ಸುಳ್ಯ ತಾಲೂಕಿನಿಂದ ಸಂಪಾಜೆ ಗ್ರಾಮ ಗ್ರಾಮ ಪಂಚಾಯತ್ 2024-2025ನೇ ಸಾಲಿನ ತಾಲೂಕು ಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.
2024-2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ, ರಾಜ್ಯದ ಒಟ್ಟು 239 ತಾಲ್ಲೂಕುಗಳ ಪೈಕಿ ಬಾಗಲಕೋಟೆ ಜಿಲ್ಲೆಯ ‘ತೇರದಾಳ’ ತಾಲ್ಲೂಕನ್ನು ಹೊರತುಪಡಿಸಿ, ವಿಭಾಗ ಮಟ್ಟದ ಪುರಸ್ಕಾರಕ್ಕೆ 12, ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ 31 ಹಾಗೂ ತಾಲ್ಲೂಕು ಮಟ್ಟದ ಪುರಸ್ಕಾರಕ್ಕೆ 195 ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು 238 ಗ್ರಾಮ ಪಂಚಾಯತಿಗಳನ್ನು 2024-25 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ನಿಯಮಾನುಸಾರವಾಗಿ ಆಯ್ಕೆ ಮಾಡಲಾಗಿದೆ.
ಸಂಪಾಜೆ ಗ್ರಾಮಕ್ಕೆ ಮೂರನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ














































