ಬಳ್ಳಾರಿ ಜೈಲಿನಲ್ಲಿರುವ ಶಿಕ್ಷಾ ಬಂಧಿಯೋರ್ವ ಪಿ.ಯು.ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ!

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಜೈಲಿನಲ್ಲಿರುವ ಶಿಕ್ಷಾ ಬಂಧಿಯೋರ್ವ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ಘಟನೆ ವರದಿಯಾಗಿದೆ.
ಜೀವಾವಧಿ ಶಿಕ್ಷೆಗೊಳಗಾಗಿರುವ ಅಶೋಕ್ ಕುಮಾರ್ ಎಂಬ ಶಿಕ್ಷಾ ಬಂಧಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 600 ಅಂಕಗಳಿಗೆ 481 ಅಂಕಗಳನ್ನು ಪಡೆದು ಶೇಕಡಾ 81% ರಷ್ಟು ಫಲಿತಾಂಶದೊಂದಿಗೆ ಪಾಸಾಗಿದ್ದಾನೆ.
ಜೈಲಿನಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ ಬಂಧಿ ಅಶೋಕ್ ಕುಮಾರ್ ಕನ್ನಡದಲ್ಲಿ 82, ಇಂಗ್ಲಿಷ್ ನಲ್ಲಿ 69, ಇತಿಹಾಸದಲ್ಲಿ 94, ಅರ್ಥಶಾಸ್ತ್ರದಲ್ಲಿ 84, ಸಮಾಜಶಾಸ್ತ್ರದಲ್ಲಿ 77 ಮತ್ತು ರಾಜ್ಯಶಾಸ್ತ್ರದಲ್ಲಿ 75 ಅಂಕಗಳನ್ನು ಪಡೆದಿದ್ದಾನೆ.





















































































Leave a Comment

Your email address will not be published. Required fields are marked *

error: Content is protected !!
Scroll to Top