ಜುಲೈ 23: ತೆಕ್ಕಿಲ್ ಪ್ರತಿಷ್ಟಾನದ ವತಿಯಿಂದ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50 ನೇ ವರ್ಷದ ಪುಣ್ಯಸ್ಮರಣೆ ಹಾಗೂ ತೆಕ್ಕಿಲ್‌ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ  

ಅರಂತೋಡಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನದ ವತಿಯಿಂದ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ವರ್ಷದ ಪುಣ್ಯಸ್ಮರಣೆ ಹಾಗೂ ಸ್ಪೀಕರ್ ಯು.ಟಿ. ಖಾದರ್ ಅವರಗೆ ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ಜು.23ರಂದು ಬೆಳಿಗ್ಗೆ 10 ಗಂಟೆಗೆ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್‌ ತೆಕ್ಕಿಲ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇರಳ ಸರಕಾರದ

Ad Widget . Ad Widget . Ad Widget . . Ad Widget . . Ad Widget .

ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವರಾದ ಅಹಮ್ಮದ್ ದೇವರಕೋವಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ತೆಕ್ಕಿಲ್ ಮಹಮ್ಮದ್ ಹಾಜಿ ಅವರ 50ನೇ ಪುಣ್ಯ ಸ್ಮರಣೆ ಪ್ರಯುಕ್ತ ಪ್ರತಿಷ್ಠಾನದ ವತಿಯಿಂದ ಒಂದು ವರ್ಷದಲ್ಲಿ ಹಮ್ಮಿಕೊಳ್ಳುವ 50 ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ಸಾಧಕ ವಿಧ್ಯಾರ್ಥಿಗಳನ್ಬು ಕರ್ನಾಟಕ

. Ad Widget . Ad Widget . Ad Widget

ಲೋಕಸೇವಾ ಆಯೋಗದ ಮಾಜಿ‌ ಅಧ್ಯಕ್ಷ ಶ್ಯಾಮ್ ಭಟ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕಿ ಭಾಗೀರಥಿ ಮುರಳ್ಯ ಭಾಗವಹಿಸಲಿದ್ದಾರೆ. ಅಭಿನಂದನಾ ಭಾಷಣವನ್ನು ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಎಂ.ಬಿ ಸದಾಶಿವ ಹಾಗೂ ಹಾಗೂ ತೆಕ್ಕಿಲ್ ಮಹಮ್ಮದ್ ಹಾಜಿಯವರ ಅನುಸ್ಮರಣೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಿವೃತ್ತ ಪ್ರಾಶುಪಾಲ ಕೆ.ಆರ್ ಗಂಗಾಧರ ಮಾಡಲಿದ್ದಾರೆ. ಸಭಾಧ್ಯಕ್ಷತೆಯನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ.

ತೆಕ್ಕಿಲ್ ಮೊಹಮ್ಮದ್ ಹಾಜಿ ಅವರ 50ನೇ ಪುಣ್ಯ ಸ್ಮರಣೆ:

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ, ಅರಂತೋಡು ಸಹಿತ ಕರ್ನಾಟಕ ಕೇರಳ ಮತ್ತು ಇತರ ವಿವಿಧ ಭಾಗಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರೀಯಶೀಲರಾಗಿ, ಅವಿಭಕ್ತ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಉದ್ಯಮಿಯಾಗಿ ಸಮಾಜ ಸೇವಕರಾಗಿ ಅನೇಕ ಮಸೀದಿ ಮತ್ತು ಮದರಸಗಳ ಶಾಲೆಗಳ ವಿವಿಧ ಸಂಘ ಸಂಸ್ಥೆಗಳ ಸ್ಥಾಪಕರಾಗಿ, ಸರಕು ಸಾರಿಗೆ, ಮರದ ವ್ಯಾಪಾರಿಯಾಗಿ, ಕಾಡುತ್ಪತಿ ಮತ್ತು ಮರ ಗುತ್ತಿಗೆದಾರರಾಗಿ, ಮಾದರಿ ಕೃಷಿಕರಾಗಿ,

ಜಮೀನುದಾರರಾಗಿ ಊರಿನ ಅಭಿವೃದ್ಧಿಯ ಹರಿಕಾರರಾಗಿದ್ದ ತೆಕ್ಕಿಲ್ ಕುಟುಂಬದ ಹಿರಿಯರು ಜಾತ್ಯತೀತ ಪರಮತ ಸಹಿಷ್ಣು ಆದರ್ಶ ವ್ಯಕ್ತಿತ್ವದ ದಿ.ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಟಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ತೆಕ್ಕಿಲ್ ಕುಟುಂಬಸ್ಥರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಚೊಕ್ಕಾಡಿ, ಅಬ್ದುಲ್ ಖಾದರ್ ಪಟೇಲ್, ಉನೈಸ್ ಪೆರಾಜೆ, ಸಿದ್ದಿಕ್ ಕೊಕ್ಕೊ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top