ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಏ.20ರ ತನಕ ನಡೆಯಲಿದ್ದು ಕೊನೆ ಹಂತದ ತಯಾರಿಗಾಗಿ ಸಮಾಲೋಚಿಸಲು ನಾಳೆ ದಿನಾಂಕ 10-04-2026 ನೇ ಶುಕ್ರವಾರ ಪೂ 10:00ಕ್ಕೆ ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಮತ್ತು ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳ ತುರ್ತು ಸಭೆ ದೇವಳದ ಅಕ್ಷಯ ಮಂದಿರದಲ್ಲಿ ಕರೆಯಲಾಗಿದೆ.ಸಭೆಯಲ್ಲಿ ಎಲ್ಲರೂ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಕೊಳಲುಮೂಲೆ,ಹಾಗೂ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
ನಾಳೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಕೊನೆಯ ಹಂತದ ತಯಾರಿಗಾಗಿ ಸಮಾಲೋಚನಾ ಸಭೆ














































