Uncategorized

ಕಾಂಗ್ರೆಸ್ ಮುಖಂಡನ ಮೇಲೆ ಗುಂಡು ಹಾರಾಟ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರ ಮೇಲೆ ಫೆ. 4ರ ಮಂಗಳವಾರ ಅನಂತಾಡಿಯಲ್ಲಿ ಗುಂಡು ಹಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಫೈರಿಂಗ್ ನಡೆಯಲು ಕಾರಣ ಏನೆಂದು ತಿಳಿದು ಬಂದಿಲ್ಲ ಚಿತ್ತರಂಜನ್ ಶೆಟ್ಟಿ ಅನಂತಾಡಿಗೆ ಯಾಕೆ ಹೋಗಿದ್ದರು ಎಂಬ ವಿಚಾರವೂ ತಿಳಿದು ಬಂದಿಲ್ಲ.ಮಿಸ್ ಫೈಯರ್ ಎಂಬ ಮಾಹಿತಿ ಇದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ಅವರೇ ಹೋಗಿ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಮುಖಂಡನ ಮೇಲೆ ಗುಂಡು ಹಾರಾಟ Read More »

ಕಾಂತಮಂಗಲ : ಶ್ರದ್ಧಾ ಭಕ್ತಿಯಿಂದ ನಡೆದ ಗುತ್ಯಮ್ಮ ದೇವಿಯ ವಾರ್ಷಿಕೋತ್ಸವ,ಮತ್ತೆ ಒಂದಾದ ಡಾ.ಕೆ.ವಿ ಚಿದಾನಂದ ಮತ್ತು ಡಾ.ಕೆ.ವಿ ರೇಣುಕಾಪ್ರಸಾದ್ ಸಹೋದರರು!

ಡಾ.ಕೆ.ವಿ ರೇಣುಕಾಪ್ರಸಾದ್ ಧರ್ಮದರ್ಶಿಯಾಗಿರುವ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ ಶ್ರದ್ದಾ ಭಕ್ತಿಯಿಂದ ವೈಭಯುತವಾಗಿ ಜ. 31ರಂದು ನಡೆಯಿತು.ಬೆಳಿಗ್ಗೆ ನವಗ್ರಹ ಹೋಮ, ಚಂಡಿಕಾ ಹೋಮ ನಡೆದು ಪೂರ್ಣಾಹುತಿ ನಂತರ ಮಹಾಮಂಗಳಾರತಿ,ಪ್ರಸಾದ ವಿತರಣೆಯಾಗಿ ಮಧ್ಯಾಹ್ನ 1.00ರಿಂದ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಗಂಟೆ 5.00ರಿಂದ ರಂಗ ಪೂಜೆ, ಪ್ರಸನ್ನ ಪೂಜೆ, ಪ್ರಾರ್ಥನೆ,ಪ್ರಸಾದ ವಿತರಣೆ ನಡೆಯಿತು.ಸಾವಿರಾರು ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ದೇವಿಯ ಗಂಧ ಪ್ರಸಾದವನ್ನು ಸ್ವೀಕರಿಸಿದರು.ಈ ಬಾರಿ ಗುತ್ಯಮ್ಮ ದೇವಿ ಕ್ಷೇತ್ರಕ್ಕೆ ಡಾ.ಕೆ.ವಿ.ಚಿದಾನಂದ ಹಾಗೂ

ಕಾಂತಮಂಗಲ : ಶ್ರದ್ಧಾ ಭಕ್ತಿಯಿಂದ ನಡೆದ ಗುತ್ಯಮ್ಮ ದೇವಿಯ ವಾರ್ಷಿಕೋತ್ಸವ,ಮತ್ತೆ ಒಂದಾದ ಡಾ.ಕೆ.ವಿ ಚಿದಾನಂದ ಮತ್ತು ಡಾ.ಕೆ.ವಿ ರೇಣುಕಾಪ್ರಸಾದ್ ಸಹೋದರರು! Read More »

ಪ್ರೇತ ಕಾಟ ಅಧಿಕವಾಗಿದೆಯೆಂದು ರಸ್ತೆ ಬಂದ್ !

ಪ್ರೇತ ಕಾಟ ಅಧಿಕವಾಗಿದೆ ಎಂದು ಅವುಗಳ ಉಚ್ಛಾಟನೆಗಾಗಿ ಮಂಗಳೂರು ನಗರದ ಕೊಟ್ಟಾರ ಸಮೀಪ ಬುಧವಾರ ಮಧ್ಯರಾತ್ರಿ ರಸ್ತೆ ಸಂಚಾರವನ್ನೇ ನಿಷೇಧ ಮಾಡಲಾಗಿತ್ತು!ಇಲ್ಲಿನ ಅಬ್ಬಕ್ಕನಗರ ಭಾಗದಲ್ಲಿ ಪ್ರೇತಕಾಟ ಅಧಿಕವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಇದರಂತೆ ತಾಂಬೂಲ ಪ್ರಶ್ನೆ ಇಟ್ಟು ಪರಿಶೀಲಿಸಿದಾಗ ಉಚ್ಛಾಟನೆ ಕ್ರಮ ಮಾಡಬೇಕು ಎಂದು ತಿಳಿಸಲಾಗಿತ್ತು. ಇದರಂತೆ ಉಚ್ಚಾಟನೆ ಕ್ರಮವನ್ನು ಬುಧವಾರ ರಾತ್ರಿ ಮಾಡಲಾಗಿದೆ. ದರ್ಶನ ಸೇವೆ ನಡೆಸಿದ ಬಳಿಕ ಈ ಕ್ರಮ ನೆರವೇರಿದೆ. ಈ ಸಂದರ್ಭ ಜನರ ಹಿತದೃಷ್ಟಿಯಿಂದ ರಸ್ತೆ ಸಂಚಾರವನ್ನು ಸ್ಥಳೀಯರೇ ನಿರ್ಬಂಧಿಸಿದ್ದರು.

ಪ್ರೇತ ಕಾಟ ಅಧಿಕವಾಗಿದೆಯೆಂದು ರಸ್ತೆ ಬಂದ್ ! Read More »

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಲ ಬೆಂಗಳೂರು ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಆಯ್ಕೆ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಇಂದು (ಜ.28) ಚುನಾವಣೆ ನಡೆದಿದ್ದು, ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.ಪ್ರಸ್ತುತ ಚಂದ್ರ ಕೋಲ್ಟಾರು ರವರು ದ.ಕ.ಜಿಲ್ಲಾ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಲ ಬೆಂಗಳೂರು ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಆಯ್ಕೆ Read More »

ರಿಕ್ಷಾ ಚಾಲಕನ ಕೊಲೆಗೈದು ಬೆತ್ತಲೆ ಮಾಡಿ ಎಸೆದ ಒರ್ವ ಆರೋಪಿಯ ಬಂಧನ

ಆಟೋ ಚಾಲಕನನ್ನು ಮೂವರು ಸ್ನೇಹಿತರು ಸೇರಿ ಹಲ್ಲೆ ನಡೆಸಿ ಕೊಲೆ ಮಾಡಿ ಬಳಿಕ ಶವವನ್ನು ಶಿರಾಡಿ ಘಾಟ್ ನಲ್ಲಿ ಬೆತ್ತಲೆ ಮಾಡಿ ಶವ ಎಸೆದು ಸಾಕ್ಷ್ಯನಾಶ ಮಾಡಲು ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಮೂವರು ಹಂತಕರು ಕೊಲೆಗೆ ಬಳಸಿದ ಬಟ್ಟೆಗಳನ್ನು ಎಸೆದು ಸ್ನಾನ ಮಾಡಿ ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಒರ್ವ ಆರೋಪಿಯನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಹಾಸನ ಜಿಲ್ಲೆಯ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮದ ಆಟೋಚಾಲಕ ಶಿವಕುಮಾರ್ (36) ಎಂಬಾತನು ಸ್ನೇಹಿತರಾದ

ರಿಕ್ಷಾ ಚಾಲಕನ ಕೊಲೆಗೈದು ಬೆತ್ತಲೆ ಮಾಡಿ ಎಸೆದ ಒರ್ವ ಆರೋಪಿಯ ಬಂಧನ Read More »

ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ,ಉಪಾಧ್ಯಕ್ಷರಾಗಿ ಡಾ.ಲಕ್ಷ್ಮೀಶ ಕಲ್ಲುಮುಟ್ಲು ಆಯ್ಕೆ

ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು (ಬುಧವಾರ) ನಡೆದಿದ್ದು ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ,ಉಪಾಧ್ಯಕ್ಷರಾಗಿ ಯುವ ವೈದ್ಯ ಡಾ.ಲಕ್ಷ್ಮೀಶ ಕಲ್ಲುಮುಟ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ,ಉಪಾಧ್ಯಕ್ಷರಾಗಿ ಡಾ.ಲಕ್ಷ್ಮೀಶ ಕಲ್ಲುಮುಟ್ಲು ಆಯ್ಕೆ Read More »

ಕಡಬ ಠಾಣೆಯಲ್ಲಿ ಹಿಂದು ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ರೌಡಿಶೀಟರ್ ರದ್ದುಗೋಳಿಸಿದ ಹೈಕೋರ್ಟ್

ಕಡಬ ತಾಲೂಕಿನ ಮರ್ಧಾಳ ಹಿಂದೂ ಕಾರ್ಯಕರ್ತರಾದ ವಿನುತ್ ಕೆ ಮತ್ತು ಶ್ರೀಕರ ಕಂಪ ಇವರ ಮೇಲೆ ದಾಖಲಾಗಿದ್ದ ರೌಡಿಶೀಟರ್ ನ್ನು ಕರ್ನಾಟಕದ ಉಚ್ಚ ನ್ಯಾಯಾಲಯ ರದ್ದುಗೋಳಿಸಿ ಆದೇಶ ಮಾಡಿದೆ.ಅರ್ಜಿದಾರರ ಪರ ಹೈಕೋರ್ಟ್ ನ್ಯಾಯವಾದಿ ಬಿ ವಿನೋದ್ ಕುಮಾರ್ ವಾದ ಮಂಡಿಸಿದರು.

ಕಡಬ ಠಾಣೆಯಲ್ಲಿ ಹಿಂದು ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ರೌಡಿಶೀಟರ್ ರದ್ದುಗೋಳಿಸಿದ ಹೈಕೋರ್ಟ್ Read More »

ಉಗುರು ಕಚ್ಚುವುದರಿಂದ ದೇಹದ ಮೇಲೆ ಬೀರುವ ಪರಿಣಾಮಗಳೇನು ? ಇಲ್ಲಿದೆ ಮಾಹಿತಿ!

ಕೆಲವರು ಉಗುರು ಕಚ್ಚುವುದನ್ನು ನಾವು ನೋಡುತ್ತಿರುತ್ತೇವೆ.ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಕರೆಯಲಾಗುತ್ತದೆ.ಪದೇ ಪದೇ ಉಗುರು ಕಚ್ಚುವುದರಿಂದ, ಅವುಗಳಲ್ಲಿ ಇರುವ ಬ್ಯಾಕ್ಟಿರಿಯಾಗಳು ಬೆರಳುಗಳ ಮೂಲಕ ಬಾಯಿಗೆ ಹೋಗುತ್ತವೆ. ಇದು ಹೊಟ್ಟೆ ಮತ್ತು ಕರುಳಿನ ಸೋಂಕುಗಳಿಗೆ ಕಾರಣವಾಗಬಹುದು. ಉಗುರು ಕಚ್ಚುವಿಕೆಯು ಬೆರಳುಗಳ ಹೊರಚರ್ಮವನ್ನು ಹಾನಿಗೊಳಿಸುತ್ತದೆ. ಉಗುರುಗಳ ಸುತ್ತಲೂ ಹುಣ್ಣುಗಳನ್ನು ಉಂಟುಮಾಡುತ್ತದೆ. ಸ್ವಚ್ಛವಿಲ್ಲದ ಉಗುರುಗಳನ್ನು ಬಾಯಿಗೆ ಹಾಕಿಕೊಂಡರೆ ಸೋಂಕು ಉಂಟಾಗುತ್ತದೆ. ಇದರಿಂದ ಆರೋಗ್ಯ ಕೇಡುವ ಸಾಧ್ಯತೆ ಹೆಚ್ಚಾಗಿರುತ್ತದೆ.ಈ ಕಾರಣದಿಂದ ಉಗುರು ಕಚ್ಚದಿರುವುದೇ ಸೂಕ್ತವಾಗಿದೆ.ಉಗುರು ಕಚ್ಚದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

ಉಗುರು ಕಚ್ಚುವುದರಿಂದ ದೇಹದ ಮೇಲೆ ಬೀರುವ ಪರಿಣಾಮಗಳೇನು ? ಇಲ್ಲಿದೆ ಮಾಹಿತಿ! Read More »

error: Content is protected !!
Scroll to Top