ಪ್ರಚಲಿತ

ತೊಡಿಕಾನ : ಜ.27ಕ್ಕೆ ಚಾಕಟೆಡಿ ನೇಮೋತ್ಸ ಜ.28ಕ್ಕೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾಕ್ಕೆ ಸೇರಿರುವ ಚಾಕಟೆಡು ನೇಮೋತ್ಸವ ಜನವರಿ 27ರಂದು ಮತ್ತು ಜ.28ರಂದು ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆಯಲಿರುವುದು.ಜನವರಿ 27ರಂದು ರಾತ್ರಿ 7 ಗಂಟೆಗೆ ಪಾಷಾಣಮೂರ್ತಿ ಅಮ್ಮನವರ ಭಂಡಾರ ತೆಗೆಯುವುದು, ಜನವರಿ 28ರಂದು ಬೆಳಿಗ್ಗೆ 7: ಗಂಟೆಗೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು ಎಂದು ದೇವಸ್ಥಾನದ ಕಚೇರಿ ಪ್ರಕಟಣೆ ತಿಳಿಸಿದೆ.

ತೊಡಿಕಾನ : ಜ.27ಕ್ಕೆ ಚಾಕಟೆಡಿ ನೇಮೋತ್ಸ ಜ.28ಕ್ಕೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ Read More »

ಸುಳ್ಯ : ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ನೇಮೋತ್ಸವಕ್ಕೆ ಗೊನೆಮೂಹೂರ್ತ

ಸುಳ್ಯದ ಗಾಂಧಿನಗರ ಕಾರಣೀಕ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ನೇಮೋತ್ಸವವು ಫೆ.2 ರಂದು ನಡೆಯಲಿದ್ದು ಜ.26 ರಂದು ಗೊನೆ ಮುಹೂರ್ತ ಕಾರ್ಯಕ್ರಮವು ನಡೆಯಿತು.ಈ ಸಂದರ್ಭದಲ್ಲಿ ದೈವಸ್ಥಾನದ ಪೂಜಾರಿ ಮೋನಪ್ಪ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ ನಾವೂರು, ಆಡಳಿತ ಧರ್ಮದರ್ಶಿ ಮಂಡಳಿಯ ಭಾಸ್ಕರ ಗೌಡ ಐಡಿಯಲ್, ಕೇಶವ ನಾಯಕ್ ಸುಳ್ಯ, ಹರೀಶ್ ಬೂಡುಪನ್ನೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಸುಳ್ಯ : ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ನೇಮೋತ್ಸವಕ್ಕೆ ಗೊನೆಮೂಹೂರ್ತ Read More »

ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ 76ನೇ ಗಣರಾಜ್ಯೋತ್ಸವ

ಕೆವಿಜಿ : ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ 76ನೇ ವರ್ಷದ ಗಣರಾಜ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಜನವರಿ 26ರಂದು ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕುರುಂಜಿಭಾಗ್, ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದರವರು ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.)ಸುಳ್ಯ ಇದರ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಶ್ರೀ. ಚಂದ್ರಶೇಖರ ಪೇರಾಲ್. ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ

ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ 76ನೇ ಗಣರಾಜ್ಯೋತ್ಸವ Read More »

ಸದ್ಗುರುಶ್ರೀ ರಾಮರವರ ದಿವ್ಯ ಮಾರ್ಗದರ್ಶನದಲ್ಲಿ ಸುಳ್ಯದ ಗೌಡ ಸಮುದಾಯ ಭವನದಲ್ಲಿ ಫೆ. 9ರಂದು ಮನೋಶಕ್ತಿ ಕಾರ್ಯಗಾರ

ಸದ್ಗುರುಶ್ರೀ ರಾಮರವರ ದಿವ್ಯ ಮಾರ್ಗದರ್ಶನದಲ್ಲಿ ಸುಳ್ಯದ ಗೌಡ ಸಮುದಾಯ ಭವನದಲ್ಲಿ ಫೆ. 9ರಂದು ಬೆಳಿಗ್ಗೆ 9:30 ರಿಂದ ಸಂಜೆ 4 ಗಂಟೆಗೆ ತನಕ ಮನೋಶಕ್ತಿ ಕಾರ್ಯಗಾರ ನಡೆಯಲಿದೆ ಎಂದು ಉಪಾಸನ ಫೌಂಡೇಶನ್ ಶ್ರೀ ಉಪಾಸಕರಾದ ಎನ್. ಪಿ ಧರ್ಮತೇಜ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಕಾರ್ಯಾಗಾರದಲ್ಲಿ ಸಂಕಲ್ಪದ ಸರಿಯಾದ ಕ್ರಮ,ಸುಪ್ತವಾದ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸುವುದು, ಮನೋಶಕ್ತಿಯ ಅರಿವು ಹಾಗೂ ಅದನ್ನು ಬಳಸಿ ಯಶಸ್ಸು ಗಳಿಸುವುದು ಹೇಗೆ?ಶ್ವಾಸಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಮುದ್ರೆ,

ಸದ್ಗುರುಶ್ರೀ ರಾಮರವರ ದಿವ್ಯ ಮಾರ್ಗದರ್ಶನದಲ್ಲಿ ಸುಳ್ಯದ ಗೌಡ ಸಮುದಾಯ ಭವನದಲ್ಲಿ ಫೆ. 9ರಂದು ಮನೋಶಕ್ತಿ ಕಾರ್ಯಗಾರ Read More »

ಪೆರಾಜೆ ಜ್ಯೋತಿ ಪ್ರೌಢಶಾಲೆ ಪ್ರಣವ್ ಪೌಂಢೇಶನ್ ಗೆ ಹಸ್ತಾಂತರ

ಪೆರಾಜೆಯ ಜ್ಯೋತಿ ಪ್ರೌಢಶಾಲೆಯನ್ನು ಇನ್ನು ಮುಂದಕ್ಕೆ ಬೆಂಗಳೂರಿನ ಪ್ರಣವ ಫೌಂಡೇಶನ್ ನೋಡಿಕೊಳ್ಳಲಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಜ್ಯೋತಿ ವಿದ್ಯಾ ಸಂಘವು ಹಚ್ಚಪ್ರಣವ ಫಂಡೇಶನ್ ಗೆ ಆಡಳಿತವನ್ನು ಬಿಟ್ಟುಕೊಟ್ಟಿದೆ” ಎಂದು ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷರಾಗಿದ್ದ ಡಾ.ಎನ್.ಎ.ಜ್ಞಾನೇಶ್ ತಿಳಿಸಿದರು.ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು‌.ಜ್ಯೋತಿ ಪ್ರೌಢಶಾಲೆ ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆ. ಅಲ್ಲಿ ಸರಕಾರಿ ಸಂಬಳ ಪಡೆಯುತ್ತಿದ್ದ ಶಿಕ್ಷಕರು ನಿವೃತ್ತಿಯಾದ ಬಳಿಕ ಹೊಸ ಶಿಕ್ಷಕರಿಗೆ ಸರಕಾರ ನೇಮಕಾತಿ ಮಾಡಿಕೊಳ್ಳದಿರುವುದರಿಂದ ಮತ್ತು ಹೊಸದಾಗಿ ಆಡಳಿತ ಮಂಡಳಿಯು ನೇಮಕ

ಪೆರಾಜೆ ಜ್ಯೋತಿ ಪ್ರೌಢಶಾಲೆ ಪ್ರಣವ್ ಪೌಂಢೇಶನ್ ಗೆ ಹಸ್ತಾಂತರ Read More »

ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜ.25 ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಭಾರತದಲ್ಲಿ ವಾರ್ಷಿಕವಾಗಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಯಾದ ಕು. ವಂಶಿಕ ಎಸ್ ಪಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ, ಕಾಲೇಜಿನ ಬೋಧಕ ಬೋಧಕೇತರ

ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ Read More »

ಸುಳ್ಯದಲ್ಲಿ ಮಲ್ಲಿಕಾ ಸ್ಟಾಲ್ ನ ಲೆಮೆನ್ ಜ್ಯೂಸ್ ಶುಭಾರಂಭ

. ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಲ್ಲಿಕಾ ಸ್ಟಾಲ್ ನ ಮಾಲಕ ಬಾಲಕೃಷ್ಣ ತೊಡಿಕಾನ ಇವರ ಮಾಲಕತ್ವದ ಲೆಮೆನ್ ಜ್ಯೂಸ್ ಸ್ಟಾಲ್ ಶುಭಾರಂಭಗೊಂಡಿತು.ಸ್ಟಾಲನ್ನು ಖ್ಯಾತ ಯಕ್ಷಗಾನ ಕಲಾವಿದ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕತರಾದ ಜಯಾನಂದ ಸಂಪಾಜೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕೆ.ಎಸ್. ಆರ್.ಟಿ.ಸಿ ಯ ಸಂಚಾರ ನಿಯಂತ್ರಕ ಶಾಂತಪ್ಪ ಗೌಡ, ಗೋಪಾಲ ಈಶ್ವರಡ್ಕ ಮತ್ತಿತರರು ಉಪಸ್ಥಿತರಿದ್ದರು. .

ಸುಳ್ಯದಲ್ಲಿ ಮಲ್ಲಿಕಾ ಸ್ಟಾಲ್ ನ ಲೆಮೆನ್ ಜ್ಯೂಸ್ ಶುಭಾರಂಭ Read More »

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಜನ್ಮದಿನದ ಸಂಭ್ರಮ

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಕಾರ್ಯಕ್ರಮಗಳ ನಿರೂಪಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನುಶ್ರೀ ಕನ್ನಡ ಕಿರುತೆರೆ ಲೋಕದಲ್ಲಿ ಸಖತ್ ಜನಪ್ರಿಯತೆ ಪಡೆದಿದ್ದಾರೆ. ನಿರೂಪಕಿ ಮಾತ್ರವಲ್ಲದೇ ನಟಿಯಾಗಿರುವ ಅನುಶ್ರೀ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅನುಶ್ರೀ ಅವರು ಅನೇಕ ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ.

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಜನ್ಮದಿನದ ಸಂಭ್ರಮ Read More »

ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿದ “ಅಲೆಮಾರಿ ಆರ್ಭಟ” ಮ್ಯೂಸಿಕ್ ಆಲ್ಬಮ್ ದಾವಣಗೆರೆಯಲ್ಲಿ ಬಿಡುಗಡೆ

ಸುಳ್ಯದ ಸಾಹಿತಿ, ಜ್ಯೋತಿಷಿ, ಚಿತ್ರ ನಿರ್ದೇಶಕ ಮತ್ತು ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸಾಹಿತ್ಯ ರಚಿಸಿ ಹಾಡಿರುವ “ಅಲೆಮಾರಿ ಆರ್ಭಟ” ಮ್ಯೂಸಿಕ್ ಆಲ್ಬಮ್ ನ್ನು ಇತ್ತೀಚಿಗೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜರುಗಿದ ರಾಜ್ಯಮಟ್ಟದ ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ -2025 ಮಹಾ ಸಮ್ಮೇಳನದಲ್ಲಿ ಚಿತ್ರದುರ್ಗ ಛಲವಾದಿ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಬಸವನಾಗಿದೇವ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಪ್ರವರ್ಗ -1 ರ ಅಲೆಮಾರಿ ಮತ್ತು ಅರೆ

ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿದ “ಅಲೆಮಾರಿ ಆರ್ಭಟ” ಮ್ಯೂಸಿಕ್ ಆಲ್ಬಮ್ ದಾವಣಗೆರೆಯಲ್ಲಿ ಬಿಡುಗಡೆ Read More »

error: Content is protected !!
Scroll to Top