ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಜಾಲ್ಸೂರಿಗೆ ಆಗಮನ

ಸುಳ್ಯ ಪದವು ಈಶ್ವರ ಮಂಗಳ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ಎ.೯ ರಿಂದ ಎ.೧೨ ವರೆಗೆ ನಡೆಯಲಿದ್ದು ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆಯು ಏ.8ರಂದು ಜಾಲ್ಸೂರಿಗೆ ಆಗಮಿಸಿತು.
ಗೋಳಿಕಟ್ಟೆಯಿಂದ ಜಾಲ್ಸೂರು ಪೇಟೆಯವರೆಗೆ ಶ್ರೀ ವರಮಹಾಲಕ್ಷ್ಮಿ ಸ್ತ್ರೀಶಕ್ತಿ ಗೊಂಚಲು ಸಮಿತಿ ವತಿಯಿಂದ ಪೂರ್ಣಕುಂಭ ಸ್ವಾಗತಿಲಾಯಿತು.
ಪೇಟೆಯಲ್ಲಿ ಜಾಲ್ಸೂರು ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಶ್ರೀರಾಮ ಹನುಮ ಜ್ಯೋತಿ ಹಸ್ತಾಂತರಿಸಲಾಯಿತು.
ಭಜನಾ ಮಂದಿರದ ಗೌರವಾಧ್ಯಕ್ಷ ಮೋಹನ್ ನಂಗಾರು, ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್, ನ.ಸೀತಾರಾಮ, ಮಾಧವ ಗೌಡ ಕಾಳಮನೆ, ಆತ್ಮರಾಮ ಗಬ್ಬಲಡ್ಕ, ಗಂಗಾಧರ ಕಾಳಮನೆ, ಶಿವರಾಮ ರೈ ಕುರಿಯ, ಜಾಲ್ಸೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಾವಿತ್ರಿ ಅಡ್ಕಾರು, ಕೆ.ಎಂ.ಬಾಬು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.





















































































Leave a Comment

Your email address will not be published. Required fields are marked *

error: Content is protected !!
Scroll to Top