ಕಾಡು ಹಂದಿಗೆ ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು,ರಸ್ತೆಯಲ್ಲಿ ಬಿದ್ದಿವೆ ಕಾಡು ಹಂದಿಯ ಹೆಪ್ಪು ಕಟ್ಟಿದ ರಕ್ತ
ಕಾಡು ಹಂದಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾಡು ಹಂದಿ ಮೃತಪಟ್ಟ ಘಟನೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕಡೆಪಾಲದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ನ.27ರಂದು ಮುಂಜಾನೆ ಸ್ಥಳೀಯರೊಬ್ಬರು ವಾಕಿಂಗ್ ಹೋಗುವ ಸಂದರ್ಭದಲ್ಲಿ ರಸ್ತೆಯಲ್ಲಿ ರಕ್ತದ ಗುರುತು ನೋಡಿ, ರಸ್ತೆ ಬದಿಯ ಚರಂಡಿಯಲ್ಲಿ ನೋಡಿದಾಗ ಹಂದಿ ಸತ್ತು ಬಿದ್ದಿರುವುದನ್ನು ಕಂಡಿದೆ. ಕೂಡಲೇ ಅವರು ಸಂಪಾಜೆ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದು, ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.