ಪ್ರಚಲಿತ

ಭಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಡಿ.3 ರಂದು ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಪೆ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಬ್ಯೂಟಿ ಪಾರ್ಲರ್ ಗೆ ತೆರಳಿದ ನವ ವಿವಾಹಿತೆ ಎಲ್ಲಿಗೆ ಹೋದಳು?

ನವವಿವಾಹಿತೆ ದಾವಣೆಗೆರೆ ಮೂಲದ ಚೆನ್ನಗಿರಿಯ ಮಂಗಳ ಯಾನೆ ಕಾವ್ಯಾ (28 ವರ್ಷ) ನವಂಬರ್ 20ರಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.ಸುಳ್ಯ ಪೊಲೀಸ್ ಠಾಣೆಯಲ್ಲಿ ಪತಿ ಪತ್ನಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ನ.7ರಂದು ಕಾವ್ಯಾ ವಿಕ್ರಂ ಮದುವೆಯಾಗಿದ್ದರು. ನ.20ರಂದು ಈಕೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋದವರು ಮನೆಗೆ ಬಾರದೆ ತವರು ಮನೆಗೆ ಹೋಗದೆ ನಿಗೂಡವಾಗಿ ನಾಪತ್ತೆಯಾಗಿದ್ದಾರೆ.

ಬ್ಯೂಟಿ ಪಾರ್ಲರ್ ಗೆ ತೆರಳಿದ ನವ ವಿವಾಹಿತೆ ಎಲ್ಲಿಗೆ ಹೋದಳು? Read More »

ಭಾಷೆಗೆ ಉತ್ತಮವಾದ ರೂಪುರೇಷೆಗಳನ್ನು ನೀಡಿ ಭಾಷೆಯನ್ನು ಉದ್ದೀಪನಗೊಳಿಸಬೇಕು : ಎಂ.ಬಿ ಸದಾಶಿವ

ಭಾಷೆಯಲ್ಲಿ ಸಂಸ್ಕೃತಿ,ವ್ಯಕ್ತಿತ್ವ ಇದೆ.ಭಾಷೆಗೆ ಉತ್ತಮವಾದ ರೂಪುರೇಷೆಗಳನ್ನು ನೀಡಿ ಭಾಷೆಯನ್ನು ಉದ್ದೀಪನಗೊಳಿಸಬೇಕೆಂದು ಲಯನ್ಸ್ ಮಾಜಿ ರಾಜ್ಯಪಾಲ ಎಂ.ಬಿ ಸದಾಶಿವ ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ಅಮೃತ ಸಭಾಭವನದಲ್ಲಿ’ ನಡೆದ ಅರೆಭಾಷೆ ಗಡಿನಾಡ ಉತ್ಸವ ಸಮಾಪನ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.

ಭಾಷೆಗೆ ಉತ್ತಮವಾದ ರೂಪುರೇಷೆಗಳನ್ನು ನೀಡಿ ಭಾಷೆಯನ್ನು ಉದ್ದೀಪನಗೊಳಿಸಬೇಕು : ಎಂ.ಬಿ ಸದಾಶಿವ Read More »

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಲೋಗೋ ಬಿಡುಗಡೆ

ಶತಮಾನೋತ್ಸವದ ಹೊಸ್ತಿಲಲ್ಲಿರುವ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಲೋಗೋ ಬಿಡುಗಡೆ ಮತ್ತು ಲಕ್ಕಿ ಕೂಪನ್ ಬಿಡುಗಡೆ ಕಾರ್ಯಕ್ರಮವು ದೇವಚಳ್ಳ ಶಾಲೆಯಲ್ಲಿ ನಡೆಯಿತು.ಎಸ್‌ ಡಿ ಯಂ ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ಅಧ್ಯಕ್ಷತೆ ವಹಿಸಿದ್ದರು.ಹಿರಿಯರಾದ ನಿವೃತ್ತ ಶಿಕ್ಷಕ ಕೇಪಳಕಜೆ ಪುರುಷೋತ್ತಮ ಗೌಡ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಶಾಲೆಯ ಯಶಸ್ಸು ವಿದ್ಯಾರ್ಜನೆ ಜ್ಞಾನಾರ್ಜನೆ ಇನ್ನಷ್ಟು ವಿಸ್ತರಿಸಲಿ ಎಂಬುದಾಗಿ ಶುಭಾಶಯ ಕೋರಿದರು. ಶತಮಾನೋತ್ಸವದ ಲೋಗೋ ವನ್ನು ದೇವಚಳ್ಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲೀಲಾವತಿ ಸೇವಾಜೆ

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಲೋಗೋ ಬಿಡುಗಡೆ Read More »

ಅರೆಭಾಷೆಯನ್ನು ಮಕ್ಕಳಿಗೆ ಕಲಿಸಿ ಅರೆಭಾಷೆ ಉಳಿಸಿ ಬೆಳೆಸಿ : ಜಾ.ಕೆ ಸದಾನಂದ

ಅರೆಭಾಷೆ ನಮ್ಮ ಮನೆಭಾಷೆ.ಅರೆಭಾಷೆಯನ್ನು ನಮ್ಮ ಮಕ್ಕಳಿಗೆ ಕಲಿಸುವ ಮೂಲಕ ಅದನ್ನು ಉಳಿಸಿ ಬೆಳೆಸಬೇಕೆಂದು ಸುಳ್ಯ ಗೌಡರ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ಜಾ.ಕೆ ಸದಾನಂದ ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಡಿಸೆಂಬರ್ 1ರಂದು ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ಅಮೃತ ಸಭಾಭವನದಲ್ಲಿ ಹಮ್ಮಿಕೊಂಡ ಅರೆಭಾಷೆ ಗಡಿನಾಡ ಉತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ಅರೆಭಾಷೆಯನ್ನು ಮಕ್ಕಳಿಗೆ ಕಲಿಸಿ ಅರೆಭಾಷೆ ಉಳಿಸಿ ಬೆಳೆಸಿ : ಜಾ.ಕೆ ಸದಾನಂದ Read More »

ಮಂಡೆಕೋಲಿನಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಅರೆಭಾಷೆ ಗಡಿನಾಡ ಉತ್ಸವಕ್ಕೆ ಚಾಲನೆ

ಕರ್ನಾಟ ಅರೆಬಾಷೆ ಸಂಸ್ಕ್ರತಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವವು ಡಿಸೆಂಬರ್ 1ರಂದು ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ಅಮೃತ ಸಭಾಭವನದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿದೆ. ಅರಂಭದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ‘ಫಾರೆಸ್ಟ್ ಬಂಗಲೆ ಬಳಿಯಿಂದ ಆರಂಭಗೊಂಡಿತು. ಮೆರವಣಿಗೆಯನ್ನು ಪ್ರಗತಿಪರ ಕೃಷಿಕ ಹಾಗೂ ಸಾಮಾಜಿಕ ಧುರೀಣ ಕುಶಾಲಪ್ಪ ಗೌಡ ಕುಕ್ಕೇಟಿ ಉದ್ಘಾಟಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹಾಗೂ

ಮಂಡೆಕೋಲಿನಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಅರೆಭಾಷೆ ಗಡಿನಾಡ ಉತ್ಸವಕ್ಕೆ ಚಾಲನೆ Read More »

ಗಾಂಜಾ ಸೇವೆನೆ ಮತ್ತು ಮಾರಾಟ ಪ್ರಕರಣ ನಾಲ್ವರ ಬಂಧನ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಯನಗರದಲ್ಲಿ ನಿಷೇಧಿತ ಅಮಲು ಪದಾರ್ಥ ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಒರ್ವನನ್ನು ಗಾಂಜಾ ಸೇವೆನೆ ಮಾಡಿದ ಮೂವರನ್ನು ಕರೆತಂದಿದ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಂದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಗಾಂಜಾ ಸೇವೆನೆ ಮತ್ತು ಮಾರಾಟ ಪ್ರಕರಣ ನಾಲ್ವರ ಬಂಧನ Read More »

ಡಿ.7ಕ್ಕೆ ಸುಳ್ಯದಲ್ಲಿ ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಶುಭಾರಂಭ

ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಡಿ.7ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್‌. ಬಿಲ್ಡಿಂಗ್ ಇದರ 2 ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.ಅಂಗಾರ ಅವರು ನೂತನ ಸಹಕಾರ ಸಂಘ ಆರಂಭದ ಕುರಿತು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದರು.ನೂತನ ಸಹಕಾರ ಸಂಘವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೀಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯರುಗಳಾದ ಕಿಶೋರ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್

ಡಿ.7ಕ್ಕೆ ಸುಳ್ಯದಲ್ಲಿ ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಶುಭಾರಂಭ Read More »

ಐವರ್ನಾಡು : 350ನೇ ಸ್ವಸಹಾಯ ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಬೆಳ್ಳಾರೆ ವಲಯದ 350 ನೇ ಸ್ವಸಹಾಯ ಸಂಘವನ್ನು ಐವರ್ನಾಡು ಕಾರ್ಯಕ್ಷೇತ್ರದಲ್ಲಿ ಹೊಸ ಸ್ವಸಹಾಯ ಸಂಘ “ನೇಸರ” ಸಂಘವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಚಂದ್ರಲಿಂಗಂ ಬೆಂಗಮಲೆ ಅವರು ಉದ್ಘಾಟನೆ ಮಾಡಿ ಮಾನ್ಯ ಯೋಜನಾಧಿಕಾರಿ ಅವರು ಸ್ವಸಹಾಯ ಸಂಘದ ನಿಯಮವಳಿಗಳ ಬಗ್ಗೆ ಸಂಕ್ಷಿಪ್ತ ವಾಗಿ ಮಾಹಿತಿ ನೀಡಿ ದಾಖಲಾತಿ ಹಸ್ತಾತಂತರ ಮಾಡಿದರು. ವಲಯ ಅಧ್ಯಕ್ಷ ವೇದಾ ಶೆಟ್ಟಿ ,ವಲಯದ ಮೇಲ್ವಿಚಾರಕರು ವಿಶಾಲ ಕೆ ಸೇವಾಪ್ರತಿನಿಧಿ ರಶ್ಮಿತಾ ಸ್ವಸಹಾಯ ಸಂಘದ

ಐವರ್ನಾಡು : 350ನೇ ಸ್ವಸಹಾಯ ಸಂಘ ಉದ್ಘಾಟನೆ Read More »

ನಾಳೆ ಸಾರ್ವಜನಿಕರ ಭೇಟಿಗೆ ಸಂಸದ ಬ್ರಿಜೇಶ್ ಚೌಟ ಲಭ್ಯ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ.30ರ ಶನಿವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ ಅವರ ಮಂಗಳೂರು ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ನಾಗರಿಕರು ತಮ್ಮ ಅಹವಾಲುಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದಾಗಿದೆ.

ನಾಳೆ ಸಾರ್ವಜನಿಕರ ಭೇಟಿಗೆ ಸಂಸದ ಬ್ರಿಜೇಶ್ ಚೌಟ ಲಭ್ಯ Read More »

error: Content is protected !!
Scroll to Top