ಪ್ರಚಲಿತ

ಸುಳ್ಯ : ರಸ್ತೆ ಅಭಿವೃದ್ಧಿಗೆ ರೂ.10 ಕೋಟಿ ಅನುದಾನ ನೀಡುವಂತೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ನೂತನ‌ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಕೆ.ಎಚ್ ಮುನಿಯಪ್ಪ ಅವರನ್ನು ಭೇಟಿಯಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳಿಗೆ 10ಕೋಟಿ ರೂ ವಿಶೇಷ ಅನುದಾನವನ್ನು ಒದಗಿಸುವಂತೆ ಮನವಿ ಸಲ್ಲಿಸಿದರು . ಸುಳ್ಯ ಅಂಬೇಡ್ಕರ್ ಭವನದ ಅಂದಾಜು ಪಟ್ಟಿಯು ಸರಕಾರಕ್ಕೆ ಸಲ್ಲಿಕೆಯಾಗಿ 2ತಿಂಗಳಾಗಿದ್ದು ಇನ್ನು ಅನುಮೊದನೆಯಾಗಿಲ್ಲ ಅದನ್ನು ಶೀಘ್ರವೇ ಅದನ್ನು ಅನುಮೊದನೆಗೊಳಿಸಿ ಅಂಬೇಡ್ಕರ್ ಭವನದ ಕಾಮಗಾರಿ ನಡೆಸಲು ಅನುಕೂಲ ಮಾಡಿಕೊಡುವಂತೆ ಸಚಿವರಿಗೆ ತಿಳಿಸಿದರು, ಶಾಸಕರ ಮನವಿಗೆ ಸಕಾರಾತ್ಮಕವಾಗಿ […]

ಸುಳ್ಯ : ರಸ್ತೆ ಅಭಿವೃದ್ಧಿಗೆ ರೂ.10 ಕೋಟಿ ಅನುದಾನ ನೀಡುವಂತೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕಿ ಭಾಗೀರಥಿ ಮುರುಳ್ಯ Read More »

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟಿಸಲು ಅಗತ್ಯ ಬಿದ್ದರೆ ಜೈಲ್ ಭರೋ‌ ಹೋರಾಟ‌ ನಡೆಸಲು ನಾವು ರೆಡಿ : ಕಿಶೋರ್ ಶಿರಾಡಿ ಎಚ್ಚರಿಕೆ

ಕಸ್ತೂರಿರಂಗನ್ ಅಂತಿಮ ವರದಿಯ ಕರಡು ಪ್ರತಿಗೆ ಒಕ್ಕೊರಲಿನಿಂದ ಆಕ್ಷೇಪಣೆ ಸಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳ ಬಾಧಿತ ಪ್ರದೇಶಗಳ ರೈತರು ಹಾಗೂ ಗ್ರಾಮಸ್ಥರ ಜಿಲ್ಲಾ ಮಟ್ಟದ ಸಭೆ ಗುರುವಾರ ಸುಬ್ರಹ್ಮಣ್ಯದಲ್ಲಿ ನಡೆಯಿತು. ಬೆಳ್ತಂಗಡಿ, ಕಡಬ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಕಸ್ತೂರಿರಂಗನ್ ವರದಿಯಿಂದ ಬಾಧಿತವಾಗಬಹುದಾದ ಪ್ರದೇಶಗಳ ಗ್ರಾಮಮಟ್ಟದ ಪ್ರಮುಖರು ಹಾಗೂ ರೈತರು ಸಭೆಯಲ್ಲಿ ಭಾಗವಹಿಸಿ, ವರದಿಯಿಂದ ಮಲೆನಾಡು ಮತ್ತು ಪಶ್ಚಿಮ ಘಟ್ಟದ

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟಿಸಲು ಅಗತ್ಯ ಬಿದ್ದರೆ ಜೈಲ್ ಭರೋ‌ ಹೋರಾಟ‌ ನಡೆಸಲು ನಾವು ರೆಡಿ : ಕಿಶೋರ್ ಶಿರಾಡಿ ಎಚ್ಚರಿಕೆ Read More »

ಅರಂತೋಡು : ರಸ್ತೆ ಸುರಕ್ಷತೆ ಕುರಿತು ಕಾನೂನು ಅರಿವು ಕಾರ್ಯಕ್ರಮ

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಆ 20 ರಂದು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ರಸ್ತೆ ಸುರಕ್ಷತೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ ದಮಯಂತಿ ಸೋಮಯ್ಯರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ.ಹೆಚ್ಚಿನ ಅಪಘಾತಗಳಿಗೆ ನಮ್ಮ ನಿರ್ಲಕ್ಷ್ಯವೇ ಕಾರಣ, ರಸ್ತೆ ಸುರಕ್ಷತೆ

ಅರಂತೋಡು : ರಸ್ತೆ ಸುರಕ್ಷತೆ ಕುರಿತು ಕಾನೂನು ಅರಿವು ಕಾರ್ಯಕ್ರಮ Read More »

ಇಂದು ಸುಳ್ಯದಲ್ಲಿ ಬಾಲ ಆಧಾರ್ ನೋಂದಣಿ ಕ್ಯಾಂಪ್

ಇಂದು (ಜು.21) ನಗರ ಪಂಚಾಯತ್ ಸಭಾಭವನದಲ್ಲಿ ಸೊನ್ನೆಯಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಬಾಲ ಆಧಾರ್ ನೋಂದಣಿ ಶಿಬಿರ ಮತ್ತು ಅದೇ ಪೋಷಕರ ಆಧಾರ್ ತಿದ್ದುಪಡಿ ಶಿಬಿರ ನಡೆಯುತ್ತಿದೆ..ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ಅಜ್ಜಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಧಾ‌ರ್ ನೋಂದಣಿ ಮಾಡಲು ಬಾಕಿ ಇರುವ ಸೊನ್ನೆಯಿಂದ ಆರು ವರ್ಷದ ಒಳಗಿನ ಮಕ್ಕಳನ್ನು ಮತ್ತು ಪೋಷಕರು ಹಾಜರಾಗಿ ಆಧಾರ್ ನೋಂದಣಿ ಮಾಡಿಸಲು ಕೋರಿದೆ. ಆಧಾರ್ ನೋಂದಣಿಗೆ ಬರುವಾಗ ಒಟಿಪಿ ಬರುವ ಮೊಬೈಲ್ ,ಮೂಲ ವಿಳಾಸ ಹೊಂದಿರುವ ಪೋಷಕರು

ಇಂದು ಸುಳ್ಯದಲ್ಲಿ ಬಾಲ ಆಧಾರ್ ನೋಂದಣಿ ಕ್ಯಾಂಪ್ Read More »

ಎಲೆಕ್ಟ್ರೀಷನ್ ಪುರುಶೋತ್ತಮ‌ ಕೇರ್ಪಳ ನಿಧನ

ಸುಳ್ಯ ಕೇರ್ಪಳ ನಿವಾಸಿ ಪುರುಷೋತ್ತಮ ರಾವ್ (55ವರ್ಷ) ಎಂಬವರು ಮಂಗಳೂರಿನ ಆಸ್ಪತ್ರೆಯಲ್ಲಿ ಆ.21ರಂದು ಮುಂಜಾನೆ ನಿಧನರಾದರು. ಎಲೆಕ್ಟ್ರೀಷನ್ ಕೆಲಸ ಮಾಡುತ್ತಿದ್ದ ಅವರು ಎರಡು ವಾರಗಳ ಹಿಂದೆ ಅವರಿಗೆ ಜ್ವರ ಬಂದ ಹಿನ್ನಲೆಯಲ್ಲಿ ಅವರು ಸುಳ್ಯದಿಂದ ಔಷಧ ಪಡೆದಿದ್ದರು. ಮೂರು ದಿನಗಳ ಹಿಂದೆ ಜ್ವರ ಉಲ್ಬಣಗೊಂಡಾಗ ಸುಳ್ಯದ ಆಸ್ಪತ್ರೆಗೆ ದಾಖಲಾದರು. ಬಳಿಕ ವೈದ್ಯರ ಸಲಹೆ ಮೇರೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆಮೃತರು ತಾಯಿ ಮೋಹಿನಿ,ಪತ್ನಿ ಉಷಾ, ಸಹೋದರ ಕಮಲಾಕ್ಷ ರಾವ್ ಕೇರ್ಪಳ, ಇಬ್ಬರು ಮಕ್ಕಳು

ಎಲೆಕ್ಟ್ರೀಷನ್ ಪುರುಶೋತ್ತಮ‌ ಕೇರ್ಪಳ ನಿಧನ Read More »

ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ನಾಪತ್ತೆ: ಅಮಳ ರಾಮಚಂದ್ರ

ಇತ್ತೀಚೆಗೆ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಎಲ್ಲಿದ್ದಾರೆ ಎಂಬ ಪ್ರಶ್ನೆ ಇಡೀ ದೇಶದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿತ್ತು. 19 ದಿನಗಳ ಕಾಲ ಭಾರತದ ಪಾರ್ಲಿಮೆಂಟಿನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಅವರಿಬ್ಬರೂ ಅಧಿವೇಶನದ ಕೊನೆಯ ದಿನದವರೆಗೆ ನಾಪತ್ತೆಯಾಗಿದ್ದರು ಎಂದು ಕೆ.ಪಿ.ಸಿ.ಸಿ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ.ಅವರು‌ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಆ.2೦ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಟ್ಟಕಡೆಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಧಿವೇಶನದ ಕೊನೆಯ

ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ನಾಪತ್ತೆ: ಅಮಳ ರಾಮಚಂದ್ರ Read More »

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.- 2 ಅಧ್ಯಕ್ಷರಾಗಿ ವಿಶ್ವನಾಥ ರೈ ಕಳಂಜರವರು ಆಯ್ಕೆ

, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.- 2 ಅಧ್ಯಕ್ಷರಾಗಿ ಶ್ರೀ ವಿಶ್ವನಾಥ ರೈ ಕಳಂಜರವರು ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಕಳಂಜದವರಾಗಿದ್ದು, 2020ರಿಂದ 2023ರ ವರೆಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷರಾಗಿ, ಪ್ರಸ್ತುತ ಜಿಲ್ಲಾ ಸದಸ್ಯರಾಗಿ ,ಕಳಂಜ ಮಂಡಲ ಪಂಚಾಯತ್‌ ಅಧ್ಯಕ್ಷರಾಗಿ 10ವರ್ಷಗಳ ಕಾಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಂಘ, ಸುಳ್ಯ ತಾಲೂಕಿನ 3 ಬಾರಿ ಉಪಾಧ್ಯಕ್ಷರಾಗಿ, APMC ಸುಳ್ಯದ ಎರಡು ಬಾರಿ ನಿರ್ದೇಶಕರಾಗಿ , KMF ಮಂಗಳೂರಿನ ನಿರ್ದೇಶಕರಾಗಿ

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.- 2 ಅಧ್ಯಕ್ಷರಾಗಿ ವಿಶ್ವನಾಥ ರೈ ಕಳಂಜರವರು ಆಯ್ಕೆ Read More »

ಅರಂತೋಡು ಮದರಸದಲ್ಲಿ ಶಿಕ್ಷಕ – ರಕ್ಷಕರ ಸಭೆ

ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಆಶ್ರಯದಲ್ಲಿ ಶಿಕ್ಷಕ – ರಕ್ಷಕರ ಸಭೆಯು ಆ.14 ರಂದು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ ಸ್ವಾಗತಿಸಿದರು. ಸದರ್ ರವೂಫ್ ಅಝ್ ಹರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖತೀಬರಾದ ಬಹು| ಆಸಿಫ್ ಅಝ್ ಹರಿ ವಿಷಯ ಮಂಡಿಸಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಬೇಕೆಂದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಎ.ಅಬ್ದುಲ್ಲ ಭಾಗವಹಿಸಿದರು. ಜಮಾಅತ್ ಕಾರ್ಯದರ್ಶಿ

ಅರಂತೋಡು ಮದರಸದಲ್ಲಿ ಶಿಕ್ಷಕ – ರಕ್ಷಕರ ಸಭೆ Read More »

ಕಸ್ತೂರಿ ರಂಗನ್ ವರದಿ ವಿರೊಧಿಸಿ ಬಳ್ಪ ಗ್ರಾಮಸ್ಥರಿಂದ ಪ್ರತಿಭಟನೆಗೆ ನಿರ್ಧಾರ

ಕಸ್ತೂರಿ ರಂಗನ್ ವರದಿಯಲ್ಲಿ ಬಳ್ಪ‌ ಗ್ರಾಮವು ಸೇರ್ಪಡೆಗೊಂಡಿದ್ದು ಈ ಹಿನ್ನಲೆಯಲ್ಲಿ ಬಳ್ಪ ಗ್ರಾಮವು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ ಪರಿಣಾಮ ಮುಂದೆ ಆಗುವ ಪರಿಣಾಮಗಳನ್ನು ಎದುರಿಸುವ ಬಗ್ಗೆ ಬೀದಿಗುಡ್ಡೆಯಲ್ಲಿ ಗ್ರಾಮಸ್ಥರ ಸಭೆ ನಡೆಯಿತು.ಸಭೆಯಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಕೇಂದ್ರ ಪರಿಸರ ಸಚಿವಾಲಯದ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸುವುದು ಮತ್ತು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸುವುದೆಂದು ನಿರ್ಣಯಿಸಲಾಯಿತೆಂದು ಸಂಘಟಕರಾದ ಸುಬ್ರಹ್ಮಣ್ಯ ಕುಳ ತಿಳಿಸಿದರು.ಈ ಸಂದರ್ಭದಲ್ಲಿ ಪಂಜ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಬಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ

ಕಸ್ತೂರಿ ರಂಗನ್ ವರದಿ ವಿರೊಧಿಸಿ ಬಳ್ಪ ಗ್ರಾಮಸ್ಥರಿಂದ ಪ್ರತಿಭಟನೆಗೆ ನಿರ್ಧಾರ Read More »

ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ

ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಆ.18ರಂದು ಪ್ರತಿಭಟನೆ ನಡೆದಿದ್ದು ಈ ಪ್ರತಿಭಟನೆಯಲ್ಲಿ ಸುಳ್ಯ ತಾಲೂಕಿನ‌ ನೂರಾರು ಆಟೋಚಾಲಕರು(ಬಿ.ಎಂ.ಎಸ್ ಸಂಯೋಜಿತ) ಭಾಗಿಯಾದರು.ತಾಲೂಕಿನಾದ್ಯಂತ ಸುಳ್ಯ ನಗರ ಕಲ್ಲುಗುಂಡಿ, ಪಂಜ, ಎಡಮಂಗಲ, ಗುತ್ತಿಗಾರು ಸುಬ್ರಮಣ್ಯ, ಹರಿಹರ, ಕಲ್ಮಕಾರು ಜಾಲ್ಸೂರು, ಕುಕ್ಕುಜಡ್ಕ, ಪೆರಾಜೆ ಘಟಕಗಳಿಂದ ಆಟೋ ಚಾಲಕರು ಭಾಗಿಯಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ತಾಲೂಕು ಆಟೋ ಚಾಲಕರ ಅಧ್ಯಕ್ಷರಾದ ಪ್ರಕಾಶ್ ಎಂ .ಎಸ್ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಪೈಚಾರ್, ಕೋಶಾಧಿಕಾರಿ

ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ Read More »

error: Content is protected !!
Scroll to Top