ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಆನೆ ದಾಳಿಗೆ ವ್ಯಕ್ತಿ ಯೊಬ್ಬರು ಬಲಿಯಾದ ಘಟನ ಕಳೆದ ತಡ ರಾತ್ರಿ ನಡೆದಿದೆ. ದಬ್ಬಡ್ಕ ಕೊಪ್ಪದ ಶಿವಪ್ಪ (72) ಆನೆ ತುಳಿತಕೊಳಗಾಗಿ ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ.ಅವರು ಅ.6ರ ರಾತ್ರಿ ಸುಮಾರು 10.30 ರ ಸಮ ಮನೆಯ ಹತ್ತಿರದ ತೋಟದಲ್ಲಿ ನಾಯಿ ಬೋಗಳುತ್ತಿರುವುದನ್ನು ನೋಡಲು ತೋಟದ ಕಡೆಗೆ ಹೋದ ಸಂದರ್ಭ ದಲ್ಲಿ ಆನೆ ತುಳಿದಿದೆ.ಅವರನ್ನು ಮನೆಯವರು ತಕ್ಷಣವೇ ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮದ್ಯೆ ಮೃತ ಪಟ್ಟಿದ್ದಾರೆನ್ನಲಾಗಿದೆ.ಮೃತ ದೇಹ ವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಎಂದು ತಿಳಿದು ಬಂದಿದೆ
ದಬ್ಬಡ್ಕ : ಕಾಡಾನೆ ದಾಳಿಗೆ ವ್ಯಕ್ತಿ ಮೃತ್ಯು














































