ಮೆಸ್ಕಾಂ ಆಪರೇಟರ್ ಮೇಲೆ ಮೆಸ್ಕಾಂ ಎ.ಇ. ಯೊಬ್ಬರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಎ.ಇ ಸುಪ್ರಿತ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸುಳ್ಯ ಮೆಸ್ಕಾಂ ನಲ್ಲಿ 33 ಕೆ.ವಿ. ಲೈನ್ ಜಂಪರ್ ಕಡಿತವಾಗಿತ್ತೆಂದೂ, ಇದರ ರಿಪೇರಿಗೆಂದು ಮೆಸ್ಕಾಂ ಆಪರೇಟರ್ ರಾಘವ ಎಂಬವರು ಲೈನ್ ಆಫ್ ಮಾಡಿದ್ದರೆಂದೂ ಹೇಳಲಾಗಿದೆ. ಈ ಮಾಹಿತಿಯನ್ನು ಸೆಕ್ಸನ್ ಮುಖ್ಯಸ್ಥರಾಗಿರುವ ಇಂಜಿನಿಯರ್ ಗೆ ರಾಘವರು
ನೀಡಿದ್ದರೆನ್ನಲಾಗಿದೆ.
ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಮೆಸ್ಕಾಂ ಆಪರೇಟಿವ್ ಕಚೇರಿಗೆ ಬಂದ ಜೆ.ಇ. ಸುಪ್ರೀತ್ ರವರು ಕಚೇರಿಯಲ್ಲಿದ್ದ ಆಪರೇಟರ್ ರಾಘವರೊಡನೆ ಲೈನ್ ಆಫ್ ಮಾಡಿರುವ ವಿಚಾರ ಪ್ರಶ್ನಿಸಿ, ತನಗೆ ಯಾಕೆ ಮಾಹಿತಿ ಜನನನೀಡಿಲ್ಲವೆಂದು ತರಾಟೆಗೆತ್ತಿಕೊಂಡರಲ್ಲದೆ ರಾಘವರ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ. ಅಲ್ಲದೆ ಕಚೇರಿ ಮೊಬೈಲನ್ನು ನೆಲಕ್ಕೆ ಬಡಿದು ಒಡೆದರೆಂದೂ ಹೇಳಲಾಗಿದೆ.
ಎ.ಇ. ಸುಪ್ರೀತ್ ರು ಹಲ್ಲೆ ನಡೆಸಿದ ಪರಿಣಾಮ ರಾಘವರ ಕಣ್ಣಿನ ಭಾಗಕ್ಕೆ ಗಾಯವಾಗಿದ್ದು, ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಬಳಿಕ ಪೋಲೀಸ್ ಠಾಣೆಗೆ ಹೋಗಿ ಇಂಜಿನಿಯರ್ ಸುಪ್ರೀತ್ ವಿರುದ್ಧ ದೂರು ನೀಡಿದರೆಂದು ತಿಳಿದುಬಂದಿದೆ.ಪೊಲೀಸರು ದೂರು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ.
ಮೆಸ್ಕಾಂ ಅಪರೇಟರ್ ಮೇಲೆ ಮೆಸ್ಕಾಂ ಎ.ಇ ಸುಪ್ರಿತ್ ಹಲ್ಲೆ ನಡೆಸಿ ರಕ್ತ ಗಾಯ













