Author name: Tejas

ಅಟೋ ಚಾಲಕ ನಿಧನ

ಸುಳ್ಯ ಆಲೆಟ್ಟಿ ಗ್ರಾಮದ ನೆಡ್ಡಿಲು ನಿವಾಸಿ ದಿ.ಗೋಪಾಲ ನಾಯ್ಕ ಅವರ ಮಗ ಅಟೋ ಚಾಲಕ ವಿಜಯ ನೆಡ್ಡಿಲು ಅಸೌಖ್ಯದಿಂದ ಡಿ.11 ರಂದು ರಾತ್ರಿ ನೆಡ್ಡಿಲು ಮನೆಯಲ್ಲಿ ನಿಧನರಾದರು. ಅವರಿಗೆ 37 ವರ್ಷ ವಯಸ್ಸಾಗಿತ್ತು.ಮೃತರು ಅವಿವಾಹಿತ ರಾಗಿದ್ದಾರೆ.ಮೃತರುತಾಯಿ ಕಸ್ತೂರಿ, ಸಹೋದರ ರಾಮಚಂದ್ರ ಮತ್ತು ರವಿಚಂದ್ರ ನೆಡ್ಡಿಲು, ಸಹೋದರಿಯರಾದ ಸವಿತ ಮತ್ತು ಪುಷ್ಪಾವತಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಟೋ ಚಾಲಕ ನಿಧನ Read More »

ಮೂಕ ಅಯ್ಯಪ್ಪ ಭಕ್ತನಿಗೊಳಿದ ಶಬರಿಮಲೆ ಅಯ್ಯಪ್ಪ,ಮಾತನಾಡಲು ಬಾರದ ಮೂಕ ಸ್ವಾಮಿ ಎಂಟು ಬಾರಿ ಶರಣು ಕರೆದ

ಅಯ್ಯಪ್ಪನ ಮಹಿಮೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.ಒಂದು ಶಬ್ದ ಮಾತನಾಡಲೂ ಬಾಯಿ ಬಾರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ, ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಮಾತನಾಡಲು ಆರಂಭಿಸಿದ್ದಾನೆ.ಪುತ್ತೂರಿನಸಾಮೆತ್ತಡ್ಕ ನಿವಾಸಿಯಾದ ಪ್ರಸನ್ನ ಎನ್ನುವವರು ಮಾತನಾಡುವ ಮೂಲಕ ಜನರ ಅಚ್ಚರಿಗೆ ಕಾರಣವಾಗಿದೆ.ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಈ ಬಾಲಕಮಾತನಾಡಲು ಪ್ರಾರಂಭಿಸಿದ್ದಾರೆ.ಒಂದಕ್ಷರ ಸರಿಯಾಗಿ ಮಾತನಾಡದ ಪುತ್ತೂರು ನಿವಾಸಿ ಪ್ರಸನ್ನ

ಮೂಕ ಅಯ್ಯಪ್ಪ ಭಕ್ತನಿಗೊಳಿದ ಶಬರಿಮಲೆ ಅಯ್ಯಪ್ಪ,ಮಾತನಾಡಲು ಬಾರದ ಮೂಕ ಸ್ವಾಮಿ ಎಂಟು ಬಾರಿ ಶರಣು ಕರೆದ Read More »

ಕೆ.ಟಿ.ವಿಶ್ವನಾಥ ದಂಪತಿ ಕಾರು ಅಪಘಾತ

ಸುಳ್ಯ ತಾಲೂಕಿನನ ಗೋಂಟಡ್ಕದಲ್ಲಿ ಕಾರು ಚರಂಡಿಗೆ ಬಿದ್ದು ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿ ಕೆ.ಟಿ.ವಿಶ್ವನಾಥ ದಂಪತಿ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.ಅವರು ಕಚೇರಿಗೆ ಬೆಳಿಗ್ಗೆ ಕತ್ಯವ್ಯಕ್ಕೆ ಬರುತ್ತಿದ್ದ ವೇಳೆ ಗೋಂಟಡ್ಕ ತಿರುವಿನಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ.ಪತ್ನಿ ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಮಕ್ಕಳು ಮತ್ತು ವಿಶ್ವನಾಥರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಟಿ.ವಿಶ್ವನಾಥ ದಂಪತಿ ಕಾರು ಅಪಘಾತ Read More »

ಆಮ್ ಆದ್ಮಿ ಪಾರ್ಟಿ, ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅಶೋಕ ಎಡಮಲೆಯವರಿಗೆ ಭಾಗವಹಿಸಲು ಅವಕಾಶ

ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಮಿತಿ ಸಭೆ 2023-24, ಇದೇ ಡಿಸೆಂಬರ್ 21, 20 FCC24 ರಂದು ದೆಹಲಿಯಲ್ಲಿ ನಡೆಯಲ್ಲಿದ್ದು, ಕರ್ನಾಟಕದಿಂದ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಶೋಕ ಎಡಮಲೆ ಭಾಗವಹಿಸಲಿದ್ದಾರೆ.ಕರ್ನಾಟಕ ರಾಜ್ಯದಿಂದ ಒಟ್ಟು 8 ಮಂದಿ ಸಮಿತಿ ಸದಸ್ಯರಿದ್ದು ಈ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ.ಅಶೋಕ ಎಡಮಲೆ ಅವರು ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನ ಸಭಾ ಕ್ಷೇತ್ರದ ಸಂಚಾಕರಾಗಿ, ದಕ್ಷಿಣ ಕನ್ನಡ ಜಿಲ್ಲಾಧ್ಯರಾಗಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವೀಕ್ಷಕರಾಗಿ ಮತ್ತು ರಾಜ್ಯ

ಆಮ್ ಆದ್ಮಿ ಪಾರ್ಟಿ, ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅಶೋಕ ಎಡಮಲೆಯವರಿಗೆ ಭಾಗವಹಿಸಲು ಅವಕಾಶ Read More »

ಕಟ್ಟದ ಮೇಲೆ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು

ಸುಳ್ಯ ಜ್ಯೋತಿ ಸರ್ಕಲ್ ಬಳಿ ಕಟ್ಟಡವೊಂದರಲ್ಲಿ ವೆಲ್ಡಿಂಗ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.ಅಲ್ಲಿ ಸೇರಿದ್ದ ಸ್ಥಳೀಯರು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುಷ್ಟರಲ್ಲಿ ಮೃತಪಟ್ಟಿದ್ದರು. ಮೃತಪಟ್ಟ ವ್ಯಕ್ತಿ ಕಲ್ಲಡ್ಕ ನಿವಾಸಿ ಪ್ರಮೋದ್ ಎಂದು ತಿಳಿದುಬಂದಿದೆ.

ಕಟ್ಟದ ಮೇಲೆ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು Read More »

ಸುಳ್ಯ ಹಬ್ಬ ಆಮಂತ್ರಣ ಪತ್ರಿಕೆ ಬಿಡುಗಡೆ

.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಕೆ.ವಿ.ಜಿ. ಸುಳ್ಯ ಹಬ್ಬವನ್ನು ದ.25 ಮತ್ತು ದ.26 ರಂದು ನಡೆಯಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಬುಧವಾರ ಸುಳ್ಯ ಹಬ್ಬ ಕಚೇರಿಯಲ್ಲಿ ನಡೆಯಿತು.ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಸಮಿತಿಯ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ ರೈ ಮತ್ತು ಮಾಜಿ ಅಧ್ಯಕ್ಷೆ ಮೀನಾಕ್ಷಿ ಗೌಡರು ಶುಭಹಾರೈಸಿದರು. ಸಮಿತಿ ಅಧ್ಯಕ್ಷ ಡಾ.ಜ್ಞಾನೇಶ್ ಎನ್.ಎ. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ರಾಜು

ಸುಳ್ಯ ಹಬ್ಬ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ನಾಶ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡಿರುವ ಘಟನೆ ವರದಿಯಾಗಿದೆ.ಅಡ್ತಲೆಯ ಮೋಹನ್ ಪಂಜದಬೈಲು ರವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ ಮರಗಳು, ತೆಂಗಿನ ಗಿಡಗಳು ಹಾಗೂ ಬಾಳೆ,ಕೊಕ್ಕೊ ಗಿಡಗಳನ್ನು ಹಾನಿಗೊಳಿಸಿರುವುದಾಗಿ ತಿಳಿದುಬಂದಿದೆ.

ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ನಾಶ Read More »

ಪೆರಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,ಸ್ಥಳೀಯ ಬಿಜೆಪಿ ಮುಖಂಡ ಎ.ಸಿ ಹೊನ್ನಪ್ಪ ಗೌಡ ನಿಧನ

ಪೆರಾಜೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ,ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು,ಬಿಜೆಪಿ ಹಿರಿಯ ಮುಖಂಡರು ಅಮಚೂರು ಎ.ಸಿ ಹೊನ್ನಪ್ಪ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

ಪೆರಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,ಸ್ಥಳೀಯ ಬಿಜೆಪಿ ಮುಖಂಡ ಎ.ಸಿ ಹೊನ್ನಪ್ಪ ಗೌಡ ನಿಧನ Read More »

ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಾಯ

ಸುಳ್ಯದ ಬಸ್ ನಿಲ್ದಾಣದ ಸಮೀಪ ಮಂಗಳವಾರ ರಾತ್ರಿ ಕಾರು ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಡಿಕ್ಕಿಯ ರಭಸಕ್ಕೆ ಪಾದಾಚಾರಿ ಗಾಯಗೊಂಡಿದ್ದಾರೆ.ಗಾಯಳುವನ್ನು ಸ್ಥಳೀಯರು ಸೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಯಾರು ಅನ್ನುವು ಮಾಹಿತಿ ದೊರೆತ್ತಿಲ್ಲ.ಸುಳ್ಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಾಯ Read More »

ಅಮ್ಮ ಅಂದರೆ ಏನೋ ಹರುಷವು !

ಅಮ್ಮ ನಮ್ಮ ಜೀವಕ್ಕೆ ಉಸಿರು ಕೊಟ್ಟ ದೇವತೆ……ಅಮ್ಮ ಎಂದರೆ ಏನೋ ಹರುಷವುಎಂಬ ಹಾಡನ್ನು ಕೇಳಿದ್ದೀರಾ?ಆದರೆ ಅಮ್ಮ ಎನ್ನುವ ಪದಗಳು ಎಲ್ಲಿಂದ ಆರಂಭವಾಯ್ತು……….?ಮಗುವಿಗೆ ಚಂದಮಾಮಾನ್ನು ತೋರಿಸಿ ಊಟ ಮಾಡಿಸುತ್ತಿದ್ದ ತಾಯಿಯು ಈಗ ಹೊತ್ತೊತ್ತಿಗೆ ಊಟ ಮಾಡುವುದ್ದನ್ನು ಮರೆತು ಹೋಗಿದ್ದಾಳೆ. ತಾಯಿ ಎಷ್ಟೇ ಕಷ್ಟ ಪಟ್ಟರು ಆ ಕಷ್ಟವು ಮಗುವಿಗೆ ಬರಬಾರದೆಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಮಗುವಿನ ಹುಟ್ಟಿದ ದಿವಸ ಬಂದರೆ ತಾಯಿ ಹೊಸ ಬಟ್ಟೆ ತೆಗೆದುಕೊಟ್ಟು, ತಾಯಿ ಹರಿದ ಬಟ್ಟೆ ಹಾಕಿಕೊಂಡು, ತನ್ನ ಮಗುವಿನ ಸಂತೋಷವನ್ನು ನೋಡಿ ಖುಷಿ ಪಡುತ್ತಾಳೆ.

ಅಮ್ಮ ಅಂದರೆ ಏನೋ ಹರುಷವು ! Read More »

error: Content is protected !!
Scroll to Top