ಕ್ರೈಂ

ಬೆಳ್ಳಾರೆಯ ಖ್ಯಾತ ಉದ್ಯಮಿ ನಿಧನ

ಬೆಳ್ಳಾರೆಯ ನೆಟ್ಟಾರಿನಲ್ಲಿರುವ ಅರ್ನಾಡಿ ರೈಸ್ ಮಿಲ್ ನ ಮಾಲಕರಾದ ಸದಾನಂದ ಭಟ್( 72 ವರ್ಷ)ಅರ್ನಾಡಿ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಾ. 17ರಂದು ನಿಧನರಾದರು. 1983 ರಲ್ಲಿ ರೈಸ್ ಮಿಲ್ಲನ್ನು ಸ್ಥಾಪಿಸುವ ಮೂಲಕ ಭತ್ತ ಬೆಳೆಯುವ ರೈತರಿಗೆ ಪಾಲಿಗೆ ವರದಾನವಾದರು. ಭತ್ತದೊಂದಿಗೆ, ತೆಂಗಿನ ಎಣ್ಣೆ, ಸಾಂಬಾರ ಪದಾರ್ಥಗಳನ್ನು ಕನಿಷ್ಠ ದರದಲ್ಲಿ ಪುಡಿ ಮಾಡಿ ಕೊಡುವುದು ಇತ್ಯಾದಿ ಮಾಡುತ್ತಿದ್ದರು. ಇತ್ತೀಚಿಗೆ ಮಿಲ್ಲನ್ನು ನಡೆಸಲು ಲೀಸ್ ನಲ್ಲಿ ಮನೋಹರ ಗಾಣಿಗರಿಗೆ ನೀಡಿ ತಮ್ಮ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ […]

ಬೆಳ್ಳಾರೆಯ ಖ್ಯಾತ ಉದ್ಯಮಿ ನಿಧನ Read More »

ಅಪಘಾತದಲ್ಲಿ ಯುವ ವಕೀಲ ನಿಧನ,ಅಂಗಾಂಗ ದಾನ

ಕಳೆದ ವಾರ ಬಿ.ಸಿ.ರೋಡಿನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಥಮ್ ಬಂಗೇರ (27) ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಪ್ರಥಮ್ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬ ಮಾನವೀಯತೆ ಮೆರೆದಿದೆ.ಮೃತರ ಎರಡು ಕಣ್ಣು, ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ

ಅಪಘಾತದಲ್ಲಿ ಯುವ ವಕೀಲ ನಿಧನ,ಅಂಗಾಂಗ ದಾನ Read More »

ತಲೆಯಲ್ಲಿ ಕೂದಲಿಲ್ಲವೆಂದು ಪತ್ನಿ ಗಂಡನಿಗೆ ಅಪಹಾಸ್ಯ ಮಾಡಿದ ಹಿನ್ನಲೆ,ಪತಿ ಆತ್ಮ ಹತ್ಯೆ

ನಿಮ್ಮ ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ ಅಪಹಾಸ್ಯ ಮಾಡಿದ್ದರಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಪರಶಿವಮೂರ್ತಿ(32) ಮೃತ ವ್ಯಕ್ತಿ.ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಅಪಹಾಸ್ಯ ಮಾಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಲಾರಿ ಚಾಲಕನಾಗಿದ್ದ ಪರಶಿವಮೂರ್ತಿ ಎರಡು ವರ್ಷದ ಹಿಂದೆ ಮಮತಾ ಅವರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಪರಶಿವಮೂರ್ತಿ ಕೂದಲು ಸಂಪೂರ್ಣ ಉದುರಿತ್ತು. ಹೊರಗಡೆ ಹೋದರೆ ನನೆಗೆ ನಾಚಿಕೆಯಾಗುತ್ತೆಂದು ಮಮತಾ ಅಪಹಾಸ್ಯ

ತಲೆಯಲ್ಲಿ ಕೂದಲಿಲ್ಲವೆಂದು ಪತ್ನಿ ಗಂಡನಿಗೆ ಅಪಹಾಸ್ಯ ಮಾಡಿದ ಹಿನ್ನಲೆ,ಪತಿ ಆತ್ಮ ಹತ್ಯೆ Read More »

ಅರಂತೋಡು : ಬೈಕ್ ಬೈಕ್ ಡಿಕ್ಕಿ ಸವಾರರಿಗೆ ಗಾಯ,ಓರ್ವನ ಹೆಬ್ಬೆರುಳು ತುಂಡಾಗಿ ರಸ್ತೆಗೆ ಬಿತ್ತು.

ಅರಂತೋಡು ಮುಖ್ಯ ರಸ್ತೆಯಲ್ಲಿ ತೊಡಿಕಾನ ತಿರುವು ರಸ್ತೆ ಸಮೀಪ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಎರಡು ಮುಖಾಮುಖಿ ಯಾಗಿ ಡಿಕ್ಕಿ ಹೊಡೆದು ಮೂರು ಬೈಕ್ ಸವಾರರು ಗಾಯ ಗೊಂಡು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ..ಒಬ್ಬ ಸವಾರ ನ ಕಾಲಿನ ಹೆಬ್ಬೆರಳು ತುಂಡು ಆಗಿ ರಸ್ತೆಯಲ್ಲಿ ಬಿದ್ದು ಕೊಂಡಿತು .ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.

ಅರಂತೋಡು : ಬೈಕ್ ಬೈಕ್ ಡಿಕ್ಕಿ ಸವಾರರಿಗೆ ಗಾಯ,ಓರ್ವನ ಹೆಬ್ಬೆರುಳು ತುಂಡಾಗಿ ರಸ್ತೆಗೆ ಬಿತ್ತು. Read More »

ಕಾರ್ ಹಾಗೂ ಲಾರಿ ನಡುವೆ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಿದ್ದಾಪುರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕಾರ ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಒಂದು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಅಪಘಾತದಲ್ಲಿ ಕಾರ್ ನಲ್ಲಿದ 3 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಅಂಕಲಿ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಕಾರ್ ಹಾಗೂ ಲಾರಿ ನಡುವೆ ಅಪಘಾತ: ಮೂವರು ಸ್ಥಳದಲ್ಲೇ ಸಾವು Read More »

ಎಡಮಂಗಲ : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಕಡಬ ತಾಲೂಕಿನ ಎಡಮಂಗಲ ಮರ್ದೂರಡ್ಕ ಎಂಬಲ್ಲಿ ವಿಶ್ವನಾಥ ಎಂಬವರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ.ವಿಶ್ವನಾಥರು ಸ್ಥಳೀಯ ನಿವಾಸಿಯಾಗಿದ್ದು ರೈಲ್ವೆ ಟ್ರ್ಯಾಕ್ ಮೊಬೈಲ್ ಹಿಡಿದುಕೊಂಡು ಕುಳಿತ್ತಿದ್ದರು.ರಾತ್ರಿ 10 ಗಂಟೆ ಸುಮಾರಿಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಗುದ್ದಿಕೊಂಡು ಹೋದುದರಿಂದ ವಿಶ್ವನಾಥರು ಮೃತಪಟ್ಟರೆಂದು ಹೇಳಲಾಗುತ್ತಿದೆ.

ಎಡಮಂಗಲ : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು Read More »

ಮಹಿಳೆಯನ್ನು ಸೊಂಡಿಲಿನಿಂದ ಎಸೆದು ಕೊಂದು ಹಾಕಿದ ಕಾಡಾನೆ

ಬೇಲೂರು ತಾಲೂಕಿನ ಕೋಗೋಡು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕೋಗೋಡು ಸುಶೀಲಮ್ಮ (60) ಮೃತರು.ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸುಶೀಲಮ್ಮಮೇಲೆ ಏಕಾಏಕಿ ದಾಳಿ ಮಾಡಿದ ಕಾಡಾನೆ ಸೊಂಡಿಲಿನಿಂದ ಎತ್ತಿ ಬಿಸಾಡಿ, ತಲೆ ಭಾಗವನ್ನು ತುಳಿದು ಸಾಯಿಸಿದೆ. ಮಹಿಳೆ ಸಾವಿನಿಂದಾಗಿ ಆಕ್ರೋಶಗೊಂಡ ಗ್ರಾಮಸ್ಥರು ಬೇಲೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಚೀಕನಹಳ್ಳಿಯಲ್ಲಿ ರಸ್ತೆ ತಡೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಜಿಲ್ಲೆಯಲ್ಲಿ ಜನವರಿಯಿಂದ 5 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದು ಈ ಪೈಕಿ

ಮಹಿಳೆಯನ್ನು ಸೊಂಡಿಲಿನಿಂದ ಎಸೆದು ಕೊಂದು ಹಾಕಿದ ಕಾಡಾನೆ Read More »

ಗ್ಯಾಸ್ ಸಿಲಿಂಡರ್‌ ವಾಹನ ಪಲ್ಟಿ

ಸುಳ್ಯ – ಜಾಲ್ಲೂರುಮುಖ್ಯ ರಸ್ತೆಯಲ್ಲಿ ಬೈತಡ್ಕ ತಿರುವಿನಲ್ಲಿ ಗ್ಯಾಸ್ ಸಿಲಿಂಡ‌ರ್ ಸಾಗಾಟದ ವಾಹನ ಮಾ.14ರಂದು ತಡರಾತ್ರಿ ಪಲ್ಟಿಯಾದ ಘಟನೆ ವರದಿಯಾಗಿದೆ.ಸುಮಾರು 11.30ಕ್ಕೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿವಾಹನ ಪಲ್ಟಿಯಾಯಿತು. ಸುಳ್ಯದಿಂದ ಮಂಗಳೂರು ಕಡೆಗೆ ಹೋಗುವ ವಾಹನ ಇದಾಗಿದ್ದು, ಪಲ್ಟಿಯಾದ ಪರಿಣಾಮ ಗ್ಯಾಸ್‌ ಸಿಲಿಂಡ‌ರ್ ರಸ್ತೆಗೆ ಬಿದ್ದಿದ್ದವು.ಚಾಲಕನಿಗೆ ಗಾಯವಾಗಿದ್ದು ಆತ ಸುಳ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆನ್ನಲಾಗಿದೆ

ಗ್ಯಾಸ್ ಸಿಲಿಂಡರ್‌ ವಾಹನ ಪಲ್ಟಿ Read More »

ಜಟ್ಟಿಪಳ್ಳ ರಸ್ತೆಗೆ ಉರುಳಿ ಬಿದ್ದ ತೆಂಗಿನ ಮರ,ಮೂರು ವಿದ್ಯುತ್ ಕಂಬ ತಂಡು,ಜನರು ಪ್ರಾಣಾಪಾಯದಿಂದ ಪಾರು

ಸುಳ್ಜ ಜಟ್ಟಿಪಳ್ಳ ರಸ್ತೆಯಲ್ಲಿ ತೆಂಗಿನ ಮರವೊಂದು ವಿದ್ಯುತ್ ಲೈನ್ ಮೇಲೆ ಮುರಿದ್ದು ಪವಾಡ ಸದೃಶ ವಾಗಿ ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ಇದೀಗ ವರದಿಯಾಗಿದೆ‌.ಬ್ರಹತ್ ಗಾತ್ರದ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಯಾವುದೇ ಅಪಾಯ ಸಂಭವಿಸಿಲ್ಲ.ಜಟ್ಟಿಪಳ್ಳ ರಸ್ತೆ ಬಂದ್ ಆಗಿದೆ.

ಜಟ್ಟಿಪಳ್ಳ ರಸ್ತೆಗೆ ಉರುಳಿ ಬಿದ್ದ ತೆಂಗಿನ ಮರ,ಮೂರು ವಿದ್ಯುತ್ ಕಂಬ ತಂಡು,ಜನರು ಪ್ರಾಣಾಪಾಯದಿಂದ ಪಾರು Read More »

ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಹೃದಯಾಘಾತದಿಂದ ನಿಧನ

ಮೂಡುಬಿದಿರೆ ನಗರ ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಮಾ.11ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 30 ವರ್ಷ ಪ್ರಾಯವಾಗಿತ್ತು.ಹ್ರದಯಘಾತಕ್ಕೆ ಒಳಗಾದಅವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಅವರು ಕೊನೆಯುಸಿರೆಳೆದರು.

ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಹೃದಯಾಘಾತದಿಂದ ನಿಧನ Read More »

error: Content is protected !!
Scroll to Top