ಬೆಳೆ ವಿಮೆ ಕೇಂದ್ರ ಸರಕಾರ ರೈತರ ಹಿತ ಕಾಪಾಡಲು ಜಾರಿಗೆ ತಂದಿರುವ ಒಂದು ಉತ್ತಮ ಯೋಜನೆಯಾಗಿದ್ದು
ಬೆಳೆ ವಿಮೆಗೆ ವಿಮಾ ಮೊತ್ತ ನೀಡಲು ಮಳೆ ಮಾಪಕ ಮುಖ್ಯ ಮಾನದಂಡವಾಗಿದ್ದು ನಮ್ಮ ತಾಲೂಕಿನ ಹಲವು ಗ್ರಾಮ ಪಂಚಾಯತ್ ಗಳಲ್ಲಿ ಮಳೆ ಮಾಪಕಗಳು ಸಮರ್ಪಕವಾಗಿ ಕಾರ್ಯನಿರ್ವಾಹಿಸುತ್ತಿಲ್ಲ.ಇದನ್ನು ಸುಸ್ಥಿತಿಗೆ ತಾರದೆ ಹೋದಲ್ಲಿ ಗ್ರಾಮ ಪಂಚಾಯತ್ ಗಳ ಎದುರು ಪ್ರತಿಭಟನೆ ನಡೆಸಲಾಗುವುದು ಸುಳ್ಯ ಬಿಜೆಪಿ ಮಂಡಲ ಸಮಿತಿ ಎಚ್ಚರಿಸಿದೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಜು.3ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಂಬೆ ಹಾಗೂ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ತಿಳಿಸಿದರು.
ಕಳೆದ ವರ್ಷ ಬೆಳೆ ಮಿಮೆಯಲ್ಲಿ ಮಳೆ ಮಾಪಕಳು ಸರಿ ಇಲ್ಲದೆ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ.ನಾವು ಹೋರಾಟ ಮಾಡಿದ ಸಂದರ್ಭದಲ್ಲಿ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿ ಸುಮ್ಮನಾಗಿದ್ದಾರೆ.ತಾಲೂಕಿನ 24 ಮಳೆ ಮಾಪಕಗಳ ಪೈಕಿ 16 ಕೆಟ್ಟು ಹೋಗಿದೆ.ಕಡಬ ತಾಲೂಕಿನಲ್ಲಿ 22 ಮಳೆ ಮಾಪಕಗಳ ಪೈಕಿ 11 ಮಾತ್ರ ಕಾರ್ಯನಿರ್ವಹಿಸುತ್ತಿದೆ.ಮುರುಳ್ಯದಲ್ಲಿ ಮಾಪಕವನ್ನು ಈ ತನಕ ಅಳವಡಿಸಿಲ್ಲ.ಕಳೆದ ವರ್ಷ ಮಳೆಯಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ.ಈ ಬಾರಿ ಸಾಲ ಪಡಕೊಂಡ ರೈತರಿಗೆ ವಿಮೆ ಖಡ್ಡಾಯಗೊಳಿಸಿದ್ದಾರೆ.ಇದು ವಿಮಾ ಕಂಪೆನಿಗಳ ಕಿಸೆ ತುಂಬಿಸುವ ಕೆಲಸವಾಗಿದೆ.ಜಿಲ್ಲೆಯಲ್ಲಿ 274 ಮಳೆ ಮಾಪಕಗಳ ಪೈಕಿ 108 ವಿವಿಧ ಕಾರಣಗಳಿಂದ ಸ್ಥಗೀತಗೊಂಡಿವೆ.ಕೆಟ್ಟು ಹೋದ ಮಳೆ ಮಾಪಕಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್ ಎದುರು ಬಿಜೆಪಿ ನೇತೃತ್ವದಲ್ಲಿ ರೈತರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ಕಳೆದ ವರ್ಷ ಮಳೆ ಮಾಪಕಗಳ ಸಮಸ್ಯೆಯಿಂದ ತಾಲೂಕಿನ ರೈತರಿಗೆಅನ್ಯಾಯವಾಗಿದೆ.ಮಳೆಯ ಪ್ರಮಾಣದ ಲೆಕ್ಕಚಾರ ಕ್ರಮವಾಗಿ ನಡೆದಿಲ್ಲ.ಪ್ರತಿ ದಿವಸದ ಮಳೆಯ ಪ್ರಮಾಣವನ್ನು ಈ ವರ್ಷ ವೆಬ್ ಸೈಟ್ ನಲ್ಲಿ ಹಾಕುವ ಕೆಲಸ ನಡೆಯಬೇಕು ಎಂದು ಹೇಳಿದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಮಾತನಾಡಿ ಬೆಳೆ ವಿಮೆ ರೈತ ಪರ ಇರುವ ಕೇಂದ್ರ ಸರಕಾರದ ಉತ್ತಮ ಯೋಜನೆಯಾಗಿದ್ದು ಇದು ರೈತರಿಗೆ ಸಮರ್ಕವಾಗಿ ತಲುಪದಂತೆ ಮಾಡಿ ರಾಜಕೀಯ ಲಾಭ ಪಡೆಯಲು ರಾಜ್ಯ ಸರಕಾರ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಜೆಪಿ ಜಿಲ್ಲಾ ವಕ್ತಾರ ವಿನಯ ಮುಳುಗಾಡು,ಬಿಜೆಪಿ ಮುಖಂಡರಾದ ಸುಭೋದ್ ಶೆಟ್ಟಿ ಮೇನಾಳ, ಪ್ರದೀಪ್ ಕುಮಾರ್ ಮನವಳಿಕೆ, ಎ.ಟಿ.ಕುಸುಮಾಧರ್, ವಿಕ್ರಂ ಅಡ್ಪಂಗಾಯ, ಚನಿಯ ಕಲ್ತಡ್ಕ, ಅಶೋಕ್ ಅಡ್ಕಾರು, ಅವಿನಾಶ್ ಕುರುಂಜಿ, ಹರ್ಷಿತ್ ಕಾರ್ಜ ಇತರರು ಉಪಸ್ಥಿತರಿದ್ದರು.
ಪ್ರತಿಯೊಂದು ಗ್ರಾಮ ಪಂಚಾಯತ್ ಗಳಲ್ಲಿ ಮಳೆ ಮಾಪಕಗಳನ್ನು ಸುಸ್ಥಿತಿಯಲ್ಲಿ ಇಡಲು ಸುಳ್ಯ ಬಿ.ಜೆ.ಪಿ ಒತ್ತಾಯ

































































