Author name: Tejas

ನಾಳೆ ಕುಕ್ಕೆ ದೇವಳದಲ್ಲಿ ಬ್ರಹ್ಮ ರಥೋತ್ಸವ

ದ.ಕ ಜಿಲ್ಲೆಯ ಪ್ರಸಿದ್ದ ತೀರ್ಥ ಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯದ ಷಷ್ಠಿ ಮಹೋತ್ಸವ ಪ್ರಯುಕ್ತ ಬ್ರಹ್ಮರಥೋತ್ಸವ ನಾಳೆ (ಡಿ.7) ದಿನ ಪ್ರಾತಃಕಾಲ 6:57 ರ ವೃಶ್ಚಿಕಲಗ್ನದ ಸುಮುಹೂರ್ತದಲ್ಲಿ ನಡೆಯಲಿದೆ.ಪ್ರಾತಃಕಾಲ 6.57 ಕ್ಕೆ ದೇವರು ರಥಾರೂಡರಾಗಿ ವೈಭವದ ಬ್ರಹ್ಮರಥೋತ್ಸವ ಜರಗಲಿದೆ, ಬ್ರಹ್ಮರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಮತ್ತು ಪಂಚಮಿ ರಥದಲ್ಲಿ ಶ್ರೀ ಉಮಾಮಹೇಶ್ವರ ದೇವರು ಆರೂಡರಾಗಿ ರಥೋತ್ಸವ ನಡೆಯಲಿದೆ.

ನಾಳೆ ಕುಕ್ಕೆ ದೇವಳದಲ್ಲಿ ಬ್ರಹ್ಮ ರಥೋತ್ಸವ Read More »

ಯುವತಿಯ ಕೆಟ್ಟು ಹೋದ ಕಾರು ರಿಪೇರಿ ಮಾಡಿ ಕೊಟ್ಟು ಶಫಿನ್‌’ನಿಂದ ಜ್ಯೂಸ್‌’ಗೆ ಅಮಲು ಪದಾರ್ಥ ಬೆರೆಸಿ ದೈಹಿಕ ಸಂಪರ್ಕ

ಮಹಿಳಾ ಡ್ರೈವರ್ ಗೆ ನೆರವಾಗಲು ಬಂದು ಕಾರು ರಿಪೇರಿ ಮಾಡಿ ಕೊಟ್ಟು ಯುವಕನೊಬ್ಬ ಕೆಲವು ದಿನಗಳ ಬಳಿಕ ಆಕೆಗೆ ಜ್ಯೂಸಿನಲ್ಲಿ ಅಮಲು ಪದಾರ್ಥ ಬೆರೆಸಿ ಅತ್ಯಾಚಾರ ಎಸಗಿದ ಹಾಗೂ ಆಕೆಯ ಬ್ಯಾಗಿನಲ್ಲಿದ್ದ ಹಣ ಕಳವು ಮಾಡಿರುವ ಬಗ್ಗೆ ಮಂಗಳೂರಿನ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಫಿನ್ ಪ್ರಕರಣದ ಎ.1 ಆರೋಪಿ. ಆತನ ಅಣ್ಣ ಹಾಗೂ ಅತ್ತಿಗೆಯ ಮೇಲೂ ಸಂತ್ರಸ್ತೆ ದೂರು ನೀಡಿದ್ದಾರೆ. ಸಂತ್ರಸ್ತೆ ಯುವತಿ ಕೊಡಿಯಾಲಬೈಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು.ಆರೋಪಿ ಸಂತ್ರಸ್ಥೆ

ಯುವತಿಯ ಕೆಟ್ಟು ಹೋದ ಕಾರು ರಿಪೇರಿ ಮಾಡಿ ಕೊಟ್ಟು ಶಫಿನ್‌’ನಿಂದ ಜ್ಯೂಸ್‌’ಗೆ ಅಮಲು ಪದಾರ್ಥ ಬೆರೆಸಿ ದೈಹಿಕ ಸಂಪರ್ಕ Read More »

ಡಿ. 6 ಮತ್ತು 7 ರಂದು ಮದ್ಯ ಮಾರಾಟ ನಿಷೇಧ..!

ಕುಕ್ಕೆ ಚಂಪಾ ಷಷ್ಠಿ ಹಿನ್ನೆಲೆಯಲ್ಲಿ ಡಿ. 6 ಮತ್ತು 7 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ದ. ಕ. ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಮಹೋತ್ಸವವು ನಡೆಯುತ್ತಿದ್ದು, ಡಿಸೆಂಬರ್ 6ರಂದು ಪಂಚಮಿ ರಥೋತ್ಸವ ಹಾಗೂ ಡಿಸೆಂಬರ್ 7ರಂದು ಚಂಪಾಷಷ್ಠಿ ಮಹಾರತೋತ್ಸವವು ನಡೆಯಲಿದೆ.ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿಸೆಂಬರ್ 6 ರ ಬೆಳಿಗ್ಗೆ 6

ಡಿ. 6 ಮತ್ತು 7 ರಂದು ಮದ್ಯ ಮಾರಾಟ ನಿಷೇಧ..! Read More »

ಬೆಳ್ಳಿ ಚುಕ್ಕೆಯಂತೆ ಹೊಳೆದು ಭಕುತರ ಪೊರೆವ ಬೆಳ್ಳಿಪ್ಪಾಡಿಯ ಶ್ರೀ ಉಳ್ಳಾಗಲು ಧೂಮಾವತಿ ದೈವಗಳು

ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಗಡಿನಾಡು ಪ್ರದೇಶ ಬೆಳ್ಳಿಪ್ಪಾಡಿಯು, ಸುಳ್ಯ ತಾಲೂಕಿನ ಜಾಲ್ಸೂರು, ಮಂಡೆಕೋಲು ಹಾಗೂ ಕನಕ ಮಜಲು ಈ ಮೂರು ಗ್ರಾಮಗಳಿಂದ ಸುತ್ತುವರಿದ ಗ್ರಾಮೀಣ ಪ್ರದೇಶ.ಇಲ್ಲಿ ಸುಮಾರು ನೂರು ನೂರೈವತ್ತು ವರ್ಷಗಳ ಹಿಂದಿನ ಇತಿಹಾಸದಿಂದಲೂ ನೆಲೆಸಿರುವಂತಹ ತಾಯಿ ಶ್ರೀ ಉಳ್ಳಾಕುಲು ಧೂಮಾವತಿ ದೈವದ ಕಾಲಾವಧಿ ನೇಮೋತ್ಸವವೂ ವರ್ಷಂಪ್ರತಿ ಡಿಸೆಂಬರ್ ತಿಂಗಳ 6 ಮತ್ತು 7 ರಂದು ಶ್ರದ್ಧೆ ಭಕ್ತಿ ಸಡಗರದಿಂದ ನಡೆಯುತ್ತದೆ.ವಿಶೇಷತೆ:ವಿಶೇಷವೆಂದರೆ ತುಳು ನಾಡಿನ ತುಳು ತಿಂಗಳ ಬೇಸ ಪತ್ತನಾಜೆ ಕಳೆದ ಮೇಲೆ ಸಾಮಾನ್ಯವಾಗಿ ಎಲ್ಲಿಯೂ

ಬೆಳ್ಳಿ ಚುಕ್ಕೆಯಂತೆ ಹೊಳೆದು ಭಕುತರ ಪೊರೆವ ಬೆಳ್ಳಿಪ್ಪಾಡಿಯ ಶ್ರೀ ಉಳ್ಳಾಗಲು ಧೂಮಾವತಿ ದೈವಗಳು Read More »

ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಸಂಕಷ್ಟದಲ್ಲಿ ಜಾತ್ರಾ ಅಂಗಡಿಯವರು

ಡಿ 5 ರಂದು ಸಂಜೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಸುರಿದಿದ್ದು ಷಷ್ಠಿ ಮಹೋತ್ಸವಕ್ಕೆ ಬಂದ ಅಂಗಡಿಯವರು ಸಂಕಷ್ಟಕ್ಕೆ ಬಿದ್ದಿದ್ದಾರೆ.ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಅಂಗಡಿಯವರು ಬಾಡಿಗೆ ನೆಲೆಯಲ್ಲಿ ಸ್ಥಳ ಪಡೆದಿದ್ದಾರೆ. ಇಂದು ಸುಮಾರು ಎರಡು ಗಂಟೆಗಳ ಕಾಲ ಮಳೆ ಬಂದ ಕಾರಣ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಕೆಲ ಅಂಗಡಿಗಳಲ್ಲಿ ನೀರು ನಿಂತಿದೆ. ಸೆಟ್ ಮಾಡಿದ ಆಟಿಕೆಗಳನ್ನು ಮತ್ತೆ ಮುಚ್ಚಿ ಇಡಬೇಕಾದ ಪರಿಸ್ಥಿತಿ ಬಂದಿದೆ. ಕೆಲ ವಸ್ತುಗಳು ನೀರಿನಲ್ಲಿ ಒದ್ದೆಯಾಗಿರುವುದಾಗಿ ವರದಿಯಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ

ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಸಂಕಷ್ಟದಲ್ಲಿ ಜಾತ್ರಾ ಅಂಗಡಿಯವರು Read More »

ಚೆಂಬು : ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ

ಸುಳ್ಯ ತಾಲೂಕಿನ ಸಮೀಪದ ಕೊಡಗಿನ ಚೆಂಬು ಗ್ರಾಮದ ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವವು ಗುರುವಾರ ನಡೆಯಿತು.ಡಿ.2ರಂದು ಬೆಳಿಗ್ಗೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭಂಡಾರಕ್ಕೆ ಹೋಗಿ ಡಿ.3ರಂದು ಭಾಗಮಂಡಲದಿಂದ ಭಂಡಾರ ತಂದು ರಾತ್ರಿ ಹಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡಲಾಯಿತು.ಬಳಿಕ ಪ್ರಾತ:ಕಾಲ ನೇಮೋತ್ಸವ ಜರುಗಿತು.ಡಿ.4ರಂದು ಎಡೆಕಡಪು, ಡಿ.5ರಂದು ಪ್ರಾತ:ಕಾಲ ಕಿರಿಯರನೇಮೋತ್ಸವಕ್ಕೆ ಎಣ್ಣೆ ಕೊಟ್ಟು, ಬೆಳಿಗ್ಗೆ ಉಳ್ಳಾಕುಲು ಕುದುರೆಬಂಡಿ ಎಳೆಯಲಾಯಿತು. ಪೂರ್ವಾಹ್ನ ಉಳ್ಳಾಕುಲು ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಚೆಂಬು : ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ Read More »

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ; ನೌಷದ್ ಮನೆ ಮೇಲೆ ಎನ್ .ಐ.ಎ ದಾಳಿ

ಸುಳ್ಯ ತಾಲೂಕಿನ ಬೆಳ್ಳಾರೆ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ NIA ನಾಪತ್ತೆಯಾಗಿರುವ ಆರೋಪಿ ನೌಷದ್ ಮನೆ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದೆ. ಬೆಂಗಳೂರಿನಿಂದ ಆಗಮಿಸಿದ 5 ಜನರ NIA ತಂಡ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ನಿವಾಸಿ ನೌಷದ್ ಮನೆಗೆ ಇಂದು ಮುಂಜಾನೆ 5.30ರ ಸುಮಾರಿಗೆ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದೆ. ನೌಷದ್ ಪತ್ತೆಗಾಗಿ NIA 2 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. NIA ಅಧಿಕಾರಿಗಳಿಗೆ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ; ನೌಷದ್ ಮನೆ ಮೇಲೆ ಎನ್ .ಐ.ಎ ದಾಳಿ Read More »

ದ.ಕ. ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅಮಾನತುಗೊಳಿಸಿ ಆದೇಶ

ಕರ್ತವ್ಯ ಲೋಪವೆಸಗಿದ ದ.ಕ. ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅವರ ವಿಚಾರಣೆಯ ನ್ನು ಕಾಯ್ದಿರಿಸಿ ಮುಂದಿನ ಆದೇಶ ಬರುವ ತನಕ ಅಮಾನತುಗೊಳಿಸಿ ಹೊರಡಿಸಲಾಗಿದೆ.ಪೊಲೀಸರು ಕಾರಾಗೃಹಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಆ ಬಳಿಕ ಬಿ.ಟಿ. ಓಬಳೇಶಪ್ಪ ಅವರನ್ನು ಅಮಾನತುಗೊಳಿಸಲಾಗಿತ್ತು.ಇನ್ನು ಮೈಸೂರು ಕೇಂದ್ರ ಕಾರಾಗೃಹದ ಸಹಾಯಕ ಅಧಿಧೀಕ್ಷಕ ಕೆ.ಎನ್. ಮೋಹನ್ ಕುಮಾರ್ ಅವರನ್ನು ಮಂಗಳೂರು ಕಾರಾಗೃಹದ ಅಧೀಕ್ಷಕರ ಪ್ರಭಾರ ವಹಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣ ಸೇವೆಯ ಮಹಾನಿರ್ದೇಶಕ ದೇವಜ್ಯೋತಿ ರೇ ಮಾಹಿತಿ

ದ.ಕ. ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅಮಾನತುಗೊಳಿಸಿ ಆದೇಶ Read More »

ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ದ್ರಾವಣ ಕಂಪೆನಿ ವಿರುದ್ಧ ಪ್ರಕರಣ ದಾಖಲು

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚಿಗೆ ಸಂಭವಿಸಿದ ಬಾಣಂತಿಯರ ಸಾವು ಪ್ರಕರಣ ಹಲವರನ್ನು ಫಾಅ ಬೆಚ್ಚಿ ಬೀಳಿಸಿದೆ. ಸದ್ಯ ಈ ದುರಂತಕ್ಕೆ ಕಾರಣವಾಗಿರಬಹುದು ಎನ್ನಲಾದ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ಸಚಿವರು ಆದೇಶ ಮಾಡಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಐವಿ ದ್ರಾವಣದ ಕಂಪನಿಯ ವಿರುದ್ಧ ಕೇಸ್ ದಾಖಲಿಸುವುದಾಗಿ

ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ದ್ರಾವಣ ಕಂಪೆನಿ ವಿರುದ್ಧ ಪ್ರಕರಣ ದಾಖಲು Read More »

ಗ್ರಾಮ ಪಂಚಾಯತಿಗಳ ಸಮಸ್ಯೆಗಳನ್ನು ವಿಧಾನ ಸೌಧದಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನ ; ಭಾಗೀರಥಿ ಮುರುಳ್ಯ

ಸುಳ್ಯ : ಇಂದು ಗ್ರಾಮ ಪಂಚಾಯತಿಗಳು ವಿವಿಧ ಸಮಸ್ಯೆಗಳಳನ್ನು ಎದುರಿಸುತ್ತಿದೆ. ಗ್ರಾ.ಪಂ.ನ ಸಮಸ್ಯೆಗಳ ಬಗ್ಗೆ ನಾನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಸಾಧ್ಯವಾಗುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭರವಸೆ ನೀಡಿದರು.ಅವರು ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಪಂಚಾಯತ್ ರಾಜ್ ಸಮಾವೇಶವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ನಿಮ್ಮೆಲ್ಲ ಬೇಡಿಕೆಗಳನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ, ಎಲ್ಲಾ

ಗ್ರಾಮ ಪಂಚಾಯತಿಗಳ ಸಮಸ್ಯೆಗಳನ್ನು ವಿಧಾನ ಸೌಧದಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನ ; ಭಾಗೀರಥಿ ಮುರುಳ್ಯ Read More »

error: Content is protected !!
Scroll to Top