ಬದ್ರಿಯಾ ಜುಮಾ ಮಸೀದಿ, ದಿಕ್ರ್ ಸ್ವಲಾತ್ ಸಮಿತಿ ಅರಂತೋಡು ಇದರ ಆಶ್ರಯದಲ್ಲಿ 22 ನೇ ವಾರ್ಷಿಕ ದಿಕ್ರ್ ಸ್ವಲಾತ್ ಮಜಿಲಿಸ್ ಹಾಗೂ ಅರಂತೋಡು ಮಸೀದಿಯಲ್ಲಿ 35 ವರ್ಷಗಳ ಖತೀಬರಾಗಿ ಸೇವೆ ಸಲ್ಲಿಸಿ ಅಗಲಿದ ಮರ್ ಹೂಮ್ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ರವರ 7 ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮವು ಎ.30 ರಂದು ಅರಂತೋಡು ಜುಮಾ ಮಸೀದಿಯಲ್ಲಿ ನಡೆಯಲಿದೆ.
ದಿಕ್ರ್ ಸ್ವಲಾತ್ ನೇತೃತ್ವವನ್ನು ಸ್ವಲಾತ್ ಸಮಿತಿಯ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಅಲ್ ಹಾಜ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕರವರು ವಹಿಸಲಿದ್ದಾರೆ. ದುವಾವನ್ನು ಅರಂತೋಡು ಜುಮಾ ಮಸೀದಿಯ ಖತೀಬರಾದ ಆಸಿಫ್ ಅಝ್ ಹರಿ ನೆರವೇರಿಸಲಿದ್ದಾರೆ. ಅನುಸ್ಮರಣಾ ಭಾಷಣವನ್ನು ಪೇರಡ್ಕ ಮುಹಿಧೀನ್ ಜುಮಾ ಮಸೀದಿಯ
ಖತೀಬರಾದ ಅಹ್ಮದ್ ನಈಮ್ ಪೈಝಿ ಅಲ್ ಮಅಬರಿ ಮಾಡಲಿದ್ದು, ಮುಖ್ಯ ಪ್ರಭಾಷಣವನ್ನು ಮುಹಮ್ಮದ್ ಆಸಿಫ್ ಅಝ್ ಹರಿ ನಾಟೆಕಲ್ ರವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ. ಎಂದು ಅರಂತೋಡು ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ತಿಳಿಸಿದ್ದಾರೆ.
ಎ.30 ರಂದು ಅರಂತೋಡು ಮಸೀದಿಯಲ್ಲಿ ವಾರ್ಷಿಕ ದಿಕ್ರ್ ಸ್ವಲಾತ್ ಹಾಗೂ ಮರ್ ಹೂಮ್ ಡಾ| ಶಾಹ್ ಮುಸ್ಲಿಯಾರ್ ರವರ ಅನುಸ್ಮರಣೆ














































