ಅರಂತೋಡು : ಕಸ್ತೂರಿ ರಂಗನ್ ಕರಡು ವರದಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಗ್ರಾಮ ಸಭೆ ಕರೆಯಲು ಪಿ.ಡಿ.ಒ ಅವರಿಗೆ ಮನವಿ ಸಲ್ಲಿಸಿದ ಅರಂತೋಡು ತೊಡಿಕಾನ ಗ್ರಾಮಸ್ಥರು
ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ವಿಶೇಷ ಗ್ರಾಮ ಸಭೆ ಕರೆದು ನಿರ್ಣಯಿಸಿ ಸರಕಾರಕ್ಕೆ ಬರೆಯಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ಪಿ.ಡಿ.ಒ ಜಯಪ್ರಕಾಶ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಉಪಾಧ್ಯಕ್ಷ ತೀರ್ಥರಾಮ ಉಳುವಾರು ಹಾಗೂ ಅರಂತೋಡು ತೊಡಿಕಾನ ಗ್ರಾಮದ ರೈತರು ಮನವಿ ಸಲ್ಲಿಸಿದ್ದಾರೆ.ರೈತಾಪಿ ವರ್ಗದ ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪೂರ್ವಜರಿಂದ ಬಂದಂತಹ ಭೂಮಿಯಲ್ಲಿ ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದೇವೆ. ಆದರೆ ಈಗಿನ ಸರಕಾರಗಳು ಬಡ ಕೃಷಿಕರ ತಲೆಯ ಮೇಲೆ ಕಲ್ಲುಚಪ್ಪಡಿ ಎಳೆಯಲು […]









