ಅಜ್ಜಾವರ : ಆದರ್ಶ ಮಹಿಳೆಯಾಗು ಕ್ರತಿ ಬಿಡುಗಡೆ
ಅಜ್ಜಾವರದ ಚೈತನ್ಯ ಸೇವಾಶ್ರಮಕ್ಕೆ ಅರಂಬೂರಿನ ವೇದಪಾಠಶಾಲೆಯ ಮುಖ್ಯಸ್ಥರಾದ ದಿನೇಶ್ ಭಾರದ್ವಾಜ ಹಾಗೂ ಅಮೇರಿಕದಲ್ಲಿರುವ ಖ್ಯಾತ ವೈದ್ಯೆ ಅಜ್ಜಾವರದ ಚೈತನ್ಯ ಆಶ್ರಮದ ಅಭಿಮಾನಿ ಡಾ.ಜ್ಯೋತಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 212 ಕ್ರತಿ ಮಾಲೆ ಆದರ್ಶ ಮಹಿಳೆಯಾಗು ವನ್ನು ಡಾ.ಜ್ಯೋತಿ ಬಿಡುಗಡೆಗೊಳಿಸಿದರು. ಡಾ.ಜ್ಯೋತಿಯವರು ಮಾಡುವ ಧರ್ಮಜಾಗೃತಿ ಕಾರ್ಯವನ್ನು ಮೆಚ್ಚಿದ ಸ್ವಾಮೀಜಿಯವರು ಅವರನ್ನು ಸನ್ಮಾನಿಸಿದರು. ವೇದ ಪಾಠ ಶಾಲೆಯ ಪ್ರಾಚಾರ್ಯರಾದ ವೆಂಕಟೇಶ ಶಾಸ್ತ್ರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಜ್ಜಾವರ : ಆದರ್ಶ ಮಹಿಳೆಯಾಗು ಕ್ರತಿ ಬಿಡುಗಡೆ Read More »