ಫೆಬ್ರವರಿ 28 ರಿಂದ ಮಾರ್ಚ್ 17 ತನಕ ದ್ವಿತೀಯ ಪಿಯುಸಿ ಪರೀಕ್ಷೆ

ಪರೀಕ್ಷಾ ತಯಾರಿಯ ಕೊನೆಯ ಹಂತದಲ್ಲಿರುವ ವಿದ್ಯಾರ್ಥಿಗಳು ಗಮನಿಸಬೇಕಾದ  ಅಂಶಗಳು✓.ಈಗಾಗಲೇ ಪರೀಕ್ಷೆಗೆ ಅಗತ್ಯವಾದ ಪೂರ್ವ ತಯಾರಿಯನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದು.✓ಈ ಹಂತದಲ್ಲಿ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುವುದನ್ನು ಬಿಟ್ಟು, ಈಗಾಗಲೇ ಓದಿದ ಪಾಠಗಳ ಪುನರಾವರ್ತನೆಗೆ ಹೆಚ್ಚು ಗಮನ ನೀಡಬೇಕು.✓ಸಂಕ್ಷಿಪ್ತ ನೋಟ್ಸ್‌ಗಳನ್ನು ಗಮನಿಸಿ, ಕಲಿತ ವಿಷಯಗಳನ್ನು ಮನನ ಮಾಡಿಕೊಳ್ಳುವುದು ಉತ್ತಮ. ✓ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಬಳಕೆಯನ್ನು ಸಾಧ್ಯವಾದಷ್ಟು ದೂರವಿಟ್ಟು, ಆರೋಗ್ಯಕರ ಆಹಾರ ಸೇವಿಸಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.✓ಪ್ರತಿದಿನ ಕನಿಷ್ಠ 6 ರಿಂದ 7 ಗಂಟೆಗಳ ನಿದ್ರೆ ಮಾಡುವುದನ್ನು ಮರೆಯಬಾರದು.✓ಪರೀಕ್ಷೆಯ ದಿನ ಯಾವುದೇ ಗಡಿಬಿಡಿಗೆ ಅವಕಾಶ ನೀಡದೆ, ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 30 ನಿಮಿಷಗಳ ಮೊದಲೇ ತಲುಪಬೇಕು.✓ಪರೀಕ್ಷೆಯ ಕೊಠಡಿಯನ್ನು ಸರಿಯಾಗಿ ಗುರುತಿಸಿ, ತಮ್ಮ ಬೆಂಚಿನಲ್ಲಿ ಬರೆದಿರುವ ನೋಂದಣಿ ಸಂಖ್ಯೆಯು ಹಾಲ್ ಟಿಕೆಟ್‌ನಲ್ಲಿರುವ ಸಂಖ್ಯೆಗೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ✓ಕೊಠಡಿ ಮೇಲ್ವಿಚಾರಕರ ಮಾರ್ಗದರ್ಶನವನ್ನು ಸಂಪೂರ್ಣವಾಗಿ ಅನುಸರಿಸಬೇಕು.✓ಪರೀಕ್ಷೆ ಆರಂಭವಾದ ನಂತರ ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಓದಿ, ಸುಲಭವಾಗಿ ಉತ್ತರಿಸುವ ಪ್ರಶ್ನೆಗಳಿಗೆ ಉತ್ತರ ಬರೆಯಲು ಆರಂಭಿಸಬೇಕು.✓ಉತ್ತರಗಳು ಅಂದವಾಗಿ, ಸ್ಪಷ್ಟವಾಗಿ ಹಾಗೂ ಕ್ರಮಬದ್ಧವಾಗಿ ಇರಲಿ.✓ಪ್ರಶ್ನೆ ಸಂಖ್ಯೆಗಳನ್ನು ಸರಿಯಾಗಿ ನಮೂದಿಸುವುದನ್ನು ಮರೆಯಬಾರದು.✓ಪರೀಕ್ಷೆ ವೇಳೆ ಯಾವುದೇ ಒತ್ತಡಕ್ಕೆ ಒಳಗಾಗದೆ, ಶಾಂತ ಮನಸ್ಸಿನಿಂದ ಉತ್ತರ ಬರೆಯುವುದು ಅತ್ಯಂತ ಮುಖ್ಯ.✓ಪರೀಕ್ಷೆ ಮುಗಿಯುವ ಮೊದಲು ಉತ್ತರ ಪತ್ರಿಕೆಯನ್ನು ಒಮ್ಮೆ ಪರಿಶೀಲಿಸಿ, ಎಲ್ಲಾ ಪ್ರಶ್ನೆ ಸಂಖ್ಯೆಗಳನ್ನು ಸರಿಯಾಗಿ ಬರೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಆತ್ಮವಿಶ್ವಾಸದಿಂದ ಉತ್ತರ ಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ಸಲ್ಲಿಸಿ, ಮುಂದಿನ ಪರೀಕ್ಷೆಗಳಿಗೂ ಧೈರ್ಯದಿಂದ ತಯಾರಿಯನ್ನು ಮುಂದುವರಿಸಬೇಕು.





















































































ಜೇಸಿ ಮೋಹನ್ ಚಂದ್ರ, ಉಪನ್ಯಾಸಕರು ಮತ್ತು ವ್ಯಕ್ತಿತ್ವ ವಿಕಸನ ತರಬೇತಿದಾರರು, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು

Leave a Comment

Your email address will not be published. Required fields are marked *

error: Content is protected !!
Scroll to Top