Uncategorized

ವೃಕ್ಷ ಮಾತೇ ತುಳಸಿ ಗೌಡ ಇನ್ನಿಲ್ಲ

ಅಂಕೋಲಾ: ಗಿಡ-ಮರಗಳಸಂರಕ್ಷಣೆಗಾಗಿ ತನ್ನ ಇಡೀ ಜೀವನಮುಡುಪಾಗಿಟ್ಟಿದ್ದ ತುಳಸಿ ಗೌಡ ಸೋಮವಾರ ಸಂಜೆ ಸಾವನಪ್ಪಿದ್ದಾರೆ. 87 ವರ್ಷದ ತುಳಸಿ ಗೌಡ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ನಡುವೆಯೂ ಅವರು ಗಿಡ-ಮರಗಳ ಆರೈಕೆ ಬಿಟ್ಟಿರಲಿಲ್ಲ.ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಅವರು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಅರೆಕಾಲಿಕ ‘ಉದ್ಯೋಗದಲ್ಲಿದ್ದರು. ಅಲ್ಲಿ ಲಕ್ಷಾಂತರ ಗಿಡಗಳ ಸಂರಕ್ಷಣೆ ಮಾಡಿದ್ದರು. ತಮ್ಮ ಮನೆ ಸೇರಿ ವಿವಿಧ ಪ್ರದೇಶಗಳಿಗೆ ತೆರಳಿಸ್ವತಃ ಗಿಡಗಳನ್ನು ನಾಟಿ ಮಾಡಿ ಬೆಳಸಿದ್ದರು. ಜೀವಿತದ ಕೊನೆ ಅವಧಿಯವರೆಗೂ ಗಿಡಗಳಿಗೆ ನೀರುಣಿಸುವುದನ್ನು […]

ವೃಕ್ಷ ಮಾತೇ ತುಳಸಿ ಗೌಡ ಇನ್ನಿಲ್ಲ Read More »

ಪತ್ರಿಕಾ ವರದಿಗಾರ ಮಿಥುನ್ ಕರ್ಲಪ್ಪಾಡಿಯವರಿಗೆ ಜೀವ ಬೆದರಿಕೆ, ಪ್ರೆಸ್ ಕ್ಲಬ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ

ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಮಿಥುನ್ ಕರ್ಲಪ್ಪಾಡಿಯವರಿಗೆ ಜೀವ ಬೆದರಿಕೆ ಹಾಕಿದ ಘಟನೆಯನ್ನು ಸುಳ್ಯ ಪ್ರೆಸ್ ಕ್ಲಬ್ ಹಾಗೂ ಸುಳ್ಯ ಕಾರ್ಯನಿತರ ಪತ್ರಕರ್ತರ ಸಂಘ ಖಂಡಿಸಿದೆ.ಡಿ.13ರಂದು ಮಿಥುನ್ ತನ್ನ ತಾಯಿಯ ಜತೆ ಬಿಎಸ್‌ಎನ್‌ಎಲ್ ಕಚೇರಿಗೆ ಕಾರ್ಯ ನಿಮಿತ ಹೋಗಿದ್ದರು. ಬಿಎಸ್‌ಎನ್‌ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಸಂಸ್ಥೆಯು ಬಿ.ಎಸ್‌.ಎನ್.ಎಲ್ ಸಿಮ್ ಗೆ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿರುವ ಬಗ್ಗೆ ಯಾರೋ ವ್ಯಕ್ತಿಗಳು ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರು ನೀಡಿರುವುದು ಮಿಥುನ್ ಆಗಿರಬಹುದೆಂದು ಸಂಸ್ಥೆಯ ವಿಕಾಸ್‌ರವರು

ಪತ್ರಿಕಾ ವರದಿಗಾರ ಮಿಥುನ್ ಕರ್ಲಪ್ಪಾಡಿಯವರಿಗೆ ಜೀವ ಬೆದರಿಕೆ, ಪ್ರೆಸ್ ಕ್ಲಬ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ Read More »

ಪೆರಾಜೆ ಗ್ರಾಮದಲ್ಲಿ ಸಾಕು ನಾಯಿ ಬೇಟೆಗಾರನ ಗುಂಡೇಟಿಗೆ ಬಲಿ !

ಪೆರಾಜೆ ಗ್ರಾಮದಲ್ಲಿ ಬೇಟೆಗಾರರೊಬ್ಬರು ಕಾಡು ಪ್ರಾಣಿ ಎಂದು ತಿಳಿದು ಸಾಕು ನಾಯಿಯೊಂದಕ್ಕೆಕೋವಿಯಿಂದ ಗುಂಡು ಹಾರಿಸಿ ಸಾಕು ನಾಯಿ ಗುಂಡೇಟಿಗೆ ಬಲಿಯಾದ ಘಟನೆ ಶನಿವಾರ ವರದಿಯಾಗಿದೆ.ರಾತ್ರಿ ಕಾಪುಮಲೆ ಕುಂದಲ್ಪಾಡಿ ದಯಾಕರ ಅವರ ಮನೆಯ ಬಳಿ ಬೇಟೆಗೆ ಬಂದ ವ್ಯಕ್ತಿ ಅವದ ಸಾಕು ನಾಯಿಗೆ ರಾತ್ರಿ 11 30 ಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದಾರೆ.ಸಾಕು ನಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.ಇದರಿಂದ ಮನೆಯವರು ಆಕ್ರೋಶಗೊಂಡಿದ್ದಾರೆ.

ಪೆರಾಜೆ ಗ್ರಾಮದಲ್ಲಿ ಸಾಕು ನಾಯಿ ಬೇಟೆಗಾರನ ಗುಂಡೇಟಿಗೆ ಬಲಿ ! Read More »

ಸುಳ್ಯ ಹಬ್ಬ ಆಮಂತ್ರಣ ಪತ್ರಿಕೆ ಬಿಡುಗಡೆ

.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಕೆ.ವಿ.ಜಿ. ಸುಳ್ಯ ಹಬ್ಬವನ್ನು ದ.25 ಮತ್ತು ದ.26 ರಂದು ನಡೆಯಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಬುಧವಾರ ಸುಳ್ಯ ಹಬ್ಬ ಕಚೇರಿಯಲ್ಲಿ ನಡೆಯಿತು.ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಸಮಿತಿಯ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ ರೈ ಮತ್ತು ಮಾಜಿ ಅಧ್ಯಕ್ಷೆ ಮೀನಾಕ್ಷಿ ಗೌಡರು ಶುಭಹಾರೈಸಿದರು. ಸಮಿತಿ ಅಧ್ಯಕ್ಷ ಡಾ.ಜ್ಞಾನೇಶ್ ಎನ್.ಎ. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ರಾಜು

ಸುಳ್ಯ ಹಬ್ಬ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ನಾಶ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡಿರುವ ಘಟನೆ ವರದಿಯಾಗಿದೆ.ಅಡ್ತಲೆಯ ಮೋಹನ್ ಪಂಜದಬೈಲು ರವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ ಮರಗಳು, ತೆಂಗಿನ ಗಿಡಗಳು ಹಾಗೂ ಬಾಳೆ,ಕೊಕ್ಕೊ ಗಿಡಗಳನ್ನು ಹಾನಿಗೊಳಿಸಿರುವುದಾಗಿ ತಿಳಿದುಬಂದಿದೆ.

ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ನಾಶ Read More »

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ.ಎಸ್.ಎಂ.ಕೃಷ್ಣ ರವರು ಡಿ.10ರಂದು ಮಂಗಳವಾರ ಬೆಳಗಿನ ಜಾವ 02:30ಕ್ಕೆ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಡಿ.11 ಬುಧವಾರದಂದುಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ದಿವಂಗತರ ಗೌರವಾರ್ಥವಾಗಿ ಡಿ.11 ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಮೂರು ದಿನಗಳು ರಾಜ್ಯಾದ್ಯಂತ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ Read More »

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು: ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಕಂಡೆಕ್ಟರ್

ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಇದನ್ನು ಅರಿತ ನಿರ್ವಾಹಕ ವಿಷ್ಣು ಎಂಬವರು ಬಸ್ ಅನ್ನು ಉಪ್ಪಿನಂಗಡಿಗೆ ಚಲಾಯಿಸಿಕೊಂಡು ಬಂದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಡಿ.6ರಂದು ವರದಿಯಾಗಿದೆ.ಮಂಗಳೂರು ಡಿಪೋಗೆ ಸೇರಿದ ಕೆಎಸ್ಸಾರ್ಟಿಸಿ ಬಸ್‌ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಸಂದರ್ಭ ಬಸ್‌ ಕಡಬ ತಾಲೂಕಿನ ಆತೂರಿಗೆ ಬರುತ್ತಿದ್ದಂತೆಯೇ ಬಸ್ಸಿನ ಚಾಲಕ ಗಣಪತಿ ಅವರು ಚಾಲನೆಯ ವೇಗ ಕಡಿಮೆಮಾಡ ತೊಡಗಿದರು. ಇದನ್ನು ಕಂಡು ಸಂಶಯಗೊಂಡ ಬಸ್ ನಿರ್ವಾಹಕ, ಚಾಲಕನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸು ವಾಗ

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು: ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಕಂಡೆಕ್ಟರ್ Read More »

ಬೆಳ್ಳಿ ಚುಕ್ಕೆಯಂತೆ ಹೊಳೆದು ಭಕುತರ ಪೊರೆವ ಬೆಳ್ಳಿಪ್ಪಾಡಿಯ ಶ್ರೀ ಉಳ್ಳಾಗಲು ಧೂಮಾವತಿ ದೈವಗಳು

ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಗಡಿನಾಡು ಪ್ರದೇಶ ಬೆಳ್ಳಿಪ್ಪಾಡಿಯು, ಸುಳ್ಯ ತಾಲೂಕಿನ ಜಾಲ್ಸೂರು, ಮಂಡೆಕೋಲು ಹಾಗೂ ಕನಕ ಮಜಲು ಈ ಮೂರು ಗ್ರಾಮಗಳಿಂದ ಸುತ್ತುವರಿದ ಗ್ರಾಮೀಣ ಪ್ರದೇಶ.ಇಲ್ಲಿ ಸುಮಾರು ನೂರು ನೂರೈವತ್ತು ವರ್ಷಗಳ ಹಿಂದಿನ ಇತಿಹಾಸದಿಂದಲೂ ನೆಲೆಸಿರುವಂತಹ ತಾಯಿ ಶ್ರೀ ಉಳ್ಳಾಕುಲು ಧೂಮಾವತಿ ದೈವದ ಕಾಲಾವಧಿ ನೇಮೋತ್ಸವವೂ ವರ್ಷಂಪ್ರತಿ ಡಿಸೆಂಬರ್ ತಿಂಗಳ 6 ಮತ್ತು 7 ರಂದು ಶ್ರದ್ಧೆ ಭಕ್ತಿ ಸಡಗರದಿಂದ ನಡೆಯುತ್ತದೆ.ವಿಶೇಷತೆ:ವಿಶೇಷವೆಂದರೆ ತುಳು ನಾಡಿನ ತುಳು ತಿಂಗಳ ಬೇಸ ಪತ್ತನಾಜೆ ಕಳೆದ ಮೇಲೆ ಸಾಮಾನ್ಯವಾಗಿ ಎಲ್ಲಿಯೂ

ಬೆಳ್ಳಿ ಚುಕ್ಕೆಯಂತೆ ಹೊಳೆದು ಭಕುತರ ಪೊರೆವ ಬೆಳ್ಳಿಪ್ಪಾಡಿಯ ಶ್ರೀ ಉಳ್ಳಾಗಲು ಧೂಮಾವತಿ ದೈವಗಳು Read More »

ಗ್ರಾಮ ಪಂಚಾಯತಿಗಳ ಸಮಸ್ಯೆಗಳನ್ನು ವಿಧಾನ ಸೌಧದಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನ ; ಭಾಗೀರಥಿ ಮುರುಳ್ಯ

ಸುಳ್ಯ : ಇಂದು ಗ್ರಾಮ ಪಂಚಾಯತಿಗಳು ವಿವಿಧ ಸಮಸ್ಯೆಗಳಳನ್ನು ಎದುರಿಸುತ್ತಿದೆ. ಗ್ರಾ.ಪಂ.ನ ಸಮಸ್ಯೆಗಳ ಬಗ್ಗೆ ನಾನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಸಾಧ್ಯವಾಗುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭರವಸೆ ನೀಡಿದರು.ಅವರು ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಪಂಚಾಯತ್ ರಾಜ್ ಸಮಾವೇಶವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ನಿಮ್ಮೆಲ್ಲ ಬೇಡಿಕೆಗಳನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ, ಎಲ್ಲಾ

ಗ್ರಾಮ ಪಂಚಾಯತಿಗಳ ಸಮಸ್ಯೆಗಳನ್ನು ವಿಧಾನ ಸೌಧದಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನ ; ಭಾಗೀರಥಿ ಮುರುಳ್ಯ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವಕ್ಕೆ ಚಾಲನೆ

ದ.ಕ ಜಿಲ್ಲೆಯ ಪ್ರಸಿದ್ದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು (ನ.27) ಕೊಪ್ಪರಿಗೆ ಏರುವುದರೊಂದಿಗೆ ಷಷ್ಠಿ ಮಹೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ.ಇಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವನಡೆಯಲಿದೆ. ನ.30- ಲಕ್ಷದೀಪೋತ್ಸವ,ಡಿ.01- ಶೇಷವಾಹನೋತ್ಸವ,ಡಿ.02- ಅಶ್ವವಾಹನೋತ್ಸವ, ಡಿ.03- ಮಯೂರ ವಾಹನೋತ್ಸವ, ಡಿ.04- ಶೇಷವಾಹನೋತ್ಸವ,, ಡಿ.05- ಹೂವಿನ ತೇರಿನ ಉತ್ಸವ, ಡಿ.06- ಪಂಚಮಿ ರಥೋತ್ಸವ,, ಡಿ.07- ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ,ಡಿ.08- ರಂದು ಅವಭ್ರತೋತ್ಸವ, ನೌಕಾವಿಹಾರ, ನಡೆದು ಡಿ.12- ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವಕ್ಕೆ ಚಾಲನೆ Read More »

error: Content is protected !!
Scroll to Top