Uncategorized

ಅರಂತೋಡು ತೊಡಿಕಾನ ರಸ್ತೆ ಪರ್ನೋಜಿ‌ ಸಮೀಪ ಕುಸಿತ!

ಅರಂತೋಡು ತೊಡಿಕಾನ ದ ಪರ್ನೋಜಿ ಸಮೀಪ ಮುಖ್ಯ ರಸ್ತೆಯ ತಲಭಾಗದಲ್ಲಿ ಭೂಕುಸಿತವಾಗಿದ್ದು ಅಪಾಯ ಎದುರಾಗಿದೆ.ವಾಹನ ಸವಾರರು ಗಮನ ಹರಿಸಬೇಕಾಗಿದೆ.

ಅರಂತೋಡು ತೊಡಿಕಾನ ರಸ್ತೆ ಪರ್ನೋಜಿ‌ ಸಮೀಪ ಕುಸಿತ! Read More »

ಮರ್ಕಂಜ : ಪನ್ನೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಮೊತ್ತ 45,000 ಸಹಾಯಧನ‌ ಹಸ್ತಾಂತರ

ಸಂಪಾಜೆ ವಲಯದ ಮರ್ಕಂಜ ಗ್ರಾಮದ ಪನ್ನೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಮೊತ್ತ 45,000 ಸಹಾಯಧನವನ್ನು ಸುಳ್ಯ ತಾಲೂಕಿನ ಮಾನ್ಯ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಾಂತಪ್ಪ ರೈ ಮತ್ತು ಸಮಿತಿಯ ಸದಸ್ಯರುಗಳಾದ ರಾಘವ ಗೌಡ ಕಂಜಿಪಿಲಿ ಗೋವಿಂದ ಅಳವುಪಾರೆ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಕುಂಞಮು ಕಾರ್ಯದರ್ಶಿಯಾದ ರವಿ ಮತ್ತು ಸರ್ವ ಸದಸ್ಯರು ಹಾಗೂ ವಲಯದ ಮೇಲ್ವಿಚಾರಕರಾದ ಹರೀಶ್ ಆಚಾರ್ಯ

ಮರ್ಕಂಜ : ಪನ್ನೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಮೊತ್ತ 45,000 ಸಹಾಯಧನ‌ ಹಸ್ತಾಂತರ Read More »

ಜೂ.15ರಿಂದ ಜೂ.18ರ ತನಕ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಸುಳ್ಯದ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಜೂನ್ 15ರಿಂದ ಜೂ.18ರ ತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಕಾಮತ್,ಧರ್ಮದರ್ಶಿ ಉಮೇಶ್ ಪಿ.ಕೆ,ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ತಿಳಿಸಿದ್ದಾರೆ.ಅವರು ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಇತ್ತೀಚೆಗೆ ಸ್ಥಳದ ಮತ್ತು ದೈವಗಳ ಬಗ್ಗೆ ಪ್ರಶ್ನಾಚಿಂತನೆ ಇಟ್ಟಾಗ ದೈವಗಳಿಗೆ ನೂತನ ಶಿಲಾಮಯ ಗುಡಿ ನಿರ್ಮಿಸಬೇಕೆಂಬ ಚಿಂತನೆ ಮೂಡಿ ಬಂದು ಆ

ಜೂ.15ರಿಂದ ಜೂ.18ರ ತನಕ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

ಪರಿವಾರಕಾನ : ತ್ಯಾಜ್ಯ ಎಸೆದವರಿಗೆ ದಂಡ

ಅಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಪರಿವಾರ ಕಾನದಲ್ಲಿ ತ್ಯಾಜ್ಯ ಎಸೆದವರಿಗೆ ಗ್ರಾಮ ಪಂಚಾಯತಿ ವತಿಯಿಂದ 3000 ರೂಪಾಯಿ ದಂಡನೆ ವಿಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಎಸೆದ ತ್ಯಾಜ್ಯಗಳನ್ನು ಪರಿಶೀಲಿಸಿದಾಗ ಲಭ್ಯವಾದ ವಿಳಾಸದಂತೆ ದಂಡಪಾವತಿಸುವಂತೆ ತಿಳಿಸಲಾಯಿತು. ಇದಕ್ಕೆ ಸಹಕರಿಸದಿದ್ದಾಗ ಸುಳ್ಳದ ಪೋಲೀಸ್ ಸಬ್ಇನ್ ಸ್ಪೆಕ್ಟರ್ ಸಂತೋಷ್ ಕುಮಾರ್ ರವರ ಸಹಕಾರದೊಂದಿಗೆ ದಂಡನೆಯನ್ನು ವಿಧಿಸಲಾಗಿದೆ. ಮತ್ತು ಈ ಕಾರ್ಯಾಚರಣೆಯು ನಿರಂತರವಾಗಿ ಮುಂದುವರಿಯಲಿದೆ ಎಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಎಂ ಆರ್ ಅವರು ತಿಳಿಸಿದ್ದಾರೆ

ಪರಿವಾರಕಾನ : ತ್ಯಾಜ್ಯ ಎಸೆದವರಿಗೆ ದಂಡ Read More »

ಸಾಹಿತ್ಯ ನಿಧಿ ಪ್ರಕಾಶನದ ವತಿಯಿಂದ ಸ್ವ ರಚಿತ – ಕವನಗಳ ಆಹ್ವಾನ

ಶ್ರೀ ನಿಮಿಷಾಂಭ ದೇವಿಯ ಕೃಪಾಶೀರ್ವಾದದಿಂದ“ನಿಮಿಷಾಂಭ ದೇವಿ ಕವನ ಸಂಕಲನ”ಕ್ಕಾಗಿಭಕ್ತ ಕವಿಗಳಿಂದ ಸ್ವರಚಿತ ಕನ್ನಡ ಕವನಗಳನ್ನು ಸಾಹಿತ್ಯ ನಿಧಿ ಪತ್ರಿಕೆ ಮತ್ತು ಪ್ರಕಾಶನ ಆಹ್ವಾನ ಮಾಡಲಾಗಿದೆ.ವಿಷಯ:ದೇವಿಯ ಮಹಿಮೆ • ಭಕ್ತಿ • ಕ್ಷೇತ್ರ ವೈಭವ • ಭಕ್ತರ ಅನುಭವನಿಯಮಗಳು:

ಸಾಹಿತ್ಯ ನಿಧಿ ಪ್ರಕಾಶನದ ವತಿಯಿಂದ ಸ್ವ ರಚಿತ – ಕವನಗಳ ಆಹ್ವಾನ Read More »

ಗೂನಡ್ಕ : ರಸ್ತೆ ಬದಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ

ಮಾಣಿ ಮೈಸೂರು ರಸ್ತೆಯ ಗೂನಡ್ಕ ಸಜ್ಜನ ಸಭಾಭವನ ಬಳಿ ಮೇ.26ರಂದು ರಾತ್ತಿ ಕಾಡಾನೆಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಹಿನ್ನಲೆಯಲ್ಲಿ ಸಾರ್ವಜನಿಕರು,ವಾಹನ ಸವಾರರು ಎಚ್ಚರ ವಹಿಸಬೇಕೆಂದು ತಿಳಿಸಲಾಗಿದೆ.

ಗೂನಡ್ಕ : ರಸ್ತೆ ಬದಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ Read More »

ಬೆದ್ರುಪಣೆ ಸಮೀಪ ಕಾಡಾನೆ ಮರಿ ಸಾವು

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ತಲೆ ಬೆದ್ರುಪಣೆ ಸಮೀಪ ಕಾಡಾನೆಯ ಮರಿಯೊಂದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.ಕಾಡಾನೆಗಳ ಕಾದಾಟದಿಂದ ಮರಿಯಾನೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಬೆದ್ರುಪಣೆ ಸಮೀಪ ಕಾಡಾನೆ ಮರಿ ಸಾವು Read More »

ಸವಣೂರು ಶ್ರೀ ಸೀತಾರಾಮ ರೈ ಕಸ್ತೂರಿ ದಂಪತಿಗಳನ್ನು ಗೌರವಿಸಿದ ಡಾ.ದೇವಿಪ್ರಸಾದ್ ಕಾನತ್ತೂರು ದಂಪತಿಗಳು

ಸವಣೂರು ಶ್ರೀ ಸೀತಾರಾಮ ರೈ ಕಸ್ತೂರಿ ದಂಪತಿಗಳಿಗೆ 50ನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನದಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ದಂಪತಿಗಳು ಗೌರವಿಸಿದರು.

ಸವಣೂರು ಶ್ರೀ ಸೀತಾರಾಮ ರೈ ಕಸ್ತೂರಿ ದಂಪತಿಗಳನ್ನು ಗೌರವಿಸಿದ ಡಾ.ದೇವಿಪ್ರಸಾದ್ ಕಾನತ್ತೂರು ದಂಪತಿಗಳು Read More »

ಪೆರಾಜೆ : ಬೈಕ್ ಗಳ ನಡುವೆ ಭೀಕರ ಅಪಘಾತ,ಓರ್ವ ಸಾವು,ಇಬ್ಬರು ಗಂಭೀರ

ಪೆರಾಜೆ ಸಮೀಪ ಬೈಕ್ ಗಳ ಮಧ್ಯೆ ನಡುವೆ ಅಪಘಾತ ಸಂಭವಿಸಿ ಒಬ್ಬರು ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ಮೇ .24ರಂದು ಸಂಜೆ ವರದಿಯಾಗಿದೆಮ್ರತಪಟ್ಟ ವ್ಯಕ್ತಿಯನ್ನು ಕೇರಳ ನಿವಾಸಿ ಮುಂದನಾಥನ್ ಪ್ರದೀಪನ್ ಎಂದು ಗುರುತಿಸಲಾಗಿದೆ.ಗಾಯಾಳುಗನ್ನು‌ಆಸ್ಪತ್ರೆಗೆ ಸಾಗಿಸಲಾಗಿದೆ. ರವಿಕುಮಾರ್ ಚಡಾವು ಸಂಪಾಜೆ ಮತ್ತುಸುಮನ್ ಆಲಡ್ಕ ಸಂಪಾಜೆಗಂಭೀರ ಗಾಯಗೊಂಡವರು ಎಂದು ತಿಳಿದು ಬಂದಿದೆ.

ಪೆರಾಜೆ : ಬೈಕ್ ಗಳ ನಡುವೆ ಭೀಕರ ಅಪಘಾತ,ಓರ್ವ ಸಾವು,ಇಬ್ಬರು ಗಂಭೀರ Read More »

ಮಹಾಮಾರಿ ಎಬೋಲಾ ರೋಗ ಭೀತಿ.ಆರೋಗ್ಯ ಇಖಾಖೆಯಿಂದ ಕಟ್ಟು ನಿಟ್ಟಿನ ಕ್ರಮ!

ಆಫ್ರಿಕಾ ದೇಶಗಳಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ಪತ್ತೆಯಾಗಿಲ್ಲವಾದರೂ, ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಎಬೋಲಾ ಪೀಡಿತ ದೇಶಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು ಮತ್ತು ರೋಗಲಕ್ಷಣ ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಮಹಾಮಾರಿ ಎಬೋಲಾ ರೋಗ ಭೀತಿ.ಆರೋಗ್ಯ ಇಖಾಖೆಯಿಂದ ಕಟ್ಟು ನಿಟ್ಟಿನ ಕ್ರಮ! Read More »

error: Content is protected !!
Scroll to Top