ಚಿಲ್ ಹಾಗೂ ಅರಂಬೂರು ನೂತನ ಒಕ್ಕೂಟ ಅಧ್ಯಕ್ಷರಾದ ಅಶೋಕ್ ಪೀಚ್, ಪರಿವಾರಕನ

ಅರಂಬೂರು : ಡಿಜಿ ಪೇ ಕಾರ್ಯಕ್ರಮಕ್ಕೆ ಚಾಲನೆ Read More »

ಡಿಜಿ-ಪೇ ಕಾರ್ಯಕ್ರಮ ಗ್ರಾಮೀಣ ಭಾಗದ ಜನರಿಗೆ ವರದಾನ – ಎ ಬಾಬು ನಾಯ್ಕ

ಗ್ರಾಮೀಣ ಭಾಗದ ಜನರು ತಮ್ಮ ಖಾತೆಯಿಂದ ಹಣವನ್ನು ATM ಮೂಲಕ ಪಡೆಯಲು ದೂರದ ಪ್ರದೇಶಗಳಿಗೆ ತೆರಳ ಬೇಕಾಗಿದ್ದು, ಇದರ ಬದಲಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ C.S.C. ಕೇಂದ್ರಗಳಲ್ಲಿ ಡಿಜಿ-ಪೇ ಮೂಲಕ ತಮ್ಮ ಹಳ್ಳಿಯಲ್ಲಿಯೇ ಖಾತೆಯಿಂದ ಹಣ ಹಿಂಪಡೆಯುವ ಅವಕಾಶವಿದ್ದು, ಇದೊಂದು ಗ್ರಾಮೀಣ ಭಾಗದ ಜನರಿಗೆ ವರದಾನವಾಗಲಿದೆ ಎಂದು ಜಿಲ್ಲಾ ನಿರ್ದೇಶಕರಾದ ಶ್ರೀ ಎ ಬಾಬು ನಾಯ್ಕ ರವರು ಅಭಿಪ್ರಾಯಪಟ್ಟರು.

ಡಿಜಿ-ಪೇ ಕಾರ್ಯಕ್ರಮ ಗ್ರಾಮೀಣ ಭಾಗದ ಜನರಿಗೆ ವರದಾನ – ಎ ಬಾಬು ನಾಯ್ಕ Read More »

ಶಾಲಾ ಅವಧಿಯಲ್ಲಿ ಶಿಕ್ಷಕರು ಶಾಲೆಯಲ್ಲಿ ಕಡ್ಡಾಯವಾಗಿ ಇದ್ದು ಬೋಧನೆ ಮಾಡಲು ಸೂಚನೆ

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಫಲಿತಾಂಶ ಸುಧಾರಿಸಲು ಮಹತ್ವದ ಸುತ್ತೋಲೆ ಹೊರಡಿಸಿದೆ. ಶಾಲಾ ಅವಧಿಯಲ್ಲಿ ಶಿಕ್ಷಕರು, ಮುಖ್ಯೋಪಾಧ್ಯಾಯರು ಕಡ್ಡಾಯವಾಗಿ ಶಾಲೆಯಲ್ಲೇ ಹಾಜರಿದ್ದು ಬೋಧನೆ ಮಾಡಬೇಕು. ಯಾವುದೇ ತರಬೇತಿ, ಸಭೆ, ವಿಡಿಯೋ ಕಾನ್ನರೆನ್ಸ್, ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ಯುವುದು, ಬಾಹ್ಯ ಪರೀಕ್ಷೆಗಳನ್ನು ಶಾಲಾ ದಿನಗಳಲ್ಲಿ ನಡೆಸಲು ನಿಷೇಧ ಹೇರಲಾಗಿದೆ. ಡೇಟಾ ಎಂಟ್ರಿ ಕೆಲಸಕ್ಕೂ ಶಿಕ್ಷಕರನ್ನು ಬಳಸುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಈ ಆದೇಶ ತಕ್ಷಣದಿಂದ ಜಾರಿಗೆ

ಶಾಲಾ ಅವಧಿಯಲ್ಲಿ ಶಿಕ್ಷಕರು ಶಾಲೆಯಲ್ಲಿ ಕಡ್ಡಾಯವಾಗಿ ಇದ್ದು ಬೋಧನೆ ಮಾಡಲು ಸೂಚನೆ Read More »

ಜುಲೈ 6 ; ಸುಳ್ಯದಲ್ಲಿ ಆರೋಗ್ಯ ಸಚಿವರಾದ ಯು. ಟಿ ಖಾದರ್ ರವರಿಗೆ ಸಾರ್ವಜನಿಕ ಸನ್ಮಾನ

ಕರ್ನಾಟಕ ಸರ್ಕಾರದ ಅರೋಗ್ಯ, ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುಳ್ಯಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸುತ್ತಿರುವ ಯು. ಟಿ. ಖಾದರ್ ಫರೀದ್ ರವರನ್ನು ಸಾರ್ವಜನಿಕ ಅಭಿನಂದನಾ ಸಮಿತಿ ಯಿಂದ ಆಯೋಜಿಸಲಾದ ಸಾರ್ವಜನಿಕ ಅಭಿನಂದನಾ ಸಮಾರಂಭ ದ ಆಮಂತ್ರಣ ಪತ್ರಿಕೆಯನ್ನು ಸುಳ್ಯ ತಹಶೀಲ್ದಾರ್ ಕು| ಮಂಜುಳಾ ಬಿಡುಗಡೆ ಗೊಳಿಸಿದರುಸುಳ್ಯ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ, ಎಲ್ಲಾ ಧರ್ಮಗಳ ಧಾರ್ಮಿಕ ನಾಯಕರುಗಳ, ವಿವಿಧ ಇಲಾಖೆಗಳ ಅಧಿಕಾರಿಗಳ, ವಿವಿಧ ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಯೊಂದಿಗೆ ನಡೆಯುವ ಈ ಸಮಾರಂಭ ಯಶಸ್ವಿ ಯಾಗಲಿ

ಜುಲೈ 6 ; ಸುಳ್ಯದಲ್ಲಿ ಆರೋಗ್ಯ ಸಚಿವರಾದ ಯು. ಟಿ ಖಾದರ್ ರವರಿಗೆ ಸಾರ್ವಜನಿಕ ಸನ್ಮಾನ Read More »

ಜುಲೈ 2; ಸುಳ್ಯ ರೋಟರಿ ಸಿಟಿಯ ಪದ ಪ್ರದಾನ ಸಮಾರಂಭ

2026-27ನೇ ಸಾಲಿನ ರೋಟರಿ ಕ್ಲಬ್‌‌ ಸುಳ್ಯ ಸಿಟಿಯ ಪದಗ್ರಹಣ ಸಮಾರಂಭವು ಜುಲೈ.07ರಂದು ಸುಳ್ಯದ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷ ರಾಗೇಶ್ ರಾಘವ್‌ ತಿಳಿಸಿದರು.ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಜು.02ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.2026-2026-27ನೇ ಸಾಲಿನ ಅಧ್ಯಕ್ಷರಾಗಿ ಪಿ.ಎಚ್.ಎಫ್ ರಾಗೇಶ್ ರಾಘವ್‌, ಕಾರ್ಯದರ್ಶಿಯಾಗಿ ಪುರಂದರ ರೈ.ಪಿ, ಖಜಾಂಜಿಯಾಗಿ ನವೀನ್ ಚಂದ್ರ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಪಿ.ಎಚ್.ಎಫ್ ಪ್ರೀತಮ್ ಡಿ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಮಧು ಕಿರಣ್ ಕೆ.ಎನ್, ಸರ್ಜೆಂಟ್-ಅಟ್-ಆರ್ಮ್ಸ್ ಆಗಿ ಪಿ.ಎಚ್‌.ಎಫ್ ಮುರಳೀಧರ್ ರೈ,

ಜುಲೈ 2; ಸುಳ್ಯ ರೋಟರಿ ಸಿಟಿಯ ಪದ ಪ್ರದಾನ ಸಮಾರಂಭ Read More »

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.2ರಂದು ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜು.3ರಂದು ಅಂಗನವಾಡಿ, ಶಾಲೆ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ,

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಅರಂತೋಡಿನಲ್ಲಿ ನಾಳೆ ಉಚಿತ ಕಣ್ಣಿನ ಪರೀಕ್ಷೆ

ಜೂ.3ರಂದು ಬೆಳಗ್ಗೆ 10ರಿಂದ 12 pm ವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಅರಂತೋಡು ನಲ್ಲಿ ಕೆವಿಜಿ ಆಸ್ಪತ್ರೆಯ ವೈದ್ಯರಿಂದ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ. .ತಪಾಸಣೆಯ ನಂತರ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಯ ಅವಶ್ಯಕತೆ ಇರುವುದಾದರೆ ಉಚಿತವಾಗಿ ನೀಡಲಾಗುತ್ತದೆ…….ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಅರಂತೋಡಿನಲ್ಲಿ ನಾಳೆ ಉಚಿತ ಕಣ್ಣಿನ ಪರೀಕ್ಷೆ Read More »

error: Content is protected !!
Scroll to Top