21 ಕಿ.ಮೀ.ರಾತ್ರಿ ಪಾದಾಯಾತ್ರೆ ಕೈಗೊಂಡು ಮುಂಜಾನೆ ಧನು ಪೂಜೆಗೆ ತೊಡಿಕಾನ ಮಲ್ಲಿಕಾರ್ಜುನ ದೇವರ ಸನ್ನಿಧಿ ಸೇರಿಕೊಂಡ ಭಕ್ತ
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಧನುರ್ ಮಾಸ ಪ್ರಯುಕ್ತ ಇದೀಗ ಮುಂಜಾನೆ ಧನುಪೂಜೆ ನಡೆಯುತ್ತಿದ್ದು ಭಕ್ತರೊಬ್ಬರು ಜ.3ರಂದು ರಾತ್ರಿ ಪಾದಯಾತ್ರೆಯಲ್ಲಿ ಹೊರಟು ಗುರಿ ತಲುಪಿ ಜ.4ರಂದು ಮುಂಜಾನೆ ನಡೆದ ಧನುಪೂಜೆಯಲ್ಲಿ ಪಾಲ್ಗೋಂಡು ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆದ ಅಪರೂಪದ ಘಟನೆ ವರದಿಯಾಗಿದೆ.ಮೂಲತ ಅಜ್ಜಾವರ ಗ್ರಾಮದ ಮೇನಾಲ ಇರಂತಕಜೆ ನಿವಾಸಿ ರಮೇಶ್ ಕಾಲ್ನಡಿಯಲ್ಲಿ ಸಾಗಿ ಧನು ಪೂಜೆಯಲ್ಲಿ ಭಾಗಿಯಾಗಿ ಶ್ರೀ ದೇವರ ದರ್ಶನ ಪಡೆದ ಭಕ್ತರಾಗಿದ್ದಾರೆ.ಅವರು ಸುಳ್ಯ ಜಯನಗರದ ಕೊರಂಬಡ್ಕದ ತನ್ನ ಮನೆಯಿಂದ ಮನೆಯ […]









