ಬಸ್ ಹಾಗೂ ಆಟೋ ರಿಕ್ಷಾ ನಡುವೆ ಪುತ್ತೂರಿನ ನೆಹರು ನಗರದಲ್ಲಿ ಮಾ.2ರಂದು ಅಪಘಾತ ಸಂಭವಿಸಿ ಘಟನೆಯಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಹಾಗೂ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೂವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಕುಂಬ್ರ ನಿವಾಸಿ ಜಮೀಲಾ(52.ವ) ಹಾಗೂ ತನ್ನೀರ್ (4 ವ.) ಮೃತರು. ಇನ್ನೂ ಆಟೋರಿಕ್ಷಾ ಚಾಲಕ ಮಹಮ್ಮದ್, ಒರ್ವ ಮಹಿಳೆ ಮತ್ತು ಮಗು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುತ್ತೂರು : ಭೀಕರ ಅಪಘಾತದಲ್ಲಿ ತಾಯಿ ಮಗು ಸಾವು
