ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಧರ್ಮಸ್ಥಳ ಇದರ “ಸಮುದಾಯ ಅಭಿವೃದ್ಧಿ ವಿಭಾಗ” ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ನೀಡಲಾಗಿದೆ. ಅನುದಾನ ಮಂಜುರಾತಿ ಪತ್ರವನ್ನು ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡರು ಹಸ್ತಾಂತರಿಸಿದರು. ಅನುದಾನ ಪಡೆಯಲು ಯೋಜನಾಧಿಕಾರಿ ಮಾದವ ಗೌಡ, ಸುರೇಶ್ ಕಣೆಮರಡ್ಕ, ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಶ್ರೀ ರಾಮಚಂದ್ರ ಕಲ್ಲುಗದ್ದೆ, ಒಕ್ಕೂಟ ಸೇವಾಪ್ರತಿನಿಧಿ ಜಯಲಕ್ಷ್ಮೀ ಸಹಕರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ರಾಜಗೋಪಾಲ ಉಳುವಾರು, ಖಜಾಂಜಿ ಶ್ರೀಧರ ದುಗ್ಗಳ, ಶಂಕರನಾರಾಯಣ ಭಟ್, ಸೋಮಶೇಖರ ಪೈಕ (ತಾಲೂಕು ಭಜನಾ ಪರಿಷತ್ ಅಧ್ಯಕ್ಷರು) ಭಾರತಿ ಉಳುವಾರು (ಭಜನಾ ಪರಿಷತ್ ವಲಯ ಅಧ್ಯಕ್ಷರು), ಸಂಪಾಜೆ ಒಕ್ಕೂಟ ಅಧ್ಯಕ್ಷರಾದ ಈಶ್ವರ ಆಚಾರ್ಯ, ವಲಯದ ಅಧ್ಯಕ್ಷರಾದ ಹೂವಯ್ಯ ಗೌಡ, ಕಿಶೋರ್ ಕುಮಾರ್ (ಅಧ್ಯಕ್ಷರು ಲಯನ್ಸ್ ಕ್ಲಬ್ ಸಂಪಾಜೆ ), ಎಸ್.ಪಿ.ಲೋಕನಾಥ ಹಾಗೂ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ಮಂಜೂರು














































