Author name: Tejas

ಸುಳ್ಯ : ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ಮತ್ತು ಸುಜ್ಞಾನನಿಧಿ ಶಿಷ್ಯವೇತನ ಹಾಗೂ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕಿನ ಪದಾಧಿಕಾರಿಗಳ ಸಭೆ ಮತ್ತು ಸುಜ್ಞಾನನಿಧಿ ಶಿಷ್ಯವೇತನ ಹಾಗೂ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮವು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಲೋಕನಾಥ ಅಮೆಚೂರ್‌ ರವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಈ ಭಾಗದ ಕೃಷಿಕರು ಅಡಿಕೆ ಬೆಳೆಗೆ ಬಾಧಿಸಿರುವ ರೋಗದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಯೋಜನೆಯು ಕೃಷಿಕರ ಸಮಸ್ಯೆ ಪರಿಹರಿಸುವ ಕಾರ್ಯಕ್ಕೂ […]

ಸುಳ್ಯ : ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ಮತ್ತು ಸುಜ್ಞಾನನಿಧಿ ಶಿಷ್ಯವೇತನ ಹಾಗೂ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ Read More »

ಧರ್ಮಸ್ಥಳದಲ್ಲಿ ಮಹಿಳೆ ಆತ್ಮಹತ್ಯೆ

ಧರ್ಮಸ್ಥಳ ಗ್ರಾಮದಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಳಿಕ್ಕಾರು ಎಂಬಲ್ಲಿ ನಡೆದಿದೆ. ಮುಳಿಕ್ಕಾರು ಗ್ರಾಮ ನಿವಾಸಿ ವಿನುತ ಮೃತ ಮಹಿಳೆ. ಅವರು ಆಗಸ್ಟ್ 6 ರಂದು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ಧರ್ಮಸ್ಥಳದ ಅಂಗಡಿಯಲ್ಲಿ ವಿನುತ ಅವರು ಕೆಲಸ ಮಾಡುತ್ತಿದ್ದರು. ಮೃತರು ಪತಿ ಸಂದೇಶ್‌ರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳದಲ್ಲಿ ಮಹಿಳೆ ಆತ್ಮಹತ್ಯೆ Read More »

ದಬ್ಬಡ್ಕ : ಕಾಡಾನೆ ದಾಳಿಗೆ ವ್ಯಕ್ತಿ ಮೃತ್ಯು

ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಆನೆ ದಾಳಿಗೆ ವ್ಯಕ್ತಿ ಯೊಬ್ಬರು ಬಲಿಯಾದ ಘಟನ ಕಳೆದ ತಡ ರಾತ್ರಿ ನಡೆದಿದೆ. ದಬ್ಬಡ್ಕ ಕೊಪ್ಪದ ಶಿವಪ್ಪ (72) ಆನೆ ತುಳಿತಕೊಳಗಾಗಿ ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ.ಅವರು ಅ.6ರ ರಾತ್ರಿ ಸುಮಾರು 10.30 ರ ಸಮ ಮನೆಯ ಹತ್ತಿರದ ತೋಟದಲ್ಲಿ ನಾಯಿ ಬೋಗಳುತ್ತಿರುವುದನ್ನು ನೋಡಲು ತೋಟದ ಕಡೆಗೆ ಹೋದ ಸಂದರ್ಭ ದಲ್ಲಿ ಆನೆ ತುಳಿದಿದೆ.ಅವರನ್ನು ಮನೆಯವರು ತಕ್ಷಣವೇ ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮದ್ಯೆ ಮೃತ ಪಟ್ಟಿದ್ದಾರೆನ್ನಲಾಗಿದೆ.ಮೃತ ದೇಹ

ದಬ್ಬಡ್ಕ : ಕಾಡಾನೆ ದಾಳಿಗೆ ವ್ಯಕ್ತಿ ಮೃತ್ಯು Read More »

ಅರಂಬೂರು: ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ “ಆಟಿಲಿ ಒಂದ್ ದಿನ” ಕಾರ್ಯಕ್ರಮ’

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ “ಆಟಿಲಿ ಒಂದ್ ದಿನ” ಕಾರ್ಯಕ್ರಮ ಅರಂಬೂರಿನ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ವಾಸುದೇವ ಗೌಡ ಕುಡೆಕಲ್ಲು ಅವರು ಉದ್ಘಾಟಿಸಿ ಮಾತನಾಡುತ್ತಾ,  ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಆಟಿ ಎನ್ನುವಂತದ್ದು ಹಿಂದೆ ಬಹಳ ಕಷ್ಟಕರವಾದ ದಿನವಾಗಿತ್ತು.  ಇಂತಹ ಕಷ್ಟಕರವಾದ ದಿನಗಳಲ್ಲೂ ನಮ್ಮ ಪೂರ್ವಜರು ಯಾವ ರೀತಿಯಲ್ಲಿ ಜೀವನ ನಡೆಸಿದರು ಎನ್ನುವುದನ್ನು ಮುಂದಿನ ಪೀಳಿಗೆಗೆ ತಿಳಿ ಹೇಳುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳ ಅಗತ್ಯತೆ

ಅರಂಬೂರು: ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ “ಆಟಿಲಿ ಒಂದ್ ದಿನ” ಕಾರ್ಯಕ್ರಮ’ Read More »

ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ POCSO ಕಾಯಿದೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮ.

ದಿನಾಂಕ 01/08/2025 ರಂದು ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ಇಲ್ಲಿ ‘ POCSO’ ಕಾಯಿದೆ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಷಯದ ಕುರಿತು ನಮ್ಮ ಶಾಲೆಯ ಸಹ ಶಿಕ್ಷಕಿಯಾದ ಆಯಿಷತ್ ನೌಫಿಯಾ ಇವರು ಮಾತನಾಡುತ್ತ, POCSO ಕಾಯಿದೆಯು ಹದಿನೆಂಟು ವರ್ಷದ ಒಳಗಿನ ಮಕ್ಕಳ ರಕ್ಷಣೆಗೆ ಇರುವಂತಹ ಕಾಯಿದೆಯಾಗಿದ್ದು, ಈ ವಯೋಮಿತಿಯ ಯಾವುದೇ ಮಕ್ಕಳು ಲೈಂಗಿಕ ಶೋಷಣೆ ಅಥವಾ ದೌರ್ಜನ್ಯಕ್ಕೆ ಒಳಗಾಗದಂತೆ ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ನಿರ್ಭಿತಿಯಿಂದ ಆರೋಗ್ಯಕರವಾದ ವಾತಾವರಣದಲ್ಲಿ ಕಲಿಯಲು ಕಾನೂನಿನ

ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ POCSO ಕಾಯಿದೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮ. Read More »

ಅರಂತೋಡು – ತೊಡಿಕಾನ ಗ್ರಾಮ ಆಡಳಿತಾಧಿಕಾರಿಯಾಗಿ ಶ್ರೀನಿವಾಸ್ ಕರ್ತವ್ಯಕ್ಕೆ ಹಾಜರು

ಅರಂತೋಡು– ತೊಡಿಕಾನ ಗ್ರಾಮದ ನೂತನ ಗ್ರಾಮ ಆಡಳಿತಾಧಿಕಾರಿಯಾಗಿ ಶ್ರೀನಿವಾಸ್ ರವರು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಇವರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಉಳಿಮಾವು ಗ್ರಾಮದವರಾಗಿದ್ದು ಹೊಸದಾಗಿ ನೇಮಕಗೊಂಡವರು ಅರಂತೋಡು ಗ್ರಾಮ ಆಡಳಿತಾಧಿಕಾರಿಯ ಕೊರತೆ ಬಗ್ಗೆ ಕೆಡಿಪಿ ಸಭೆಯಲ್ಲಿ ಸದಸ್ಯ ಅಶ್ರಫ್ ಗುಂಡಿ ಪ್ರಸ್ತಾಪಿಸಿರುವುದಲ್ಲದೆ ಕಂದಾಯ ಸಚಿವ ಕೃಷ್ಣ ಬೈರೇ ಗೌಡರಿಗೂ ಮನವಿ ಸಲ್ಲಿಸಿದ್ದರು.

ಅರಂತೋಡು – ತೊಡಿಕಾನ ಗ್ರಾಮ ಆಡಳಿತಾಧಿಕಾರಿಯಾಗಿ ಶ್ರೀನಿವಾಸ್ ಕರ್ತವ್ಯಕ್ಕೆ ಹಾಜರು Read More »

ಸುಳ್ಯದಲ್ಲಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ ಅವರಿಗೆ ಆದರ್ಶ ಜೇನು ಕೃಷಿ ದಂಪತಿ ಪ್ರಶಸ್ತಿ ಪ್ರದಾನ

ಪೆರ್ನಾಜೆ:ಬರಹ ಜೇನು ಗಡ್ಡ ಜೇನು ಕೃಷಿಕರಾದ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ ಹಲವಾರು ವರ್ಷಗಳಿಂದ ಜೇನು ಕೃಷಿ ಬರಹದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ ಆದರ್ಶ ಜೇನು ಕೃಷಿ ದಂಪತಿ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ನಾರಾಯಣ್ ರೈ ಕುಕ್ಕುವಳ್ಳಿ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷರಾದ ಎಚ್ಭೀಮ್ರಾವ್ ವಾಶ್ಟರ್ ಕೋಡಿಪಾಳ, ಸುಳ್ಯ ಪ್ರಶಸ್ತಿ ಪ್ರದಾನ ಮಾಡಿದರು ಶಾಲು ಮಾಲೆ ಸ್ಮರಣಿಕೆ ಅಭಿನಂದನ ಪತ್ರಗಳನ್ನು ಸನ್ಮಾನಿಸಿ ಗಣ್ಯರ ಸಮ್ಮುಖದಲ್ಲಿ ಆ 3ರಂದು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು

ಸುಳ್ಯದಲ್ಲಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ ಅವರಿಗೆ ಆದರ್ಶ ಜೇನು ಕೃಷಿ ದಂಪತಿ ಪ್ರಶಸ್ತಿ ಪ್ರದಾನ Read More »

ಸಂಗೀತಗಾರ್ತಿ ಸವಿತಾ ಕೋಡಂದೂರು ಅವರಿಗೆ ಚಂದನ ಸ್ವರ ಸಂಗೀತ ಪ್ರಶಸ್ತಿ ಪ್ರಧಾನ.

ಹಿರಿಯ ಕಲಾವಿದೆ ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ನಾರಾಯಣ್ ರೈ ಕುಕ್ಕುವಳ್ಳಿ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷರಾದ ಎಚ್ಭೀಮ್ರಾವ್ ವಾಶ್ಟರ್ ಕೋಡಿಪಾಳ, ಸುಳ್ಯ ಪ್ರಶಸ್ತಿ ಪ್ರಧಾನ ಮಾಡಿದರು ಶಾಲು ಮಾಲೆ ಸ್ಮರಣಿಕೆ ಅಭಿನಂದನ ಪತ್ರಗಳನ್ನು ಸನ್ಮಾನಿಸಿ ಗಣ್ಯರ ಸಮ್ಮುಖದಲ್ಲಿ ಆ 3ರಂದು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು .ಇದೀಗಾಗಲೇ ದಾವಣಗೆರೆಯಲ್ಲಿ

ಸಂಗೀತಗಾರ್ತಿ ಸವಿತಾ ಕೋಡಂದೂರು ಅವರಿಗೆ ಚಂದನ ಸ್ವರ ಸಂಗೀತ ಪ್ರಶಸ್ತಿ ಪ್ರಧಾನ. Read More »

ಕೊಯನಾಡು : ಕಾರು ಬೊಲೆರೋ ಅಪಾಘತ

ಕೊಯನಾಡು ಚೆಡಾವು ತಿರುವಿನಲ್ಲಿ ಇಂದು 800 ಕಾರು ಮತ್ತು ಬೊಲೆರೋ ವಾಹನ ನಡುವೆ ಅಪಘಾತ ಸಂಭವಿಸಿ ಸವಾರರು ಅಪಾಯದಿಂದ ಪಾರಾಗಿದ್ದಾರೆ.ಅಪಘಾತದಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಅಪಘಾದಿಂದ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಯನಾಡು : ಕಾರು ಬೊಲೆರೋ ಅಪಾಘತ Read More »

ಉತ್ತರ ಕಾಶಿಯಲ್ಲಿ ಮೇಘ ಸ್ಪೋಟ 60ಕ್ಕೂ ಮಂದಿ ನಾಪತ್ತೆ

ಉತ್ತರಾಖಂಡ್: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದ ಪರಿಣಾಮವಾಗಿ ಪ್ರವಾಹ ಹಾಗೂ ಗುಡ್ಡ ಕುಸಿದಿದ್ದು, ಮನೆಗಳು ಸೇರಿದಂತೆ 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.ಖಿರ್ ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಧರಾಲಿ ಮಾರುಕಟ್ಟೆ ಪ್ರದೇಶದಲ್ಲಿ ಹಾನಿಯಾಗಿದೆ. ಬೆಟ್ಟದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹರಿದು ಬಂದ ಹಿನ್ನೆಲೆಯಲ್ಲಿ ತರಗೆಲೆಯಂತೆ ಮನೆಗಳು ಕೊಚ್ಚಿಹೋಗಿವೆ. ಮೇಘಸ್ಫೋಟದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳದಲ್ಲಿ ಎಸ್‌ಡಿಆರ್‌ಎಫ್ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸರ್ಕಾರವು ಭಾರತೀಯ ಸೇನೆಯ ಸಹಾಯವನ್ನು

ಉತ್ತರ ಕಾಶಿಯಲ್ಲಿ ಮೇಘ ಸ್ಪೋಟ 60ಕ್ಕೂ ಮಂದಿ ನಾಪತ್ತೆ Read More »

error: Content is protected !!
Scroll to Top