Uncategorized

ಭಾರೀ ಮಳೆಯಿಂದ ಅರಂತೋಡು ತೊಡಿಕಾನ ರಸ್ತೆ ಬದಿ ಕುಸಿತ

ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಅರಂತೋಡು ತೊಡಿಕಾನ‌ ಸಂಪರ್ಕ‌ ರಸ್ತೆಯ ಅಡ್ಯಡ್ಕ ಸಮೀಪ‌ ರಸ್ತೆ ಕುಸಿತಗೊಂಡಿದೆ.ಇದರಿಂದ ಈ ರಸ್ತೆಯ ಮೂಲಕ ಸಂಚಾರರಿಸುವ ಜನರು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ತೆರಳುವ ಭಕ್ತರು ಗಮನ ಹರಿಸಬೇಕೆಂದು ತಿಳಿಸಲಾಗಿದೆ.

ಭಾರೀ ಮಳೆಯಿಂದ ಅರಂತೋಡು ತೊಡಿಕಾನ ರಸ್ತೆ ಬದಿ ಕುಸಿತ Read More »

ಡೆಂಗ್ಯೂ ಜ್ವರದಿಂದ ಕಾಲೇಜು ವಿದ್ಯಾರ್ಥಿ ಸಾವು

ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜ್ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೇ.30 ರಂದು ಮೃತಪಟ್ಟಿದ್ದಾನೆ.ಬೆಳ್ತಂಗಡಿ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟು, ಅಮ್ಮಾಡಿ ಗ್ರಾಮದ ಕೆಂಪುಗುಡ್ಡೆ ನಿವಾಸಿ ಗೋಪಾಲ ಗೌಡ ಮತ್ತು ಸುಪ್ರಭಾ ದಂಪತಿಯ ಮಗ ಹಿತೇಶ್ (17) ಡೆಂಗ್ಯೂ ಜ್ವರದಿಂದ ಪ್ಲೇಟೈಟ್ ಸಂಖ್ಯೆ ಕಡಿಮೆಯಾಗಿ ಚಿಕಿತ್ಸೆ ಫಲಿಸದೆ ಮೇ.30 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕನಾಗಿದ್ದಾನೆ.

ಡೆಂಗ್ಯೂ ಜ್ವರದಿಂದ ಕಾಲೇಜು ವಿದ್ಯಾರ್ಥಿ ಸಾವು Read More »

ಭಾರೀ ಸುರಿಯುತ್ತಿರುವ ಹಿನ್ನಲೆಯಲ್ಲಿ ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಸುರಿಯುತ್ತಿರುವ ಹಿನ್ನಲೆಯಲ್ಲಿ ನಾಳೆ (ಮೇ 31 ಶನಿವಾರ) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿಲ್ಲ. ಜಿಲ್ಲೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದ್ದು ಸಾರ್ವಜನಿಕರು ಎಚ್ಚರ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಭಾರೀ ಸುರಿಯುತ್ತಿರುವ ಹಿನ್ನಲೆಯಲ್ಲಿ ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ Read More »

ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಸಾವು

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸಹಾಯಕ ಪವರ್ ಮ್ಯಾನ್ ವಿಜೇಶ್ ಜೈನ್ ವಿದ್ಯುತ್ ಲೈನ್ ನಲ್ಲಿ ವಿದ್ಯುತ್ ಶಾಕ್ ಹೊಡೆದು ಮೇ 30ರಂದು ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ಓಡಿನ್ನಾಳ ಗ್ರಾಮದ ಕೆಂಜಿಲ ಮನೆ ನಿವಾಸಿ ಸುಕುಮಾ‌ರ್ ಜೈನ್ ಮತ್ತು ಪೂರ್ಣಿಮಾ ಜೈನ್ ದಂಪತಿಯ ಎರಡನೇ ಮಗ ವಿಜೇಶ್ ಜೈನ್ (27) ಎಂಬವರು ಓಡಿನ್ಮಾಳ ಗ್ರಾಮದ ಕುಮ್ಮುಂಜ ಎಂಬಲ್ಲಿ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆಯಿತು.ಮೃತಪಟ್ಟ ವಿಜೇಶ್ ಜೈನ್ ಶವವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು.

ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಸಾವು Read More »

ಬರೆ ಕುಸಿದು ಬಿದ್ದು ಮೂವರು‌ ಸಾವು

ಉಳ್ಳಾಲ ತಾಲೂಕಿನಲ್ಲಿ ಮನೆ ಮೇಲೆ ಬರೆ ಕುಸಿದು ಬಿದ್ದು ತಾಯಿ ಅಶ್ವಿನಿ ಅವರನ್ನು ರಕ್ಷಣೆ ಮಾಡಲಾಗಿದ್ದು, ಆದರೆ ಇಬ್ಬರು ಮಕ್ಕಳು ಕೂಡಾ ಅಸುನೀಗಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಒಟ್ಟು ಮೂವರ ರಕ್ಷಣೆ ಮಾಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮಂಜನಾಡಿ ಗ್ರಾಮದ ಉರುಮನೆ ಮದಪಾಡಿಯಲ್ಲಿ ಶುಕ್ರವಾರ (ಮೇ 30) ಮುಂಜಾನೆ ಮನೆಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದ ಬಿದ್ದಿತ್ತು. ತೋಟದ ನಡುವಿರುವ ಮನೆಯ ಮೇಲೆ ಬೃಹತ್ ಮರ ಸಹಿತ ಸುಮಾರು 30

ಬರೆ ಕುಸಿದು ಬಿದ್ದು ಮೂವರು‌ ಸಾವು Read More »

ಕೆ.ಪಿ‌.ಸಿ.ಸಿ ವಕ್ತಾರ ಸ್ಥಾನಕ್ಕೆ ಸವಾದ್ ಗೂನಡ್ಕ ರಾಜೀನಾಮೆ

ಬಂಟ್ವಾಳದ ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣ ಹಾಗೂ ದ.ಕ.ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಕಾಪಾಡುವಲ್ಲಿ ಜಿಲ್ಲೆಯ ಪೊಲೀಸ್‌ ಇಲಾಖೆಯ ನಿರಂತರ ವೈಫಲ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ನಡೆದ ದ.ಕ.ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರ ಸಭೆಯಲ್ಲಿ ಕೆ.ಪಿ.ಸಿ.ಸಿ.ವಕ್ತಾರ ಸ್ಥಾನಕ್ಕೆ ಶೌವಾದ್ ಗೂನಡ್ಕರವರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.ರಾಜ್ಯ ಸರ್ಕಾರವು ದ.ಕ.ಜಿಲ್ಲೆಯ ಶಾಂತಿ, ಸುವ್ಯವಸ್ಥೆಗೆ ವಿಶೇಷ ಆದ್ಯತೆಯನ್ನು ನೀಡಿ ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಹತ್ಯೆಯಾದ ಅಮಾಯಕ ವ್ಯಕ್ತಿ ಅಬ್ದುಲ್ ರಹ್ಮಾನ್ ಕುಟುಂಬಸ್ಥರಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡುವ

ಕೆ.ಪಿ‌.ಸಿ.ಸಿ ವಕ್ತಾರ ಸ್ಥಾನಕ್ಕೆ ಸವಾದ್ ಗೂನಡ್ಕ ರಾಜೀನಾಮೆ Read More »

ಬಸ್ ಚಕ್ರಕ್ಕೆ ತಲೆ ಕೊಟ್ಟು ಆತ್ಮಹತ್ಯೆ

ಕುಶಾಲನಗರದಲ್ಲಿ ವ್ಯಕ್ತಿಯೊಬ್ಬರು ಬಸ್ಸಿನ ಚಕ್ರಕ್ಕೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸೋಮವಾರಪೇಟೆ ಶಾಂತಳ್ಳಿ ಗ್ರಾಮದ ಸೋಮಶೇಖರ್ (45) ಆತ್ಮ ಹತ್ಯೆ ಮಾಡಿಕೊಂಡ ವ್ಯಕ್ತಿ.ಸೋಮವಾರಪೇಟೆ ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವಿವಾಹಿತನಾದ ಈತ ಒಂದು ವಾರದಿಂದ ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ತಂಗುತ್ತಿದ್ದ .ಗುರುವಾರ ಸಂಜೆ ನಿಲ್ದಾಣಕ್ಕೆ ಬರುತ್ತಿದ್ದ ಬಸ್ ಮುಂದೆ ಬೀಳಲು ಪ್ರಯತ್ನ ನಡೆಸಿ ವಿಫಲಗೊಂಡಿದ್ದ. ಇಂದಿರಾ ಕ್ಯಾಂಟಿನ್ ಮುಂಭಾಗ ರಾತ್ರಿ 8 ಗಂಟೆಗೆ ಮತ್ತೆ ಈತ ಬಸ್ ಕೆಳಗೆ ಹಾರಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿರುವುದಾಗಿ ಸಂಚಾರ ಪೊಲೀಸ್ ಠಾಣೆ

ಬಸ್ ಚಕ್ರಕ್ಕೆ ತಲೆ ಕೊಟ್ಟು ಆತ್ಮಹತ್ಯೆ Read More »

ಭಾರೀ ಮಳೆ ಹಿನ್ನಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದ.ಕ.ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಮುನ್ನೆಚ್ಚರಿಕೆಯ ಸಲುವಾಗಿ ದ.ಕ.ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ,ಸರಕಾರಿ ಅನುದಾನಿತ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸರಕಾರಿ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಲಾಗಿರುವುದಾಗಿ ತಿಳಿದು ಬಂದಿದೆ

ಭಾರೀ ಮಳೆ ಹಿನ್ನಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಅಂತಿಮ‌ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಕೆಲವತ್ತಿ ಗ್ರಾಮದಿಂದ ವರದಿಯಾಗಿದೆ.ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನ ಕೆ.ವಿ (21) ಮೃತ ವಿದ್ಯಾರ್ಥಿನಿ. ಕವನ ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಮೂರು ವಿಷಯಗಳ ಪರೀಕ್ಷೆ ಬರೆದಿದ್ದ ಕವನ ಇನ್ನೂ ಮೂರು ಪರೀಕ್ಷೆಗಳನ್ನು ಬರೆಯಬೇಕಿತ್ತು. ಸಂಜೆ ಮನೆಗೆ ನೀರು ತಂದ ಕವನಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಈ

ಅಂತಿಮ‌ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು Read More »

ದ.ಕ ಜಿಲ್ಲೆಗೆ ದಕ್ಷ ಐ.ಪಿ.ಎಸ್ ಅಧಿಕಾರಿಗಳ ವರ್ಗಾವಣೆ,ಅವರು ಯಾರು ಓದಿ ಇಲ್ಲಿದೆ ಮಾಹಿತಿ!

ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು ಎಂಟ್ರಿ ಪಡೆದುಕೊಂಡಿದ್ದಾರೆ. ಈಗಿರುವ ಎಸ್ಪಿ ಯತೀಶ್ ಹಾಗೂ ಕಮೀಷನರ್ ಅಗರ್’ವಾಲ್ ವರ್ಗಾವಣೆಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.2017ರಲ್ಲಿ ದಕ ಎಸ್ಪಿಯಾಗಿ ಹೊಸ ಭಾಷ್ಯ ಬರೆದಿದ್ದ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಮಂಗಳೂರು ಕಮೀಷನರ್ ಆಗಿ ಬರುತ್ತಿದ್ದಾರೆ. ಅದೇ ರೀತಿ ಉಡುಪಿಯ ಎಸ್ಪಿಯಾಗಿರುವ ಅರುಣ್ ಕುಮಾರ್ ಅವರು ದಕ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.ದಕ ಎಸ್ಪಿಯಾಗಿದ್ದ ಸಂದರ್ಭ ಅವರ ಕಾರ್ಯವೈಖರಿಯೇ ಇದಕ್ಕೆ ಕಾರಣ. ಹಲವು ಕಾರ್ಯಾಚರಣೆಗಳ ಮೂಲಕ ಮನೆಮಾತಾದವರು.ಬೆಳಗಾವಿಗೆ ಎಸ್ಪಿಯಾಗಿ ತೆರಳಿದ ಅವರು,

ದ.ಕ ಜಿಲ್ಲೆಗೆ ದಕ್ಷ ಐ.ಪಿ.ಎಸ್ ಅಧಿಕಾರಿಗಳ ವರ್ಗಾವಣೆ,ಅವರು ಯಾರು ಓದಿ ಇಲ್ಲಿದೆ ಮಾಹಿತಿ! Read More »

error: Content is protected !!
Scroll to Top