ಕಾಡುಪಂಜ : ಕಾಡು ಕೋಣ ಹತ್ಯೆ ಪ್ರಕರಣ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

ಕಾಡುಕೋಣ ಹತ್ಯೆ ಮಾಡಿ ಮಾಂಸ ಮಾರಾಟ ಮಾಡಿದ ಆರೋಪಕ್ಕೊಳಗಾಗಿ ಬಂಧಿತರಾಗಿದ್ದ ಇಬ್ಬರಿಗೆ ಸುಳ್ಯ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಕಾಡುಕೋಣ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇಲೆ ಸಂಪಾಜೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆ. 5 ರಂದು ದಾಳಿ ಮಾಡಿ ಪೆರಾಜೆ ಗ್ರಾಮದ ಶರತ್ ಮತ್ತು ಗೌತಮ್ ಅವರನ್ನು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದರು.ನಂತರ ಅವರನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರಿ ಪಡಿಸಲಾಗಿತ್ತು.
ಅಲ್ಲಿಯ ನ್ಯಾಯಾಧೀಶರು ಕಾಡು ಕೋಣ ಹತ್ಯೆ ಮಾಡಿದ ಸ್ಥಳ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಾಡುಪಂಜ ಸ್ಥಳ ಸುಳ್ಯ ತಾಲೂಕಿಗೆ ಸೇರಿದ ಸ್ಥಳವಾಗಿರುವ ಕಾರಣ ಕೇಸ್ ನ್ನು ಸ್ವೀಕಾರ ಮಾಡದೆ ಸುಳ್ಯ ಅರಣ್ಯ ಇಲಾಖೆ ಮತ್ತು ಸುಳ್ಯ ನ್ಯಾಯಾಲಯಕ್ಕೆ ಒಪ್ಪಿಸಲು ಸೂಚಿಸಿದ್ದರು. ನಂತರ ಸಂಪಾಜೆ ಅರಣ್ಯ ಇಲಾಖೆ ಆರೋಪಿಗಳನ್ನು ಸುಳ್ಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದರು.
ಸುಳ್ಯ ಅರಣ್ಯ ಇಲಾಖೆಯು ಆರೋಪಿಗಳನ್ನು ಆ.6 ರಂದು ರಾತ್ರಿ ಸುಳ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿದರು.



















Leave a Comment

Your email address will not be published. Required fields are marked *

error: Content is protected !!
Scroll to Top