ಸುಳ್ಯ ಸೀಮೆ ತೊಡಿಕಾನ ಶ್ರೀ ದೇವಳದ ಮತ್ಸ್ಯತೀರ್ಥ ಹೊಳೆಯಲ್ಲಿರುವ ದೇವರ(ಮಹ಼ಷೀರ್ ಜಾತಿಯ) ಮೀನುಗಳನ್ನು ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಗಿರೀಶ್ ಓ ಮತ್ತು ತಂಡದವರು ಭೇಟಿ ನೀಡಿ ಪರಿಶೀಲಿಸಿದರು.
ಮೀನುಗಳಿಗೆ ಮೀನುಗಾರಿಕಾ ಇಲಾಖೆಯಿಂದ ತಯಾರಿಸಿದ ಆಹಾರವನ್ನು ನೀಡಬೇಕು.ಇದರಿಂದ ಮೀನುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಮಿತ ಆಹಾರನ್ನು ನೀಡಬೇಕು.ಇಲ್ಲಿಯ ಮಹ಼ಷೀರ್ ಮೀನುಗಳ ರಕ್ಷಣೆಗೆ ಇಲಾಖಾ ವತಿಯಿಂದ ಸ್ಪಂಧಿಸಲಾಗುವುದು.ದೇವಳದವರು ಸಹಕಾರ ನೀಡಬೇಕೆಂದು ಹೇಳಿದರು.
ಮಡಿಕೇರಿ ವಿಭಾಗದ ಉಪನಿರ್ದೇಶಕರಾದ ಸಚಿನ್ ಎಸ್.ಹಾಗೂ ಹಾರಂಗಿ ವಿಭಾಗದ ಸಹಾಯಕ ನಿರ್ದೇಶಕರಾದ ಸಚಿನ್ ಎಸ್.ಎಂ.ಉಪಸ್ಥಿತರಿದ್ದರು.
ತೊಡಿಕಾನ ದೇವಳಕ್ಕೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಗಿರೀಶ್ ತಂಡ ಭೇಟಿ




















