ಮೊಬೈಲ್ ಸ್ಪೋಟಗೊಂಡು ವ್ಯಕ್ತಿಗೆ ಗಾಯ

ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಮೊಬೈಲ್ ಸಿಡಿದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ. ಗುರುಪ್ರಸಾದ್ ನಿಡುಬೆ
ಎಂಬವರೇ ತನ್ನ ಮೊಬೈಲ್ ಸಿಡಿದು ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಅವರು ವಿವೋ ವೈ 100 ಎ ಮೊಬೈಲ್ ಉಪಯೋಗಿಸುತ್ತಿದ್ದು, ಮಾ.22ರಂದು ಮೊಬೈಲನ್ನು ತನ್ನ ಪ್ಯಾಂಟ್‌ನ ಕಿಸೆಯೊಳಗೆ ಹಾಕಿಕೊಂಡಿದ್ದರು. ಜೇಬಿನೊಳಗಿದ್ದ ಮೊಬೈಲ್ ಒಮ್ಮಿದೊಮ್ಮೆ ಸ್ಪೋಟಗೊಂಡು ತೊಡೆಯ ಭಾಗಕ್ಕೆ ಗಾಯವಾಗಿದೆ.
ಕಾಲಿಗೂ ಗಾಯವಾವಾಗಿದ್ದು, ಕಾಲಿನ ತೊಡೆಯ ಭಾಗದಲ್ಲಿ ಮೊಬೈಲ್ ಇದ್ದ ಜಾಗದ ಚರ್ಮ ಬೆಂದು ಹೋಗಿದೆ.ಆಸ್ಪತ್ರೆಗೆ ತೆರಳಿ ಗುರುಪ್ರಸಾದ್ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.





















































































Leave a Comment

Your email address will not be published. Required fields are marked *

error: Content is protected !!
Scroll to Top