ಪ್ರಚಲಿತ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ಮಂಜೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಧರ್ಮಸ್ಥಳ ಇದರ “ಸಮುದಾಯ ಅಭಿವೃದ್ಧಿ ವಿಭಾಗ” ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ನೀಡಲಾಗಿದೆ. ಅನುದಾನ ಮಂಜುರಾತಿ ಪತ್ರವನ್ನು ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡರು ಹಸ್ತಾಂತರಿಸಿದರು. ಅನುದಾನ ಪಡೆಯಲು ಯೋಜನಾಧಿಕಾರಿ ಮಾದವ ಗೌಡ, ಸುರೇಶ್ ಕಣೆಮರಡ್ಕ, ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಶ್ರೀ ರಾಮಚಂದ್ರ ಕಲ್ಲುಗದ್ದೆ, ಒಕ್ಕೂಟ ಸೇವಾಪ್ರತಿನಿಧಿ ಜಯಲಕ್ಷ್ಮೀ ಸಹಕರಿಸಿದರು.ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ಮಂಜೂರು Read More »

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಯವರಿಗೆ ಜನತಾ ನ್ಯೂಸ್ ಅವಾರ್ಡ್ಸ್ 2026

ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಜನತಾ ಅವಾರ್ಡ್ಸ್ 2026 ಕಾರ್ಯಕ್ರಮವನ್ನು ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ ಅರಮನೆ ವೆನ್ಯೂವಿ ನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಏರ್ಪಡಿಸಲಾಗಿದೆ‌.ಅದರಲ್ಲಿ ಜೇನು ಗಡ್ಡದಾರಿ ,ಕೃಷಿ ಹವ್ಯಾಸೀ ಬರಹಗಾರ ,ಕೃಷಿ ಸಂಶೋಧನೆ ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ ಆಯ್ಕೆಗೊಂಡಿದ್ದಾರೆ. ಪ್ರಶಸ್ತಿಗೆ ಆಯ್ಕೆಗೊಂಡವರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಜನತಾ ಚಾನೆಲ್

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಯವರಿಗೆ ಜನತಾ ನ್ಯೂಸ್ ಅವಾರ್ಡ್ಸ್ 2026 Read More »

ಅಜ್ಜಾವರ : ಮಹೀಷಮರ್ದಿನಿ ದೇವಳದಲ್ಲಿ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ

ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ದೇವಳದಲ್ಲಿ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ವಿವಿಧ ವೈಧಿಕ ಪೂಜಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ದೇವಳದ ಸಮಿತಿಯವರು,ನೂರಾರು ಭಕ್ತರು ಉಪಸ್ಥಿತರಿದ್ದರು.

ಅಜ್ಜಾವರ : ಮಹೀಷಮರ್ದಿನಿ ದೇವಳದಲ್ಲಿ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ Read More »

ಸಂಪಾಜೆ ಗ್ರಾಮಕ್ಕೆ ಮೂರನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

ಸುಳ್ಯ ತಾಲೂಕಿನಿಂದ ಸಂಪಾಜೆ ಗ್ರಾಮ ಗ್ರಾಮ ಪಂಚಾಯತ್ 2024-2025ನೇ ಸಾಲಿನ ತಾಲೂಕು ಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.2024-2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ, ರಾಜ್ಯದ ಒಟ್ಟು 239 ತಾಲ್ಲೂಕುಗಳ ಪೈಕಿ ಬಾಗಲಕೋಟೆ ಜಿಲ್ಲೆಯ ‘ತೇರದಾಳ’ ತಾಲ್ಲೂಕನ್ನು ಹೊರತುಪಡಿಸಿ, ವಿಭಾಗ ಮಟ್ಟದ ಪುರಸ್ಕಾರಕ್ಕೆ 12, ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ 31 ಹಾಗೂ ತಾಲ್ಲೂಕು ಮಟ್ಟದ ಪುರಸ್ಕಾರಕ್ಕೆ 195 ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು 238 ಗ್ರಾಮ ಪಂಚಾಯತಿಗಳನ್ನು 2024-25 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ನಿಯಮಾನುಸಾರವಾಗಿ

ಸಂಪಾಜೆ ಗ್ರಾಮಕ್ಕೆ ಮೂರನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ Read More »

ಅಜ್ಜಾವರ : ವೈಭವದಿಂದ ನಡೆದ ಶ್ರೀ ಮಹಿಷಮರ್ದಿನೀ ದೇವರ ಭೂತಬಲಿ ಉತ್ಸವ

ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಎ.5 ರಂದು ಶ್ರೀ ಭೂತಬಲಿ,ಉತ್ಸವ ಬಲಿ, ಪಲ್ಲಕ್ಕಿ ಸೇವೆ, ವಸಂತ ಮಂಟಪ ಪೂಜೆ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು.ಸಂದರ್ಭದಲ್ಲಿ ಅಜ್ಜಾವರ ಮಹಿಷಮರ್ದಿನೀ ಸೇವಾ ಟ್ರಸ್ಟ್ ಸದಸ್ಯರು, ಜೀರ್ಣೋದ್ದಾರ ಸಮಿತಿ, ಉತ್ಸವ ಸಮಿತಿ, ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಅಜ್ಜಾವರ : ವೈಭವದಿಂದ ನಡೆದ ಶ್ರೀ ಮಹಿಷಮರ್ದಿನೀ ದೇವರ ಭೂತಬಲಿ ಉತ್ಸವ Read More »

ಸುಳ್ಯ ಸೀಮೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ 18 ಗ್ರಾಮಸ್ಥರಿಂದ ಬೃಹತ್ ಕರಸೇವೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಏ.5ರಂದು ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ದೇವಸ್ಥಾನದ ಪವಿತ್ರ ತೀರ್ಥ ಮೂಲಗಳಾದ ವಾರಾಣಸಿ ತೀರ್ಥ ಮತ್ತು ಮತ್ಸತೀರ್ಥ ಹಾಗೂ ದೇವಸ್ಥಾನದ ಪರಿಸರದ ಸ್ವಚ್ಛತೆ ಸಲುವಾಗಿ ಬ್ರಹತ್ ಕರಸೇವೆ ನಡೆಯಿತು.ಕರಸೇವೆಯಲ್ಲಿ ಸುಮಾರು 500ಕ್ಕೂ ಮಿಕ್ಕಿ ಭಕ್ತಾಧಿಗಳು ಭಾಗವಹಿಸಿದರು‌.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು, ಜಾತ್ರೋತ್ಸವ ಸಮಿತಿಯವರು ಜೀರ್ಣೊದ್ದಾರ ಸಮಿತಿಯವರು ಸೀಮೆಯ ಹೆಚ್ಚಿನ ಭಕ್ತಾಧಿಗಳು ಭಾಗವಹಿಸಿ ಕರಸೇವೆಯನ್ನು ಯಶಸ್ವಿಗೊಳಿಸಿದರು. ಕರಸೇವೆಯಲ್ಲಿ ಭಾಗವಹಿಸಿದವರಿಗೆ

ಸುಳ್ಯ ಸೀಮೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ 18 ಗ್ರಾಮಸ್ಥರಿಂದ ಬೃಹತ್ ಕರಸೇವೆ Read More »

ಪುನ್ಚತ್ತಾರು : ಶ್ರದ್ಧಾ ಭಕ್ತಿಯಿಂದ ನಡೆದ ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ನಡೆದ ಶ್ರೀ ವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ ಎ. 3 ಮತ್ತು 4ರಂದು ನಡೆಯಿತು. ಏ.4ರಂದು ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು.ಬಳಿಕ ಪ್ರಸಾದ ವಿತರಣೆ ನಡೆಯಿತು.ನಂತರ ಗುಳಿಗ ದೈವದ ಕೋಲ ನಡೆಯಿತು.ಏ.2ರಂದು ಹಸಿರು ಕಾಣಿಕೆ ಸಮರ್ಪಣೆ ನಡೆಯಿತು.ಎ.3ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಸಂಜೆ ವಿಷ್ಣುಪುರ ದೈವಸ್ಥಾನದಿಂದಭಂಡಾರ ತೆಗೆಯಲಾಯಿತು. ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶ

ಪುನ್ಚತ್ತಾರು : ಶ್ರದ್ಧಾ ಭಕ್ತಿಯಿಂದ ನಡೆದ ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ಗೂನಡ್ಕ : ಕಾಡಾನೆಗಳಿಂದ ಬೆಳೆ ನಾಶ

ಸಂಪಾಜೆ ಗ್ರಾಮದ ಬೈಲೆ ಪರಿಸರದಲ್ಲಿ ಸುತ್ತಾಡುತ್ತಿದ್ದ ಕಾಡಾನೆಗಳು ಏ.,4ರಂದು ಬೆಳಗಿನ ಜಾವ 5.40 ರ ಸುಮಾರಿಗೆ ದೀಪಕ್‌ ಬೈಲೆಯವರ ತೋಟಕ್ಕೆ ಹಾಗೂ ಮೋಹನ್ ಪೆಲ್ತಡ್ಕ ಅವರ ತೋಟಕ್ಕೆ ನುಗ್ಗಿ ಬಾಳೆಗಳನ್ನು ಪುಡಿ ಮಾಡಿದೆ , ಈ ಹಿಂದೆಯೂ ಇದೇ ಆನೆ ಬೈಲೆಯ ಇಬ್ಬರ ತೋಟಕ್ಕೆ ನುಗ್ಗಿ ಬಾಳೆ ಮಾತ್ರ ತಿಂದು ಹೋಗಿತ್ತು .

ಗೂನಡ್ಕ : ಕಾಡಾನೆಗಳಿಂದ ಬೆಳೆ ನಾಶ Read More »

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಹಿನ್ನಲೆ ವಿವಿಧ ಸಮಿತಿಗಳ ತುರ್ತು ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವ ಏ.13ರಿಂದ ಏ.20ರ ತನಕ ವೈಭವದಿಂದ ನಡೆಯಲಿದ್ದು ಏ.1ರಂದು ಜಾತ್ರೋತ್ಸವ ವಿವಿಧ ಸಮಿತಿಗಳ ತುರ್ತು ಸಭೆದೇವಳದ ಅಕ್ಷಯ ಮಂದಿರದಲ್ಲಿ ನಡೆಯಿತು‌.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಅಧ್ಯಕ್ಷತೆ ವಹಿಸಿದ್ದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆಯವರು ಈ ಸಂದರ್ಭದಲ್ಲಿ ಮಾತನಾಡಿ ಏ.5ರಂದು ದೇವಳದಲ್ಲಿ ಸುಳ್ಯ ಸೀಮೆಯ 18 ಗ್ರಾಮಗಳ ಭಕ್ತರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳು ಕರಸೇವೆಗೆ ಆಗಮಿಸಲಿದ್ದು ಈ ಸಂದರ್ಭದಲ್ಲಿ ಊರಿನವರು ಹೆಚ್ಚಿನ‌ ಸಂಖ್ಯೆಯಲ್ಲಿ

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಹಿನ್ನಲೆ ವಿವಿಧ ಸಮಿತಿಗಳ ತುರ್ತು ಸಭೆ Read More »

ಗುತ್ತಿಗಾರು : ಪೈಕ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ

ಗುತ್ತಿಗಾರಿನ ಪೈಕ 12 ಒಕ್ಕಲಿಗೊಳಪಟ್ಟ ಪೈಕ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಏ.02 ರಂದು ನಡೆಯಿತು. ಏಪ್ರಿಲ್ 8 ಮತ್ತು 9 ರಂದು ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಗುತ್ತಿಗಾರು : ಪೈಕ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ Read More »

error: Content is protected !!
Scroll to Top