Uncategorized

ಪಾತಿಮಾತ್ ಆಫೀಯಗೆ ದ್ವಿತೀಯ puc ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಕಡೆಪಾಲ ಕೆ.ಎಸ್ ಹನೀಫ್ ಮತ್ತು ಪೌಸಿಯ ದಂಪತಿ ಮಗಳಾದ ಪಾತಿಮಾತ್ ಆಫೀಯ ದ್ವಿತೀಯ puc ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 528 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ.ಇವರು ಸರಕಾರಿ pu ಕಾಲೇಜ್ ಕೂಡಿಗೆ ಕುಶಾಲನಗರದ ವಿದ್ಯಾರ್ಥಿನಿ.

ಪಾತಿಮಾತ್ ಆಫೀಯಗೆ ದ್ವಿತೀಯ puc ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ Read More »

ನಾಳೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಕೊನೆಯ ಹಂತದ ತಯಾರಿಗಾಗಿ ಸಮಾಲೋಚನಾ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಏ.20ರ ತನಕ ನಡೆಯಲಿದ್ದು ಕೊನೆ ಹಂತದ ತಯಾರಿಗಾಗಿ ಸಮಾಲೋಚಿಸಲು‌ ನಾಳೆ ದಿನಾಂಕ 10-04-2026 ನೇ ಶುಕ್ರವಾರ ಪೂ 10:00ಕ್ಕೆ ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಮತ್ತು ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳ ತುರ್ತು ಸಭೆ ದೇವಳದ ಅಕ್ಷಯ ಮಂದಿರದಲ್ಲಿ ಕರೆಯಲಾಗಿದೆ.ಸಭೆಯಲ್ಲಿ ಎಲ್ಲರೂ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಕೊಳಲುಮೂಲೆ,ಹಾಗೂ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.

ನಾಳೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಕೊನೆಯ ಹಂತದ ತಯಾರಿಗಾಗಿ ಸಮಾಲೋಚನಾ ಸಭೆ Read More »

ಚೈತನ್ಯ ಎಂ.ಎಸ್ 563 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚೈತನ್ಯ ಎಂ.ಎಸ್ 563 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಇವರು ಕೊಕ್ಕಡದ ಶೇಖರ್ ಗೌಡ ಹಾಗೂ ಸುಜಾತ ದಂಪತಿಯ ಪುತ್ರಿ.

ಚೈತನ್ಯ ಎಂ.ಎಸ್ 563 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ Read More »

ದ್ವಿತೀಯ ಪಿಯುಸಿ ಫಲಿತಾಂಶ : ಉಡುಪಿ ಜಿಲ್ಲೆಗೆ ಮೊದಲ ಸ್ಥಾನ, ದ.ಕ ಜಿಲ್ಲೆ ದ್ವಿತೀಯ

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಂಜೆ ಸುದ್ದಿಗೋಷ್ಠಿ ನಡೆಸಿ ಜಿಲ್ಲಾವಾರು ಫಲಿತಾಂಶದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಶೇ.86.48ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇನ್ನು ಈ ಬಾರಿಯೂ ಕೂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ, ಯಾದಗಿರಿ ಕೊನೆ ಸ್ಥಾನದಲ್ಲಿದೆ. ಶೇ. 96.39 ಫಲಿತಾಂಶ ಪಡೆದು

ದ್ವಿತೀಯ ಪಿಯುಸಿ ಫಲಿತಾಂಶ : ಉಡುಪಿ ಜಿಲ್ಲೆಗೆ ಮೊದಲ ಸ್ಥಾನ, ದ.ಕ ಜಿಲ್ಲೆ ದ್ವಿತೀಯ Read More »

ಪಿಯುಸಿ ವಿಜ್ಞಾನ ವಿಭಾಗದಲ್ಲಿ‌ ಸಮನ್ಯು ಶೆಟ್ಟಿ ದ.ಕ ಜಿಲ್ಲೆಗೆ ಪ್ರಥಮ

ಮಂಗಳೂರಿನ ಎಕ್ಸ್ ಪರ್ಟ್ ಪಿ.ಯು. ಕಾಲೇಜಿನ ವಿಜ್ಞಾನ ವಿದ್ಯಾರ್ಥಿ, ಸುಳ್ಯದ ಸುದೇಶ್ ಶೆಟ್ಟಿ ಮತ್ತು ಶ್ರೀಮತಿ ಅಕ್ಷತಾ ಎಸ್‌. ಶೆಟ್ಟಿ ದಂಪತಿಯ ಪುತ್ರ ಸಮನ್ಯು ಎಸ್.ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 598 ಅಂಕ ಗಳಿಸಿ ದ.ಕ. ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ಪಿಯುಸಿ ವಿಜ್ಞಾನ ವಿಭಾಗದಲ್ಲಿ‌ ಸಮನ್ಯು ಶೆಟ್ಟಿ ದ.ಕ ಜಿಲ್ಲೆಗೆ ಪ್ರಥಮ Read More »

ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ತೊಡಿಕಾನ ದೇವಳಕ್ಕೆ 2100 ಕೆ.ಜಿ.ಅಕ್ಕಿ, 200ಕೆ.ಜಿ ಬೆಲ್ಲ ಕೊಡುಗೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜಾತ್ರೋತ್ಸವದ ಸಮಾರಾಧನೆಗೆ ಏ.8ರಂದು ಶ್ರೀ ಹಿಮಕರ ಕಲ್ಲಗದ್ದೆ ಬೆಂಗಳೂರು ಇವರ ನೇತೃತ್ವದಲ್ಲಿ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ವಿದ್ಯಾರಣ್ಯಪುರ ಬೆಂಗಳೂರು ಇಲ್ಲಿಂದ ಸುಮಾರು 2100 ಕೆ.ಜಿ.ಅಕ್ಕಿ, 200ಕೆ.ಜಿ.ಬೆಲ್ಲವನ್ನು ಸಮರ್ಪಿಸಿದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುತ್ತಮೊಟ್ಟೆಯವರು ಶಾಲು ಹೊದಿಸಿ, ಶ್ರೀ ದೇವರ ಪ್ರಸಾದ ಕೊಡಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಯು.ಯಂ.ಕಿಶೋರ್ ಕುಮಾರ್, ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ನೌಕರರಾದ ಶ್ರೀ

ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ತೊಡಿಕಾನ ದೇವಳಕ್ಕೆ 2100 ಕೆ.ಜಿ.ಅಕ್ಕಿ, 200ಕೆ.ಜಿ ಬೆಲ್ಲ ಕೊಡುಗೆ Read More »

ಮಡಪ್ಪಾಡಿ : ಜೋಡು ಪಾಷಾಣಮೂರ್ತಿ ದೈವದ ಹರಕೆ ಕೋಲ

ಮಡಪ್ಪಾಡಿ ಪುಂಡರಿಕ ಗೌಡ ಅವರ ಮನೆಯಲ್ಲಿ ಏಪ್ರಿಲ್.5ರಂದು ಜೋಡು ಪಾಷಾಣ ಮೂರ್ತಿ ದೈವದ ಹರಕೆ ಕೊಲ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬಸ್ಥರು ನೆಂಟರಿಷ್ಟರು,ಊರಿನವರು ಉಪಸ್ಥಿತರಿದ್ದರು.

ಮಡಪ್ಪಾಡಿ : ಜೋಡು ಪಾಷಾಣಮೂರ್ತಿ ದೈವದ ಹರಕೆ ಕೋಲ Read More »

ಏ.9ಕ್ಕೆ ಪಿ.ಯು.ಸಿ ಫಲಿತಾಂಶ

ರಾಜ್ಯ ವಿಧಾನಸಭಾ ಉಪಚುನಾವಣೆಗಳ ನೀತಿಸಂಹಿತೆ ಹಾಗೂ ಕೊನೆ ಕ್ಷಣದಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಇಂದು(ಏ.07) ಪ್ರಕಟವಾಗಬೇಕಿದ್ದ ದ್ವಿತೀಯ ಪಿ.ಯು.ಸಿ ಪರೀಕ್ಷಾ ಫಲಿತಾಂಶವನ್ನು ಏಪ್ರಿಲ್ 09ರಂದು ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನು ಆನ್‌ಲೈನ್ ನಲ್ಲಿ ವೀಕ್ಷಿಸಲು ಅಧಿಕ್ರತ ವೆಬ್ ಸೈಟ್ karresults.nic.in ಭೇಟಿ ನೀಡಿ ಮುಖಪುಟದಲ್ಲಿರುವ ‘Karnataka 2nd PUC Result 2026’ ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟ್ರೇಷನ್‌ ನಂಬ‌ರ್ ಹಾಗೂ ಜನ್ಮದಿನಾಂಕ ನಮೂದಿಸಿ ‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ

ಏ.9ಕ್ಕೆ ಪಿ.ಯು.ಸಿ ಫಲಿತಾಂಶ Read More »

48 ಗಂಟೆ ಎಚ್ಚರದಿಂದ ಇರಲು ಸೂಚನೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಭಾರತದ ರಾಯಭಾರ ಕಚೇರಿಯು 48 ಗಂಟೆಗಳ ಕಾಲ ಜಾಗರೂಕತೆಯಿಂದಿರಲು ಮತ್ತು ಮನೆಯಿಂದ ಹೊರಬರದಂತೆ ತುರ್ತು ಸೂಚನೆ ನೀಡಿದೆ.ಜೊತೆಗೆ ಭಾರತದ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿ ಇರುವಂತೆ ತಿಳಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇರಾನ್ ಮೇಲೆ ಶೀಘ್ರದಲ್ಲಿ ದಾಳಿ ನಡೆಸುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಈ ಮುನ್ನೆಚ್ಚರಿಕೆ ಸೂಚನೆಯನ್ನು ಅಲ್ಲಿನ ಭಾರತೀಯರಿಗೆ ನೀಡಲಾಗಿದೆ.

48 ಗಂಟೆ ಎಚ್ಚರದಿಂದ ಇರಲು ಸೂಚನೆ Read More »

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಅಡ್ತಲೆ ಸ್ಪಂದನ ಗೆಳಯರ ಬಳಗದಿಂದ ಶ್ರಮ ಸೇವೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಏ.5ರಂದು ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ದೇವಸ್ಥಾನದ ಪವಿತ್ರ ತೀರ್ಥ ಮೂಲಗಳಾದ ವಾರಾಣಸಿ ತೀರ್ಥ ಮತ್ತು ಮತ್ಸತೀರ್ಥ ಹಾಗೂ ದೇವಸ್ಥಾನದ ಪರಿಸರದ ಸ್ವಚ್ಛತೆ ಸಲುವಾಗಿ ಬ್ರಹತ್ ಕರಸೇವೆ ನಡೆಯಿತು.ಈ ಕರಸೇವೆಯಲ್ಲಿ ಸ್ಪಂದನ‌ ಗೆಳೆಯರ ಬಳಗ ಅಡ್ತಲೆ ತಂಡದವರು ಭಾಗವಹಿಸಿದರು. 18 ಗ್ರಾಮಗಳ ಸುಮಾರು 500ಕ್ಕೂ ಮಿಕ್ಕಿ ಕರಸೇವಕರು ಭಾಗವಹಿಸಿದರು‌.

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಅಡ್ತಲೆ ಸ್ಪಂದನ ಗೆಳಯರ ಬಳಗದಿಂದ ಶ್ರಮ ಸೇವೆ Read More »

error: Content is protected !!
Scroll to Top